ಗಾ೦ದೊಟ್ಯ ಕುಕ್ಯಾನ್ ಕುಟುಂಬದ ಸದಸ್ಯರಿಂದ ಪೂರ್ವ ಸಿದ್ದತೆ
ಕೈಕಂಬ: ತುಳುನಾಡಿನಲ್ಲಿ ಬರುವಂತಹ ಹಬ್ಬಗಳಲ್ಲಿ ಪ್ರಥಮ ಹಬ್ಬ ನಾಗರ ಪಂಚಮಿ ಈ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ.

ಗಾ೦ದೊಟ್ಯ ಕುಕ್ಯಾನ್ ಕುಟುಂಬದ ಸದಸ್ಯರು ನಾಗರಪಂಚಮಿಯ ಮುನ್ನ ದಿನದಂದು ನಾಗದೇವರ ಸುತ್ತಮುತ್ತಲಿನಲ್ಲಿ ಸ್ವಚ್ಚತೆಯನ್ನು ಮಾಡಿ ಪರಿಕರಗಳನ್ನು ತೊಳೆದು ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಿ ನಾಗದೇವರ ತಂಬಿಲಕ್ಕೆ ಪೂರ್ವಸಿದ್ದತೆಯೊಂದಿಗೆ ನಾಗರಪಂಚಮಿಯನ್ನು ಆಚರಿಸಲು ತಯಾರಿ ನಡೆಸುತ್ತಿದ್ದಾರೆ.

