ಕೇಶ ವಿನ್ಯಾಸ ಶಿಕ್ಷಣಕ್ಕೆ ಮಂಗಳೂರು ವಿಶ್ವವಿದ್ಯಾಲಯದ ಮಾನ್ಯತೆ
ಮುಂಬೈಯ ಶಿವಾ’ಸ್ ಸಂಸ್ಥೆಯಿಂದ ದೇರಳಕಟ್ಟೆಯಲ್ಲಿ ವೃತ್ತಿಪರ ಡಿಪ್ಲೋಮಾ ಕೋರ್ಸ್
ಕೈಕಂಬ : ಕೇಶ ವಿನ್ಯಾಸದಲ್ಲಿ ವೃತ್ತಿಪರ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಮುಂಬೈಯ ಶಿವಾ’ಸ್ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಪ್ರೊಫೆಶನಲ್ ಇನ್ನೋವೇಶನ್ಸ್(ಸೀಪಿ) ಹೆಸರಿನ ಸಂಸ್ಥೆಯು ಮಂಗಳೂರು ವಿಶ್ವವಿದ್ಯಾನಿಲಯದ ಮಾನ್ಯತೆಯೊಂದಿಗೆ ಮಂಗಳೂರಿನ ದೇರಳಕಟ್ಟೆಯಲ್ಲಿ(ಪ್ಲಾಮಾ ನೆಸ್ಟ್) ದೇಶದಲ್ಲೇ ಪ್ರಥಮ ಎನ್ನಲಾದ ಕೇಶ ವಿನ್ಯಾಸ ತರಬೇತಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಲು ಸಕಲ ಸಿದ್ಧತೆ ನಡೆಸುತ್ತಿದೆ.

ಸೀಪಿ ಸಂಸ್ಥೆಯ ಮೂಲಕ ೨೦೨೩-೨೪ನೇ ಶೈಕ್ಷಣಿಕ ವರ್ಷದಿಂದ ಆರಂಭವಾಗಲಿರುವ ೬ ತಿಂಗಳ ಮೌಲ್ಯವರ್ಧಿತ ಮತ್ತು ಕೌಶಲ್ಯವರ್ಧಿತ ಹೇರ್ ಆ್ಯಂಡ್ ಬ್ಯೂಟಿ ಥೆರಪಿ(ಎಚ್‌ಬಿಟಿ) ಸರ್ಟಿಫಿಕೇಟ್ ಕೋರ್ಸ್ ಮತ್ತು ಒಂದು ವರ್ಷದ ಡಿಸೈನಿಂಗ್ ಆ್ಯಂಡ್ ಟ್ರೀಟಿಂಗ್ ಹೇರ್(ಡಿಟಿಎಚ್) ಡಿಪ್ಲೋಮಾ ಕೋರ್ಸ್ಗಾಗಿ ಮಂಗಳೂರಿನ ಹಲವು ಯುವಕ-ಯುವತಿಯರು ಈಗಾಗಲೇ ಆಸಕ್ತಿ ತೋರಿಸಿದ್ದಾರೆ. ಇಲ್ಲಿ ಒಟ್ಟು ೬೦ ವಿದ್ಯಾರ್ಥಿಗಳಿಗೆ ಕಲಿಯಲು ಅವಕಾಶವಿದೆ. ಆಗಸ್ಟ್ ೮ರಿಂದ ತರಗತಿ ಆರಂಭವಾಗಲಿದೆ.

ಪಿಯುಸಿ ತೇರ್ಗಡೆ ವಿದ್ಯಾರ್ಹತೆ ಹೊಂದಿರುವ ಯುವಕ-ಯುವತಿಯರು ಈ ಕೋರ್ಸ್ಗೆ ಪ್ರವೇಶ ಪಡೆಯಲು ಅವಕಾಶವಿದೆ. ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಶೇ. ೧೦೦ರಷ್ಟು ಉದ್ಯೋಗ ಖಚಿತ. ಎರಡೂ ಕೋರ್ಸ್ಗಳಲ್ಲಿ ಮುಖ್ಯವಾಗಿ ಕೂದಲು ವಿನ್ಯಾಸ, ಸೌಂದರ್ಯವರ್ಧನೆ ಪಠ್ಯವಿರುತ್ತದೆ. ಪ್ರಯೋಗ ಕೌಶಲ್ಯ(ಪ್ರಾಕ್ಟಿಕಲ್), ಪಠ್ಯ(ಥಿಯರಿ) ಮತ್ತು ಸಂವಹನ ಕಲೆ(ಕಮ್ಯುನಿಕೇಶನ್ ಸ್ಕಿಲ್) ವಿಷಯದಲ್ಲಿ ಸಾಮಾನ್ಯಜ್ಞಾನ ಲಭ್ಯವಿರುವ ಈ ಕೋರ್ಸ್ಗಳ ಪ್ರಾಕ್ಟಿಕಲ್ ಕಲಿಕೆಯ ಸಂದರ್ಭದಲ್ಲಿ ಯುವಕ ಮತ್ತು ಯುವತಿಯರಿಗೆ ಪ್ರತ್ಯೇಕ ಕಲಿಕೆ ವ್ಯವಸ್ಥೆ ಇರುತ್ತದೆ. ಎಲ್ಲ ವಿದ್ಯಾರ್ಥಿಗಳಿಗೆ ಥಿಯರಿ ಪಾಠ-ಪ್ರವಚನ ವ್ಯವಸ್ಥೆ ಒಂದೇ ಆಗಿರುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಮುಂಬೈಯAತಹ ಮಹಾನಗರದಲ್ಲಿ ಆಧುನಿಕ ಜೀವನ ಶೈಲಿ ಯದ್ವಾತದ್ವಾ ಬದಲಾಗುತ್ತಿದ್ದು, ಸೆಲೆಬ್ರಿಟಿಗಳಿಂದ ಹಿಡಿದು ಜನಸಾಮಾನ್ಯರವರೆಗೂ ವಿಶಿಷ್ಟ ಕೇಶ ವಿನ್ಯಾಸಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಮಹಾನಗರಗಳಲ್ಲಿ ಕೇಶ ವಿನ್ಯಾಸ ಸಂಸ್ಥೆಗಳು ಲಾಭದಾಯಕವಾಗಿವೆ. ಉದ್ಯೋಗ ಬಯಸುವವರಿಗೆ ಉತ್ತಮ ವೇತನ ಗಳಿಸಬಹುದಾದ ಉತ್ತಮ ಕ್ಷೇತ್ರವಾಗಿ ಪರಿತರ್ವನೆಗೊಳ್ಳುತ್ತಿದೆ. ಈ ಕಾರಣದಿಂದಲೇ ವಿದೇಶಗಳಲ್ಲಿರುವಂತೆ ಭಾರತದ ಮಹಾನಗರಗಳಲ್ಲೂ ಕೇಶ ವಿನ್ಯಾಸ ತರಬೇತಿ ಶಿಕ್ಷಣ ಸಂಸ್ಥೆ ಅಗತ್ಯ ಕಂಡು ಬಂದಿದೆ” ಎಂದು ಶಿವಾ’ಸ್ ಸಂಸ್ಥೆಯ(ಸೀಪಿ) ಕಾರ್ಯಾಧ್ಯಕ್ಷ ಡಾ. ಶಿವರಾಮ ಕೆ. ಭಂಡಾರಿ ಹೇಳುತ್ತಾರೆ.
ಮೂಲತಃ ಕಾರ್ಕಳದವರಾದ ಡಾ. ಶಿವರಾಮ ಭಂಡಾರಿ ಅವರು ೧೯೮೮ರಲ್ಲಿ ಮುಂಬೈಯ ಮುಲುಂಡಿನಲ್ಲಿ ಕೇಶ ವಿನ್ಯಾಸ ಸಂಸ್ಥೆ ಸ್ಥಾಪಿಸಿದರು. ೧೯೯೩ರಲ್ಲಿ ಸ್ಟೆÊಲೋ ಹೇರ್ ಪಾರ್ಲರ್, ೨೦೦೧ರಲ್ಲಿ ಶಿವಾ’ಸ್ ಅಕಾಡೆಮಿ, ೨೦೦೭ರಲ್ಲಿ ಶಿವಾ’ಸ್ ಹೇರ್ ಡಿಸೈನರ್ ಪ್ರೆÊ.ಲಿ., ೨೦೨೨ರಲ್ಲಿ ಶಿವಾ’ಸ್ ಸೆಲ್ಯೂಟ್ ಸಂಸ್ಥೆ ಸ್ಥಾಪಿಸಿದರು. ಶಿವಾ’ಸ್ ಸಮೂಹ ಸಂಸ್ಥೆಯು ಕಳೆದ ಮೂರು ದಶಕದಿಂದ ಈ ಕ್ಷೇತ್ರದಲ್ಲಿ ಮುಂಬೈ ಮೂಲಕ ದೇಶ, ವಿದೇಶಗಳಲ್ಲಿ ಹೆಸರು ಮಾಡುತ್ತಿದೆ.
“ಕೇಶ ವಿನ್ಯಾಸ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಕೂದಲಿಗೆ ಸಂಬAಧಿಸಿದ ವಿಷಯವಲ್ಲದೆ, ದೇಹದ ಸ್ವಾಸ್ಥ್ಯ, ಚರ್ಮದ ಹಚ್ಚೆ, ಮಧುವಿನ ಶೃಂಗಾರ, ಉಗುರುಗಳ ಹೊಳಪು ಮತ್ತಿತರ ವಿಷಯಗಳಲ್ಲಿ ವಿಶೇಷ ತರಬೇತಿ ಪಡೆಯಲಿದ್ದಾರೆ. ಸಂಸ್ಥೆಯ ಮೂಲಕ ಕಲಿತು ಪ್ರಮಾಣಪತ್ರ ಹೊಂದಿದ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿರುವ ಕೇಶ ವಿನ್ಯಾಸ ಸಂಸ್ಥೆಗಳಲ್ಲಿ ಉದ್ಯೋಗ ಗಳಿಸಲು ಅರ್ಹರಾಗುತ್ತಾರೆ ಮತ್ತು ಸ್ವಂತ ಉದ್ಯೋಗ ಮಾಡುವವರಿಗೆ ಸಂಪೂರ್ಣ ಮಾಹಿತಿ ಸಿಕ್ಕಂತಾಗುತ್ತದೆ. ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಸೂಕ್ತ ಉದ್ಯೋಗ ಗಳಿಸಿ ಕೊಡುವಲ್ಲಿ ಸಂಸ್ಥೆಯೇ ನೆರವಾಗಲಿದೆ” ಎಂದು ಜೂ. ೨೧ರಂದು ಮಂಗಳೂರಿನಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಡಾ. ಶಿವರಾಮ ಭಂಡಾರಿ ಅಭಿಪ್ರಾಯಪಟ್ಟರು.
ಅಂತಾರಾಷ್ಟಿçÃಯ ಗೌರವಕ್ಕೆ ಪಾತ್ರವಾಗಿರುವ ಶಿವಾ’ಸ್ ಅಕಾಡೆಮಿ ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್(ರಿ) ಸಂಸ್ಥೆಯ ಸಂಚಾಲಕತ್ವದಡಿ ಸೇವಾ ನಿರತವಾಗಿದ್ದು, ಜಗತ್ತಿನ ಹೆಸರಾಂತ ಟೋನಿ ಆ್ಯಂಡ್ ಗೈ ಸಂಸ್ಥೆಯಿAದ ಪ್ರಮಾಣೀಕೃತ ಪತ್ರ ಹೊಂದಿದೆ. ವಿಡಾಲ್ ಸಾಸೂನ್ ಸಂಸ್ಥೆಯಿAದಲೂ ಸುಧಾರಿತ ಪ್ರಮಾಣೀಕೃತ ಪತ್ರ ಪಡೆದಿದೆ. ಈಗ ಲಂಡನ್ ಮೂಲದ ವಿಶ್ವಪ್ರಸಿದ್ಧ ಹೇರ್ ಸ್ಟೆÊಲಿಂಗ್ ಅಕಾಡೆಮಿ ಎಂದೆನಿಸಿರುವ ಅರ್ಥ್ ಅಕಾಡೆಮಿಯು, ಮಹಾರಾಷ್ಟçದಲ್ಲಿ ಕೇಶ ವಿನ್ಯಾಸದಲ್ಲಿ ವೃತ್ತಿಪರ ಶಿಕ್ಷಣ ನೀಡಲು ಶಿವಾಸ್ ಸಂಸ್ಥೆಯನ್ನು ಅಧಿಕೃತವಾಗಿ ಸಂಸ್ಥೆಯಾಗಿ ಆಯ್ಕೆ ಮಾಡಿದೆ. ಮುಂಬೈಯ ಅಂಧೇರಿ ಮತ್ತು ಡೊಂಬಿವಲಿಯಲ್ಲಿ ಶಿವಾ’ಸ್‌ನ ಎರಡು ಶಿಕ್ಷಣ ಸಂಸ್ಥೆಗಳು ತೆರೆದುಕೊಂಡಿವೆ. ಇದೀಗ ಮಂಗಳೂರು ವಿಶ್ವವಿದ್ಯಾನಿಲಯದ ಮಾನ್ಯತೆಯೊಂದಿಗೆ ದೇಶದಲ್ಲೇ ಶಿವಾ’ಸ್ ಸಂಸ್ಥೆಯು ಕೇಶ ವಿನ್ಯಾಸ ಕ್ಷೇತ್ರದಲ್ಲಿ ವಿಶಿಷ್ಟ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆಯಲು ಮುಂದಾಗಿದೆ.
ಮAಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಗುಲಾಬಿ ಕೃಷ್ಣ ಭಂಡಾರಿ ಟ್ರಸ್ಟ್(ರಿ) ಸ್ಥಾಪಕ ಅಧ್ಯಕ್ಷ ಹಾಗೂ ಶಿವಾ’ಸ್ ಇಂಟರ್‌ನ್ಯಾಶನಲ್ ಆಫ್ ಪ್ರೊಫೆಶನಲ್ ಇನ್ನೋವೇಶನ್ಸ್(ಸೀಪಿ) ಕಾರ್ಯಾಧ್ಯಕ್ಷ ಡಾ. ಶಿವರಾಮ ಕೆ. ಭಂಡಾರಿ, ಶಿವಾ’ಸ್ ಸಮೂಹ ಸಂಸ್ಥೆಯ ಸಿಇಒ ಡಾ. ವಿನೋದ್ ಚೋಪ್ರಾ, ಸೀಪಿ ಪ್ರಾಂಶುಪಾಲೆ ರೊವಿನಾ ಎಸ್. ಸೋನ್ಸ್, ಸೀಪಿ ಕ್ಯಾಂಪಸ್ ಮ್ಯಾನೇಜರ್ ಸೋಮಶೇಖರ ಎಂ. ಭಂಡಾರಿ ಉಪಸ್ಥಿತರಿದ್ದರು.