ತೀರ್ಥಹಳ್ಳಿ: ತೀರ್ಥಹಳ್ಳಿಯ ಅಮಾಯಯ ಬಾಲಕಿ ನಂದಿತಾ ಸಾವನ್ನಪ್ಪಿದ್ದು ಇಲಿಪಾಷಾನ ಸೇವಿಸಿ ಎಂಬ ವರದಿ ನೀಡಿದೆ. ಆಕೆ ಸೇವಿಸಿದ ಇಲಿಪಾಷಾನದಲ್ಲಿ ಪಾಸ್ಪರಸ್ ಅಂಶ ಸಿಕ್ಕಿರುವುದರಿಂದ ಆಕೆಯ ದೇಹಕ್ಕೆ ನಿಧಾನವಾಗಿ ಪರಿಣಾಮ ಬೀರಿ ಆಕೆ ಮೃತಪಟ್ಟಿದ್ದಾಳೆ ಎಂದು ವರದಿಯಲ್ಲಿ ತಿಳಿಸಿದೆ.

ಈ ಮೊದಲು ವಿಧಿವಿಜ್ಞಾನ ಪ್ರಯೋಗಾಲಯ ನಂದಿತಾ ಬಿಪಿ ಮಾತ್ರೆಯನ್ನು ಅತಿ ಸೇವಿಸಿ ಸಾವಿಗೆ ಶರಣಾಗಿದ್ದಳೆಂದು ತಿಳಿಸಿತ್ತು. ಅದಕ್ಕಿಂತ ನಂತ್ರ ನಿದ್ರೆಯ ಮಾತ್ರೆಯನ್ನು ಸೇವಿಸಿ ಸಾವನ್ನಪ್ಪಿದ್ದಾಳೆ ಎಂದು ತಿಳಿಸಿತ್ತು. ಇದೀಗ ನೀಡಿದ ವರದಿಯಲ್ಲಿ ಇಲಿಪಾಷಾನ ಸೇವಿಸಿ ನಂದಿತ ಮೃತಪಟ್ಟಿರುವುದು ಮತ್ತಷ್ಟು ಸಂಶಯಕ್ಕೆ ಕಾರಣವಾಗಿದೆ.

ನಂದಿತಾ ಪೂಜಾರಿ
ನಂದಿತಾ ಪೂಜಾರಿ

ನಂದಿತಾ ಪ್ರಕರಣ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಲೇ ಬರುತ್ತಿದೆ. ಆಕೆ ನಿಜವಾಗಿಯೂ ಹೇಗೆ ಸತ್ತ:ಉ ಎಂಬುವುದನ್ನು ತಿಳಿಸಲು ಪೊಲೀಸರು ವಿಫಲರಾಗಿದ್ದಾರೆ. ಅದೂ ಅಲ್ಲದೆ ಆಕೆಗೆ ಇಲಿಪಾಷಾನ ಕೊಟ್ಟಿದ್ದು ಯಾರು ಎಂಬ ಸಂಶಯ ಇನ್ನೂ ಹೋಗಿಲ್ಲ. ಇಷ್ಟೆಲ್ಲಾ ವರದಿಗಳನ್ನು ನೋಡಿದಾಗ ನಂದಿತಾ ಸಾವಿನ ಪ್ರಕರಣ ಮೂಲೆಗೆ ಸರಿಯಬಹುದೆನ್ನುವ ಸಂಶಯ ಬಲಗೊಳ್ಳುತ್ತಿದೆ.
ತೀರ್ಥಹಳ್ಳಿಯ ನಂದಿತಾ ಅನುಮಾಸ್ಪಾದವಾಗಿ ಸಾನನ್ನಪ್ಪಿದ್ದು ಆಕೆಯ ಸಾವಿನ ಹಿಂದೆ ಆಕೆಯ ಗೆಳೆಯ ಸೋಹನ್ ಕೈವಾಡವಿದೆ ಎಂದು ಮೃತ ಬಾಲಕಿಯ ತಂದೆ ಕೃಷ್ಣಮೂತರ್ಿ ಈ ಹಿಂದೆ ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದರು. ಆಕೆಯನ್ನು ಕೊಲೆ ಮಾಡಿದವರನ್ನು ತಕ್ಷಣವೇ ಬಂಧಿಸುವಂತೆ ಅನೇಕ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿದ್ದವು. ಈ ನಡುವೆ ಇಂದು ಪ್ರಯೋಗಲಾಯ ಬಹಿರಂಗಪಡಿಸಿರುವ ವರದಿ ಕೂಡಾ ಪ್ರಕರಣಕೆ ಇನ್ನೊಂದು ಆಯಾಮ ನೀಡಿದೆ.

 

By Suddi9

Leave a Reply

Your email address will not be published. Required fields are marked *