ರೈತರ ಸಮಸ್ಯೆ: ವಿಧಾನಸಭಾಧ್ಯಕ್ಷ ಖಾದರ್ ಭೇಟಿಯಾಗಿ ಚರ್ಚಿಸಲು ನಿರ್ಧಾರ
ಬಂಟ್ವಾಳ: ರೈತರ ಕುಮ್ಕಿ ಹಕ್ಕು, ರಾಜ ಕಾಲುವೆ ಒತ್ತುವರಿ ತೆರವು,ರೈತರ ಹಾಲಿನ ಪ್ರೋತ್ಸಾಹಧನ ಬಾಕಿ ಪಾವತಿ, ನಿಯಮಿತವಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ರೈತರ ಕುಂದು ಕೊರತೆ ಸಭೆ ನಡೆಸಬೇಕು ಸಹಿತ ವಿವಿಧ ವಿಚಾರಗಳ ಬಗ್ಗೆ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಅವರನ್ನು ಭೇಟಿಯಾಗಿ ಚರ್ಚಿಸಲು ಕರ್ನಾಟಕ ರಾಜ್ಯ ರೈತ ಸಂಘ ತೀರ್ಮಾನಿಸಿದೆ.

ಮಂಗಳವಾರ ಪಾಣೆಮಂಗಳೂರಿನ ಬಂಗ್ಲೆ ಗುಡ್ಡೆ ಶ್ರೀ ಕಲ್ಲುರ್ಟಿ- ಕಲ್ಕುಡ ದೈವಸ್ಥಾನದ ಸಭಾಂಗಣದಲ್ಲಿ ನಡೆದ ರೈತ ಸಂಘದ ಸಭೆಯಲ್ಲಿ ರೈತರ ಸಮಸ್ಯೆಗೆ ಸ್ಪಂದಿಸಲು ರೈತರ ನಿಯೋಗ ಶೀಘ್ರವೇ ಭೇಟಿಯಾಗಲು ತೀರ್ಮಾನ ತೆಗೆದುಕೊಳ್ಳಲಾಯಿತು.
ಬಂಟ್ವಾಳ ತಾಲೂಕು ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿ ಕಂಬಳ ಗುತ್ತು,ತಾಲೂಕು ಕಾರ್ಯದರ್ಶಿ ಸುದೇಶ್ ಮೈಯ, ಬಿ. ದಿಲೀಪ್ ರೈ, ಬೋಜ, ಲಕ್ಷ್ಮಣ,ಸುದೇಶ್ ಶೆಟ್ಟಿ, ಸೋಮನಾಥ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು