ಮೂಡಬಿದ್ರೆ: ಬಡವರಿಗೆ ಭೂಮಿ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯ ಸಿಕ್ಕಿದರೆ ಮಾತ್ರ ಸ್ವಚ್ಛ ಭಾರತವನ್ನು ಕಾಣಬಹುದು ಎಂದು ಸಿಪಿಐಎಂನ ರಾಜ್ಯ ಸಮಿತಿ ಸದಸ್ಯ ಭಾಲಕೃಷ್ಣ ಶೆಟ್ಟಿ ಹೇಳಿದರು.
mbd_nov25_2 (1)

mbd_nov25_2 (2)
ಇಲ್ಲಿನ ಸಮಾಜ ಮಂದಿರದಲ್ಲಿ ಮಂಗಳವಾರ ನಡೆದ ಸಿಪಿಐಎಂನ 5ನೇ ವಲಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಜನ ಕಾಂಗ್ರೆಸ್ ಆಡಳಿತವನ್ನು ನೋಡಿಯಾಯಿತು, ಬಿಜೆಪಿ ಆಡಳಿತವನ್ನು ಅನುಭವಿಸಿಯಾಯಿತು. ಎರಡೂ ಪಕ್ಷಗಳು ಬಂಡವಾಳಶಾಹಿಗಳ ಪರ ನಿಂತು ಬಡವರ ಶೋಷಣೆ ಮಾಡುತ್ತಿವೆ. ನರೇಂದ್ರ ಮೋದಿಯವರಿಂದಲೂ ದೇಶವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಯಾಕೆಂದರೆ ಇವರ ನೀತಿ ಬಡವರ ಪರವಾಗಿಲ್ಲ. ಬಿಜೆಪಿ ಹಿಂದಿನ ಶಕ್ತಿ ಸಂಘಪರಿವಾರ. ಇದು ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯುತ್ತಿದೆ. ಇಂತಹ ಸಂಘಟನೆಯ ಜತೆಗಿರುವ ಪಕ್ಷ ದೇಶವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಬಡವರ ಹಿತಕ್ಕಾಗಿ ಕೆಲಸ ಮಾಡುವ ಸಿಪಿಐಎಂ ತನ್ನ ಸಿದ್ದಾಂತದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದರು.
ಪಕ್ಷದ ಜಿಲ್ಲಾ ಮುಖಂಡ ಯಾದವ ಶೆಟ್ಟಿ ಮಾತನಾಡಿ ಕೇರಳದಲ್ಲಿ ಪ್ರಥಮ ಬಾರಿಗೆ ಸಿಪಿಐಎಂ ಪಕ್ಷ ಅಧಿಕಾರಕ್ಕೆ ಬಂದಾಗ ಬಡವರಿಗೆ ಭೂಮಿ ಹಂಚಿತ್ತು. ಸಿಪಿಐಎಂನ ಹೋರಾಟದ ಫಲವಾಗಿ ಇಂದಿರಾಗಾಂಧಿ ಬಡವರಿಗೆ ಭುಮಿ ನೀಡುವ ಕಾನೂನು ಜಾರಿಗೆ ತಂದರು. ಆದರೆ ಕರ್ನಾಟಕದಲ್ಲಿ ಕಳೆದ 15 ವರ್ಷಗಳಿಂದ ಬಡವರಿಗೆ ಭೂಮಿ ವಿತರಣೆಯಾಗಿಲ್ಲ ಎಂದು ಆರೋಪಿಸಿದರು. .

ಸನ್ಮಾನ: ಪಕ್ಷದ ಹಿರಿಯ ಸದಸ್ಯರಾದ ಸುಂದರ ಶೆಟ್ಟಿ ಮತ್ತು ಬಿರುಕುಲ ಅವರನ್ನು ಸನ್ಮಾನಿಸಲಾಯಿತು. ಪುರಸಭೆ ಸದಸ್ಯೆ ರಮಣಿಸಮಾರಂಭದ ಅಧ್ಯಕ್ಷತೆ ವಹಿಸಿದರು. ಕೃಷ್ಣಪ್ಪ, ಶಂಕರ, ಸೀತಾರಾಮ ಮತ್ತಿತರರು ಇದ್ದರು. ರಾಧಾ ವಂದಿಸಿದರು, ಸಭೆಗೆ ಮೊದಲು ಪೇಟೆಯಲ್ಲಿ ಪಕ್ಷದ ವತಿಯಿಂದ ಮೆರವಣಿಗೆ ನಡೆಯಿತು.

By suddi9

Leave a Reply

Your email address will not be published. Required fields are marked *