ವಾಮಂಜೂರು: ಆಧುನಿಕ ಕೌಶಲ್ಯತೆಗೆ ಎಸ್.ಡಿ.ಎಮ್. ಮಂಗಳಜ್ಯೋತಿ ಕೈಗಾರಿಕಾ ತರಬೇತಿ ಸಂಸ್ಥೆ (ಐ.ಟಿ.ಐ),
ಮಂಗಳೂರು:ರಾಜ್ಯದಲ್ಲಿ ೨೭೦ ಸರಕಾರಿ ಮತ್ತು ೧೯೦ ಖಾಸಗಿ ಅನುದಾನಿತ ಹಾಗೂ ೧೦೦೦ಕ್ಕೂ ಮಿಕ್ಕಿ ಅನುದಾನ ರಹಿತ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳು ವಿವಿಧ ವೃತ್ತಿ ಘಟಕಗಳಲ್ಲಿ ತರಬೇತಿ ನೀಡುತ್ತಿದೆ. ಈ ಎಲ್ಲ ಸಂಸ್ಥೆಗಳಿಗೆ ಮಾದರಿಯಾಗಿ ಬೆಳೆದು ಅತ್ಯುತ್ತಮ ತರಬೇತಿ, ಶೇ.೧೦೦ ಉದ್ಯೋಗ ಖಚಿತತೆ ನೀಡಿ ತನ್ಮೂಲಕ ಬಡ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಆಶಾ ಕಿರಣವಾಗಿ ರೂಪುಗೊಂಡ ಸಂಸ್ಥೆ ಮಂಗಳೂರು ವಾಮಂಜೂರಿನ ಎಸ್.ಡಿ.ಎಮ್ ಮಂಗಳಜ್ಯೋತಿ ಕೈಗಾರಿಕಾ ತರಬೇತಿ ಸಂಸ್ಥೆ(ಐ.ಟಿ.ಐ).
ಧರ್ಮಸ್ಥಳದ ಧರ್ಮಾಧಿಕಾರಿಯವರಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ಉಜಿರೆಯ ಆಡಳಿತಕ್ಕೊಳಪಟ್ಟ ವಾಮಂಜೂರಿನ ಎಸ್.ಡಿ.ಎಮ್ ಮಂಗಳಜ್ಯೋತಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಶಿಸ್ತುಬದ್ದ ತರಬೇತಿ ಜೊತೆಗೆ ಜೀವನ ಕೌಶಲ್ಯದ ತರಬೇತಿ ನೀಡುವುದಲ್ಲದೆ, ಇಲಾಖಾ ನಿಯಮದಂತೆ ಎಲ್ಲ ವಿಭಾಗಗಳ ತರಬೇತಿದಾರರಿಗೆ ವಿವಿಧ ಕಂಪೆನಿಗಳಲ್ಲಿ ಕಿರು ಅವಧಿಯ ವೃತ್ತಿ ತರಬೇತಿ (ಔಎಖಿ) ನೀಡಲಾಗುತ್ತಿದೆ ಹಾಗೂ ಬಡತನ ರೇಖೆಗಿಂತ ಕೆಳಗಿರುವ /ಗ್ರಾಮೀಣ ಪ್ರದೇಶದ ಯುವಕ ಯುವತಿಯರಿಗೆ ಸ್ವ ಉದ್ಯೋಗ ನೀಡುವ ಹೆಗ್ಗಳಿಕೆ ಈ ಸಂಸ್ಥೆಗಿದೆ.
ಈ ಸಂಸ್ಥೆಯು ೨೦೧೩ ರಲ್ಲಿ ಆರಂಭವಾಗಿ ಸಮನ್ವಯ ಶಿಕ್ಷಣ ವ್ಯವಸ್ಥೆಯ ಮೂಲಕ ವಿಶೇಷ ಸಾಮರ್ಥ್ಯದ ವಿದ್ಯಾರ್ಥಿಗಳನ್ನು ಸಾಮಾನ್ಯ ಮಕ್ಕಳ ಜೊತೆಗೆ ಸೇರಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಮಾಡುತ್ತಿದೆ. ನಮ್ಮ ಕೈಗಾರಿಕಾ ತರಬೇತಿ ಸಂಸ್ಥೆಯು ಭಾರತೀಯ ಗುಣಮಟ್ಟ ಪರಿವೀಕ್ಷಣೆಗೆ (ಕಿಅI) ಒಳಪಟ್ಟು ಭಾರತ ಸರಕಾರದ ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ತು ನವದೆಹಲಿ ಇವರಿಂದ ಮಾನ್ಯತೆ ಪಡೆದಿದೆ.
ಈ ಸಂಸ್ಥೆಯಲ್ಲಿ ಒಟ್ಟು ೫ ವಿಭಾಗಗಳಿದ್ದು ಎಸ್.ಎಸ್.ಎಲ್.ಸಿ ಪಾಸಾದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೋರ್ಸ್ಗಳಿಗೆ ದಾಖಲಾತಿ ಪಡೆಯಬಹುದು. ಇಲ್ಲಿ ೨ ವರ್ಷ ಅವಧಿಯ ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್(ಇಎಂ), ಇಲೆಕ್ಟ್ರಿಷಿಯನ್, ಮೆಕ್ಯಾನಿಕ್ ಮೋಟಾರ್ ವೆಹಿಕಲ್ಸ್ (ಎಮ್.ಎಮ್.ವಿ), ಹಾಗೂ ಒಂದು ವರ್ಷ ಅವಧಿಯ ಮಲ್ಟಿಮೀಡಿಯಾ ಆ್ಯನಿಮೇಷನ್ ಆಂಡ್ ಸ್ಪೆಷಲ್ ಇಫೆಕ್ಟ್ ಹಾಗೂ ಸೀವಿಂಗ್ ಟೆಕ್ನಾಲಜಿ(ಹೊಲಿಗೆ ತರಬೇತಿ ) ತರಬೇತಿಯನ್ನು ನೀಡುತ್ತಿದೆ.
NSDCಯಿಂದ ಮಾನ್ಯತೆ ಪಡೆದ BOSCH ಸಂಸ್ಥೆಯ ಸಹಯೋಗದೊಂದಿಗೆ ೨೦೧೮ರಲ್ಲಿ ಆರಂಭವಾದ 2018 BOSCH Artisan center ನಲ್ಲಿ ಒಂದು ವರ್ಷದ Advanced Carpentary ತರಬೇತಿಯನ್ನು ಎಸ್.ಎಸ್.ಎಲ್.ಸಿ ಪಾಸ್/ಫೇಲ್ ಆದ ವಿದ್ಯಾರ್ಥಿಗಳು ದಾಖಲಾತಿಯನ್ನು ಪಡೆಯಬಹುದು.
ಈ ಸಂಸ್ಥೆಯಲ್ಲಿ ದಾಖಲಾತಿ ಪಡೆದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಧರ್ಮಸ್ಥಳ ಗ್ರಾಮೀಣಾಭಿವೃಧ್ದಿ ವತಿಯಿಂದ ನೀಡಲ್ಪಡುವ ಶಿಷ್ಯವೇತನದೊಂದಿಗೆ ಅರಿವು, ವಿದ್ಯಾಶ್ರೀ, ಬೀಡಿ, ಕಟ್ಟಡ ಕಾರ್ಮಿಕ ಮುಂತಾದ ವಿದ್ಯಾರ್ಥಿವೇತನದ ಸೌಲಭ್ಯವಿರುತ್ತದೆ.
ಈ ಸಂಸ್ಥೆಯಲ್ಲಿ ತರಬೇತಿ ಹೊಂದಿದ ವಿದ್ಯಾರ್ಥಿಗಳನ್ನು ಬಾಷ್, (BOSCH) (ಃಔSಅಊ) ಸ್ನೆöÊಡರ್ ಎಲೆಕ್ಟಿçಕ್( (Schneider Electric)s, BEL , )s, ಃಇಐ , ಹೋಂಡಾ ಮೋಟರ‍್ಸ್, ಟೊಯೊಟೊ, ವೋಲ್ವೋ ಮುಂತಾದ ಪ್ರತಿಷ್ಠಿತ ಕಂಪೆನಿಗಳಿಗೆ ಕ್ಯಾಂಪಸ್ ಸಂದರ್ಶನದ ಮೂಲಕ ನೇರ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡಲಾಗುವುದು. ಕಂಪನಿಗ ಳಲ್ಲಿ ನೇಮಕಾತಿಯ ಸಂಧರ್ಭಗಳಲ್ಲಿ ಮಹಿಳೆಯರಿಗೆ ಮಿಸಲಾತಿ ನೀಡಲಾಗುತ್ತಿದೆ.
ನುರಿತ ಅಧ್ಯಾಪಕರನ್ನೊಳಗೊಂಡ ಈ ಸಂಸ್ಥೆಯಲ್ಲಿ ಆಧುನಿಕ ಯಂತ್ರೋಪಕರಣಗಳ ಸುಸಜ್ಜಿತ ಪ್ರಯೋಗಾಲಯಗಳನ್ನೊಳಗೊಂಡಿದೆ.
ಈ ತರಬೇತಿಯನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ NTC(National Trade Certificate) ದೊರೆಯುತ್ತದೆ.
ಮಾಹಿತಿಗಾಗಿ ಸಂಪರ್ಕಿಸಿ. 9880681223 , 9480157248