ವೀರಕಂಬ ಒಕ್ಕೂಟದ “ಸೇವಾ ಕೇಂದ್ರ” ದ ಉದ್ಘಾಟನೆ
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್( ರಿ) ವಿಟ್ಲ ಇದರ ಕಲ್ಲಡ್ಕ ವಲಯದ ವೀರಕಂಬ ಒಕ್ಕೂಟದ ಸ್ಥಳಾಂತರ ಗೊಂಡ “ಸೇವಾ ಕೇಂದ್ರ” ವನ್ನು ವೀರಕಂಬ ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡದಲ್ಲಿ ಉದ್ಘಾಟಿಸಲಾಯಿತು.
ವೀರಕಂಬ ಹಾಲು ಉತ್ಪಾದಕರ ಸಂಘದ ನಿರ್ದೇಶಕರಾದ ಪದ್ಮನಾಭ ಬಂಗೇರ ಮಜಿ ದ್ವೀಪ ಪ್ರಜ್ವಲಿಸಿ ಕೇಂದ್ರವನ್ನು ಉದ್ಘಾಟಿಸಿದರು.
ಯೋಜನೆಯ ವೀರಕಂಬ ಒಕ್ಕೂಟ ಉಪಾಧ್ಯಕ್ಷ ಹರೀಶ್ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು,
ವೀರಕಂಬ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ವೀರಪ್ಪ ಮೂಲ್ಯ ಬೆತ್ತಸರವು , ವೀರಕಂಬ ಒಕ್ಕೂಟದ ಕಾರ್ಯದರ್ಶಿ ಪ್ರೇಮ ನಾಗೇಶ್ ಆಚಾರ್ಯ, ಕೋಶಾಧಿಕಾರಿ ಆನಂದ ಮಜಿ , ಯೋಜನೆಯ ಸದಸ್ಯರುಗಳಾದ ಪ್ರಕಾಶ್ ಮಜಿ, ವೇಣುಗೋಪಾಲ್, ಸುನಿಲ್ ಮೈರಾ, ಮೊದಲಾದವರು ಉಪಸ್ಥಿತರಿದ್ದರು.
ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣಶೆಟ್ಟಿ ಸೇವಾ ಕೇಂದ್ರದಲ್ಲಿ ದೊರೆಯುವ ಸೌಲಭ್ಯಗಳ ಸಂಪೂರ್ಣ ಮಾಹಿತಿಯನ್ನು ನೀಡಿದರು.
ವೀರಕಂಬ ಒಕ್ಕೂಟದ ಸೇವಾ ಪ್ರತಿನಿಧಿ ವಿಜಯ ಶೇಖರ್ ಸ್ವಾಗತಿಸಿ, ಸೇವಾಕೇಂದ್ರದ ವಿ ಎಲ್ ಈ ಸೌಮ್ಯ ವಂದಿಸಿದರು.