Published On: Tue, Jun 6th, 2023

ವಾಮದಪದವು ಕಾಲೇಜಿನಲ್ಲಿ ವಿಜ್ಞಾನ ಮಾದರಿಗಳು ಹಾಗೂ ಔಷಧೀಯ ಗುಣವುಳ್ಳ ಸಸ್ಯಗಳ ಪ್ರದರ್ಶನ

ಬಂಟ್ವಾಳ: ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿಜ್ಞಾನ ಸಂಘ ಮತ್ತು ಪರಿಸರ ಸಂಘದ ಜಂಟಿ ಆಶ್ರಯದಲ್ಲಿ ವಿಶ್ವ ಪರಿಸರ ದಿನ ೨೦೨೩ರ ಪ್ರಯುಕ್ತ ಪರಿಸರ ಮಾಲಿನ್ಯ ಮತ್ತು ಸಂರಕ್ಷಣೆಗೆ ಸಂಬಂಧಿಸಿದ ವಿಜ್ಞಾನ ಮಾದರಿಗಳು ಹಾಗೂ ಔಷಧೀಯ ಗುಣವುಳ್ಳ ಸಸ್ಯಗಳ ಪ್ರದರ್ಶನವನ್ನು ಕಾಲೇಜಿನ ಆವರಣದಲ್ಲಿ ನಡೆಯಿತು.

ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಧಾಕೃಷ್ಣ ಹೆಚ್ .ಬಿ ಅವರು ಔಷಧೀಯ ಗಿಡ ನೆಟ್ಟು ಅದಕ್ಕೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು  ಉದ್ಘಾಟಿಸಿದರು.

 ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ‘ಬೀಟ್ ಪ್ಲಾಸ್ಟಿಕ್ ಪೊಲ್ಯುಷನ್’ ಎಂಬ ವಿಷಯದ ಮೇಲೆ ರಸಪ್ರಶ್ನೆ, ರಂಗೋಲಿ ಹಾಗೂ ಪ್ರಬಂಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ವಿಜ್ಞಾನ ಸಂಘದ ಸಂಯೋಜಕರಾದ ಉಷಾ ಬಿ.ಅವರು ಪರಿಸರ ಸಂಘದ ಸಂಯೋಜಕರಾದ  ಅನಿಲ್ ಕುಮಾರ್ ಎ, ಐಕ್ಯೂಎಸಿ ಸಂಚಾಲಕರಾದ ಡಾ. ಮೋಹನ್‌ದಾಸ್ ಹಾಗೂ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ  ಲಕ್ಷ್ಮೀನಾರಾಯಣ ಕೆ,  ಶುಭಾ ಕೆ. ಉಪಸ್ಥಿತರಿದ್ದರು. 

 ರಾಷ್ಟ್ರೀಯ ಸೇವಾ ಯೋಜನೆ ಘಟಕ-1 ಮತ್ತು 2 ರ ಸ್ವಯಂಸೇವಕರಿಂದ ಸಂಯೋಜಕರುಗಳಾದ ಡಾ. ಮೇರಿ ಎಮ್.ಜೆ ಮತ್ತು ಶಉದಯ್‌ಕುಮಾರ್ ಸಿ. ಆರ್ ಇವರ ನೇತೃತ್ವದಲ್ಲಿ ಸ್ವಚ್ಛತಾ ಶ್ರಮದಾನ ಜರುಗಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter