ಕಾರಿಂಜ ಕ್ಷೇತ್ರಕ್ಕೆ ಆಟಿ ಅಮಾವಾಸ್ಯೆ ಪ್ರಯುಕ್ತ ಸಂಸದ,ಶಾಸಕರ ಭೇಟಿ
ಬಂಟ್ವಾಳ: ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲ್ ಹಾಗೂ ಬಂಟ್ಚಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬುಧವಾರ ಆಟಿ ಅಮಾವಾಸ್ಯೆ ಪ್ರಯುಕ್ತ ತಾಲೂಕಿನ ಇತಿಹಾಸ ಪ್ರಸಿದ್ದ ಕಾರಿಂಜ ಶ್ರೀ ಪಾರ್ವತಿ, ಪರಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸುಮಾರು 2 ಕೋಟಿ ರೂ.ವೆಚ್ಚದಲ್ಲಿ ಪ್ರಗತಿಯಲ್ಲಿರುವ ಕ್ಷೇತ್ರದ ಗದಾತೀರ್ಥ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಿಸಿದರು.
ಸಂಸದರು ಹಾಗೂ ಶಾಸಕರ ಭೇಟಿಯ ವೇಳೆ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ,ಕಾವಳಮೂಡೂರು ಗ್ರಾ.ಪಂ.ಅಧ್ಯಕ್ಷ ಅಜಿತ್ ಶೆಟ್ಟಿಕಾರಿಂಜ,ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ,ಅರ್ಚಕರಾದ ನಟರಾಜ್ ಉಪಾಧ್ಯಾಯ, ಮಿಥುನ್ ರಾಜ್ ವೆಂಕಟರಮಣ ಮುಚ್ಛಿನಾಯ, ಬಂಟ್ವಾಳ ಮಂಡಲ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ,ಬುಡಾ ಮಾಜಿ ಅಧ್ಯಕ್ಷ ದೇವದಾಸ್ ಶೆಟ್ಟಿ,ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಸುಲೋಚನ, ಜಿ.ಕೆ.ಭಟ್,ರಾಮಕೃಷ್ಣ ಮಯ್ಯ,ಶಿವಪ್ಪ ಗೌಡ ನಿನ್ನಿಕಲ್ಲು, ಸುದರ್ಶನ್ ಬಜ, ಹರೀಶ್ ಪ್ರಭು, ಪುರುಷೋತ್ತಮ ಶೆಟ್ಟಿ,ರವೀಶ್ ಶೆಟ್ಟಿ ಕರ್ಕಳ, ರವಿರಾಮ ಶೆಟ್ಟಿ,ಸೀತಾರಾಮ ಪೂಜಾರಿ,ಮೋಹನ ಆಚಾರ್ಯ್ಯ,ಗಣೇಶ್ ರೈ ಮಾಣಿ, ದಿನೇಶ್ ನಾಯಕ್
ಹಾಗೂ ವ್ಯವಸ್ಥಾಪನಾ ಸಮಿತಿ ಹಾಗೂ ಗ್ರಾ.ಪಂ.ಸದಸ್ಯರು ಉಪಸ್ಥಿತರಿದ್ದರು.