ಮಂಗಳೂರು ಟೈಲರ್ಸ್ ಅಸೋಸಿಯೇಶನ್ ಕ್ಷೇತ್ರ ಸಮಿತಿಯ ವಾರ್ಷಿಕ ಮಹಾ ಸಭೆ ಹಾಗೂ ಅಟಿದ ನೆಂಪು ಕಾರ್ಯಕ್ರಮ
ಮಂಗಳೂರು: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ (ರಿ )ಮಂಗಳೂರು ಕ್ಷೇತ್ರ ಸಮಿತಿಯ ವತಿಯಿಂದ ವಾರ್ಷಿಕ ಮಹಾ ಸಭೆ ಹಾಗೂ ಅಟಿದ ನೆಂಪು ಕಾರ್ಯಕ್ರಮವು ಜು.೨೩ರಂದು ಭಾನುವಾರ ಗೋರಿಗುಡ್ಡೆ ಟೈಲರ್ಸ್ ಭವನದಲ್ಲಿ ನಡೆಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟೈಲರ್ಸ್ ಅಸೋಸಿಯೇಶನ್ ಮಂಗಳೂರು ಕ್ಷೇತ್ರದ ಅಧ್ಯಕ್ಷೆ ವಿದ್ಯಾ ಶೆಟ್ಟಿ ವಹಿಸಿದ್ದರು.
ಕೆ.ಎಸ್.ಟಿ.ಎ ರಾಜ್ಯ ಸಮಿತಿ ಅಧ್ಯಕ್ಷ ನಾರಾಯಣ ಬಿ.ಎ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೆ.ಎಸ್.ಟಿ.ಎ ರಾಜ್ಯ ಸಮಿತಿ ಪ್ರ ಕಾರ್ಯದರ್ಶಿ ಪ್ರಜ್ವಲ್ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಕೆ.ಎಸ್.ಟಿ.ಎ ರಾಜ್ಯ ಸಮಿತಿ ಕೊಶಾಧಿಕಾರಿ ರಾಮಚಂದ್ರ , ಕೆ.ಎಸ್.ಟಿ.ಎ ರಾಜ್ಯ ಸಮಿತಿ ಉಪಾಧ್ಯಕ್ಷ ಸುರೇಶ್ ಸಾಲಿಯಾನ್, ಕೆ.ಎಸ್.ಟಿ.ಎ ಜಲ್ಲಾಧ್ಯಕ್ಷ ಜಯಂತ ಉರ್ಲಾಂಡಿ, ಕೆ.ಎಸ್.ಟಿ.ಎ ಜಿಲ್ಲಾ ಸಮಿತಿ ಕೋಶಾಧಿಕಾರಿ ಈಶ್ವರ್ ಕುಲಾಲ್, ಕೆ.ಎಸ್.ಟಿ.ಎ ಜಿಲ್ಲಾ ಪ್ರ. ಕಾರ್ಯದರ್ಶಿ ಕೆ. ಲಿಗೋಧರ್ ಆಚಾರ್ಯ , ಮಂಗಳೂರು ಕ್ಷೇತ್ರ ಪ್ರ. ಕಾರ್ಯದರ್ಶಿ ಉಮಾವತಿ, ಮಂಗಳೂರು ಕ್ಷೇತ್ರ ಕೋಶಾಧಿಕಾರಿ ಶಶಿಕಲಾ ಉಪಸ್ಥಿತರಿದ್ದರು.
ಮಂಗಳೂರು ಕ್ಷೇತ್ರದ ಅಧ್ಯಕ್ಷೆ ವಿದ್ಯಾ ಶೆಟ್ಟಿ ಸ್ವಾಗತಿಸಿದರು. ಶ್ರೀಮತಿ ಕನಕ ಮೋಹನ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ಕ್ಷೇತ್ರ ಸಮಿತಿಯ ೯. ವಲಯದ ಸದಸ್ಯರು ಸಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಇದೇ ಸಂದರ್ಭದಲ್ಲಿ 2023-24 ನೇ ಸಾಲಿನ ಪದಾಧಿಕಾರಿಗಳ ಅಯ್ಕೆ ನಡೆಯಿತು.
ಮಂಗಳೂರು ಕ್ಷೇತ್ರದ 9 ವಲಯ ಸಮಿತಿಗಳ ಸದಸ್ಯರು ಆಟಿದ ನೆಂಪು ಕಾರ್ಯಕ್ರಮದಲ್ಲಿ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿ ಉಣಬಡಿಸಿದರು.
ಆಟಿದ ನೆಂಪು ಕಾರ್ಯಕ್ರಮದಲ್ಲಿ ಬಗೆಬಗೆಯ ಪದಾರ್ಥ
#ಅನ್ನ, ಕೋಳಿಸುಕ್ಕ. ಹಲಸಿನ ಹಣ್ಣಿನ ಪಾಯಸ, ಕಡ್ಲೆ ಬಲ್ಯಾರು ,ಸೇಮೆ ಮತ್ತು ಕಡ್ಲೆ ಸಲಾಯಿ ಪಾಯಸ ಹಾಗೂ ಮಣ್ಣಿ ,ಪತ್ರೊಡೆ, ಪದೆಂಗಿ ಗಸಿ ,ತೊಜಂಕ್ ಪೆಲ್ತರಿ, ಮರುವಾಯಿ ಸುಕ್ಕ, ತಿಮರೆ ಚಟ್ನಿ ,ಹಲಸಿನ ಗಟ್ಟಿ , ಗಾರಿಯಾ ಕಡ್ಲೆ ಗುಜ್ಜೆ ,ಎಟ್ಟಿ ಚಟ್ನಿ, ಮೆಂತೆ ಗಂಜಿ#