ಅರಳ ಗ್ರಾ.ಪಂ.ಅದೃಷ್ಟದಾಟದಲ್ಲಿ ಬಿಜೆಪಿ ಬೆಂಬಲಿಗರಿಗೆ ಒಲಿದ ಅಧ್ಯಕ್ಷ ,ಉಪಾಧ್ಯಕ್ಷ ಸ್ಥಾನ
ಬಂಟ್ವಾಳ: ಅರಳ ಗ್ರಾಮಪಂಚಾಯತ್ ನ ಎರಡನೇ ಅವಧಿಗೆ ನೂತನ ಅಧ್ಯಕ್ಷರಾಗಿ ದೇವಕಿ, ಉಪಾಧ್ಯಕ್ಷರಾಗಿ ಚಂದ್ರಹಾಸ್ ಅವರು ಆಯ್ಕೆಯಾಗಿದ್ದಾರೆ. ಒಟ್ಟು 10 ಮಂದಿ ಸದಸ್ಯ ಬಲಹೊಂದಿರುವ ಈ ಗ್ರಾ.ಪಂ.ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಸದಸ್ಯರು ತಲಾ ಐದರಂತೆ ಸಮಬಲವಿದೆ.

ಅಧ್ಯಕ್ಷ ,ಉಪಾಧ್ಯಕ್ಷ ಸ್ಥಾನಕ್ಕೆ ಉಭಯ ಪಕ್ಷಗಳ ಬೆಂಬಲಿತ ಸದಸ್ಯರು ನಾಮಪತ್ರ ಸಲ್ಲಿಸಿದರಿಂದ ನಾಣ್ಯ ಚಿಮ್ಮುಗೆಯ ಮೂಲಕ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅದೃಷ್ಟದಾಟದಲ್ಲಿ ಎರಡು ಸ್ಥಾನಗಳು ಬಿಜೆಪಿ ಬೆಂಬಲಿತ ಸದಸ್ಯರ ಪಾಲಿಗೆ ಒಲಿದಿದೆ.
ಜಿ.ಪಂ.ನ ಸಹಾಯಕ ಇಂಜಿನಿಯರ್ ತಾರನಾಥ್ ಅವರು ಚುನಾವಣಾಧಿಕಾರಿಯಾಗಿದ್ದು,ಆಯ್ಕೆ ಪ್ರಕ್ರಿಯೆ ನಡೆಸಿದರು.ಪಿಡಿಒಹಾಗೂ ಸಿಬ್ಬಂದಿಗಳು ಸಹಕರಿಸಿದರು