ಜನುಮದಿನದಂದೇ ಜೀವದಾನದ ಪುಣ್ಯ ಪಡೆಯಿರಿ: ವಿಶಾಖ್ ಶೆಟ್ಟಿ
ಉಡುಪಿ: ನಿಮ್ಮ ಜನುಮದಿನದಂದು ನೀವು ಮಾಡುವ ರಕ್ತದಾನವು ಮೂರು ಜೀವಗಳಿಗೆ ಮರು ಜನ್ಮ ನೀಡುವಂಥದ್ದು. ರಕ್ತದಾನ ಮಾಡಲು ಅರ್ಹರಾದವರೆಲ್ಲರೂ ಈ ಸಂಕಲ್ಪ ಕೈಗೊಂಡರೆ ನಮ್ಮಲ್ಲಿರುವ ರಕ್ತನಿಧಿಯ ಕೊರತೆಯನ್ನು ನೀಗಿಸಲು ಸಾಧ್ಯ. ಸಹಜವಾಗಿ ದೇಹದಲ್ಲಿ ಸೃಷ್ಟಿಯಾಗುವ ರಕ್ತವನ್ನು ಕೃತಕವಾಗಿ ಯಾರೂ ಸೃಷ್ಟಿಸಲು ಸಾಧ್ಯವಿಲ್ಲ ಎಂಬ ಅರಿವು ನಮ್ಮಲ್ಲಿರಲಿ ಎಂದು ಉಡುಪಿ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘ (ಮಿತ ) ಇದರ ಲೆಕ್ಕಾಧಿಕಾರಿ ಶ್ರೀ ವಿಶಾಖ್ ಶೆಟ್ಟಿ ಅವರು ಅಭಿಪ್ರಾಯ ಪಟ್ಟರು.
ಅವರು ಶ್ರೀ ಪೂಣ೯ಪ್ರಜ್ಞ ಸಂಧ್ಯಾ ಕಾಲೇಜು ಉಡುಪಿ, ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ನಡೆದ ರಕ್ತದಾನಿಗಳ ದಿನಾಚರಣೆಯಲ್ಲಿ ʻಹನಿ ರಕ್ತ – ಜೀವಾಮೃತʼ ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಕನ್ಯಾ ಮೇರಿ. ಜೆ ಇವರು ವಹಿಸಿಕೊಂಡಿದ್ದರು, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಶ್ರೀ ಚಿರಂಜನ್ ಕೆ. ಶೇರಿಗಾರ್ ಹಾಗೂ ಡಾ.ಪ್ರಜ್ಞಾ ಮಾರ್ಪಳ್ಳಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ವಿವಿಧ ವಿಭಾಗದ ಪ್ರಾಧ್ಯಾಪಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸ್ವಯಂ ಸೇವಕರಾದ ಕಾರ್ತಿಕ್ ಸ್ವಾಗತಿಸಿ, ಕು. ಪ್ರತಿಮಾ ವಂದಿಸಿದರು. ಕು.ಸ್ವಪ್ನಾ ಕಾರ್ಯಕ್ರಮವನ್ನು ನಿರೂಪಿಸಿದರು.