ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ,ಪ್ರತಿಭಾ ಪುರಸ್ಕಾರ, ಪ್ರತಿಭಾ ದಿನೋತ್ಸವ
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ 2022-23ನೇ ವರ್ಷದ ವಾರ್ಷಿಕೋತ್ಸವ- ಪ್ರತಿಭಾ ಪುರಸ್ಕಾರ ಹಾಗೂ ಪ್ರತಿಭಾ ದಿನೋತ್ಸವವು ಸಂಪನ್ನಗೊಂಡಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಮಾತನಾಡಿ ವಿದ್ಯಾರ್ಥಿಗಳು ಸಿಕ್ಕಿದ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ತಮ್ಮನ್ನು ತಾವೇ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಅಭ್ಯಾಗತರಾಗಿ ಭಾಗವಹಿಸಿದ್ದ ಖ್ಯಾತ ಹಿನ್ನೆಲೆ ಧ್ವನಿ ಕಲಾವಿದರಾದ ಬಡೆಕ್ಕಿಲ ಪ್ರದೀಪ್ ಅವರು ಮಾತನಾಡಿ ಪ್ರತಿಭೆ ಎಲ್ಲರಲ್ಲಿಯೂ ಇರುತ್ತದೆ, ಆ ಪ್ರತಿಭೆಗೆ ತಕ್ಕ ಸಿಗುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮುಂದೆ ಸಾಗಬೇಕು ಎಂದರು. ಖ್ಯಾತ ಭಾಗವತರಾದ ಅಮೃತಾ ಅಡಿಗ ಅವರು ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರತಿಭಾ ಪುರಸ್ಕಾರ;
2022-23ನೇ ಸಾಲಿನ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು, ವಿವಿಧ ಕಾಲೇಜು, ವಿಶ್ವ ವಿದ್ಯಾಲಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ, ಸಿ ಎ (ಯಕ್ಷಿತ್), ಸಿ ಎಸ್(ಕೀರ್ತಿ) ಸೇರಿದಂತೆ ವಿವಿಧ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು, ಕಳೆದ ಶೈಕ್ಷಣಿಕ ವರ್ಷದಲ್ಲಿ 4ನೇ ಶ್ರೇಯಾಂಕ ಗಳಿಸಿದ ವಾಣಿಜ್ಯ ವಿದ್ಯಾರ್ಥಿನಿ ಕು. ನಿರೀಕ್ಷಾ ಇವರಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ದತ್ತಿನಿಧಿ ವಿತರಣೆ,ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಿತು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಜೇಶ್ ನರಿಂಗಾಣ ಹಾಗೂ ಅಮೃತಾ ಅಡಿಗ ಅವರ ತಾಯಿ ಜಯಲಕ್ಷ್ಮೀ ಉಪಸ್ಥಿತರಿದ್ದರು.
ಪ್ರಾಚಾರ್ಯ ಕೃಷ್ಣ ಪ್ರಸಾದ್ ಸ್ವಾಗತಿಸಿದರು,
ಕು. ಕೀರ್ತಿ, ಕು. ಹರ್ಷಿತಾ ಅವರು ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಕು. ಪ್ರತೀಕಾ ವಂದಿಸಿದರು. ಲಘು ಪ್ರಹಸನ , ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಂದ “ಶ್ರೀರಾಮ ದರ್ಶನ” ಯಕ್ಷಗಾನ ಕಾರ್ಯಕ್ರಮವು ನಡೆಯಿತು. ಕೊನೆಯಲ್ಲಿ ಯಕ್ಷಗುರುಗಳಾದ ಮೋಹನ್ ಕುಮಾರ್ ಅಮ್ಮುಂಜೆಯವರನ್ನು ಡಾ. ಪ್ರಭಾಕರ ಭಟ್ ಅವರು ಶಾಲು ಹೊದಿಸಿ ಸನ್ಮಾನಿಸಿದರು. ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಕಾಣಿಕೆಯನ್ನರ್ಪಿಸಿದರು.