ಮೂಡುಬಿದರೆ : ಶ್ರೀ ಜಗದ್ಗುರು ರಾಘವೇಂದ್ರ ಪೀಠದಲ್ಲಿ ನಿಮರ್ಾಣ ಗೊಳ್ಳುತ್ತಿರುವ ಎರಡೂವರೆ ಕೋಟಿ ರೂಪಾ ವೆಚ್ಚದ ಶ್ರೀ ಲಕ್ಷ್ಮೀ ಸತ್ಯ ನಾರಾಯಣ ವೀರಾಂಜನೇಯ ಸ್ವಾಮಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿದೆ.

ಶ್ರೀ ಲಕ್ಷ್ಮೀ ಸತ್ಯನಾರಾಯಣ ವೀರಾಂಜನೇಯ ದೇವರ ಪ್ರಧಾನ ಗರ್ಭಗುಡಿಯ ಶಿಲೆಯ ಕೆಲಸಗಳು ಪೂರ್ಣಗೊಂಡಿದೆ. ಪರಿವಾರ ದೇವರುಗಳಾದ ನೈಋತ್ಯದಲ್ಲಿ ಗಣಪತಿ, ವಾಯುವ್ಯದಲ್ಲಿ ದುಗರ್ೆ, ಆಗ್ನೇಯದಲ್ಲಿ ಮಾಚಿ ದೇವರು, ಈಶಾನ್ಯದಲ್ಲಿ ರಾಘವೇಂದ್ರ ಸ್ವಾಮಿ ಯ ಗುಡಿಗಳ ಶಿಲಾ ಕೆತ್ತನೆಗಳು ಸಂಪೂರ್ಣಗೊಂಡಿದೆ.
ಸುತ್ತು ಪೌಳಿಯ ಗೋಡೆ ಸಾರಣೆ ಪೂರ್ಣಗೊಂಡು ಅಗ್ರ ಸಭದ ಕೆಲಸ ಪ್ರಗತಿಯಲ್ಲಿರುವುದಾಗಿ ಶ್ರೀ ಕ್ಷೇತ್ರದ ಪೀಠಾಧಿಪತಿ ಶ್ರೀ ಮುಕ್ತಾನಂದ ಸ್ವಾಮೀಜಿಯವರು ತಿಳಿಸಿದ್ದಾರೆ. ನಾಗನ ಗುಡಿಯ ಜೀಣರ್ೋದ್ಧಾರ ಹಾಗೂ ಧ್ಯಾನ ಗುಹೆಯ ಕೆಲಸ ಕಾರ್ಯಗಳು ಪ್ರಗತಿಯಲ್ಲಿದೆ. ಧರ್ಮದೈವಗಳಾದ ವ್ಯಾಘ್ರ ಚಾಮುಂಡಿ, ರಾಹು ಗುಳಿಗ ಸಾನಿಧ್ಯವನ್ನು ಅಭಿವೃದ್ಧಿಗೊಳಿಸು ವುದಾಗಿ ತಿಳಿಸಿದರು.
