ಪ್ರಥಮ ದರ್ಜೆ ಸಹಾಯಕ ಎನ್. ನಾರಾಯಣ ಗೌಡ ಅವರಿಗೆ ಬೀಳ್ಕೊಡುಗೆ
ಬಂಟ್ವಾಳ: ಬಂಟ್ವಾಳ ತಾಲೂಕಿನ ಚುನಾವಣೆ ಶಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎನ್. ನಾರಾಯಣ ಗೌಡ ಅವರು ವಯೋ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಅವರಿಗೆ ಇಂದು ತಾಲೂಕು ಆಡಳಿತ ಸೌಧದಲ್ಲಿ ಗೌರವಾಭಿನಂದನೆ ಸಲ್ಲಿಸಲಾಯಿತು.
![](https://www.suddi9.com/wp-content/uploads/2023/05/c48bfa41-173a-4f2e-a586-762032828a3d-650x366.jpg)
ಬಿ.ಸಿ. ರೋಡಿನಲ್ಲಿರುವ ತಾಲೂಕು ಆಡಳಿತ ಸೌಧದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್ ಎಸ್. ಬಿ ಕೂಡಲಗಿ ಅವರು ಸರಳ ವ್ಯಕ್ತಿತ್ವದ, ನೇರ ನಡೆ ನುಡಿಯ ನಾರಾಯಣ ಗೌಡರು ಚುನಾವಣೆಯ ವಿಷಯ ನಿರ್ವಾಹಕರಾಗಿ ಸಮರ್ಥವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇವರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು.
![](https://www.suddi9.com/wp-content/uploads/2023/05/0dfb1396-9e48-4590-9755-eceb212f7ddd-650x488.jpg)
ಸನ್ಮಾನ ಸ್ವೀಕರಿಸಿ ಮಾತನಾಡಿದ ಎನ್ ನಾರಾಯಣ ಗೌಡ ಅವರು ಕರ್ತವ್ಯ ನಿರ್ವಹಣೆಯಲ್ಲಿ ಸಹಕಾರ ನೀಡಿದ ಎಲ್ಲಾ ಅಧಿಕಾರಿಗಳಿಗೆ ಮತ್ತು ಸಹೋದ್ಯೋಗಿಗಳಿಗೆ ಧನ್ಯವಾದ ಸಲ್ಲಿಸಿದರು.ಸಹೋದ್ಯೋಗಿಗಳು, ಗ್ರಾಮ ಆಡಳಿತ ಆಧಿಕಾರಿಗಳು, ಕಚೇರಿ ಸಿಬ್ಬಂದಿಗಳು, ಗ್ರಾಮ ಸಹಾಯಕರು ನಾರಾಯಣ ಗೌಡ ಅವರಿಗೆಶುಭ ಹಾರೈಸಿದರು.
![](https://www.suddi9.com/wp-content/uploads/2023/05/00d22c7d-ee83-4ac1-bde4-e023734f0193-650x488.jpg)
ಈ ಸಂದರ್ಭದಲ್ಲಿ ಉಪತಹಸೀಲ್ದಾರ್ ನರೇಂದ್ರನಾಥ ಮಿತ್ತೂರು,ವಿಜಯ್ ವಿಕ್ರಮ್, ದಿವಾಕರ ಮುಗುಳಿಯ ಕಂದಾಯ ನಿರೀಕ್ಷಕರಾದ ವಿಜಯ್ ಆರ್, ಜನಾರ್ಧನ ಜೆ, ತಾಲೂಕು ಕಚೇರಿ ಸಿಬ್ಬಂದಿಗಳು ಗ್ರಾಮ ಆಡಳಿತ ಆಧಿಕಾರಿಗಳು, ಗ್ರಾಮ ಸಹಾಯಕರು ಉಪಸ್ಥಿತರಿದ್ದರು. ವಿಟ್ಲ ಹೋಬಳಿ ಕಂದಾಯ ನಿರೀಕ್ಷಕರಾದ ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು.
ಉಪತಹಸೀಲ್ದಾರ್ ನವೀನ್ ಬೆಂಜನಪದವು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಲ್ಲಿಸಿದರು.