ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲಾ ಸಂಘ ಚಾಲಕ ಕೊಡ್ಮಾಣ್ ಕಾಂತಪ್ಪ ಶೆಟ್ಡಿಯವರಿಗೆ ನುಡಿನಮನ
ಬಂಟ್ವಾಳ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲಾ ಸಂಘ ಚಾಲಕ, ಸಾಮಾಜಿಕ,ಧಾರ್ಮಿಕ,ಸಹಕಾರಿ ದುರೀಣ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಅವರನಿಧನದ ಹಿನ್ನಲೆಯಲ್ಲಿ ನುಡಿನಮನ ಕಾರ್ಯಕ್ರಮವು ಬಿ.ಸಿ.ರೋಡಿನ ಗೀತಾಂಜಲಿ ಸಭಾಂಗಣದಲ್ಲಿನಡೆಯಿತು.

ಆರ್ ಎಸ್ ಎಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ಮಾತನಾಡಿ,ಸದಾ ನಗುಮುಖ, ಗಂಭೀರ ವ್ಯಕ್ತಿತ್ವ,ನೇರ ನಡೆ ನುಡಿಯವರಾಗಿದ್ದ ಕಾಂತಪ್ಪ ಶೆಟ್ಟಿಯವರು ಹೃದಯ ವೈಶಾಲ್ಯತೆಯುಳ್ಳವರಾಗಿದ್ದರು.ಅವರು ಮೈಗೂಡಿಸಿದ್ದ ಆದರ್ಶ ,ವ್ಯಕ್ತಿತ್ವ,ಸರಳತೆ ಯುವ ಸಮುದಾಯಕ್ಕೆ ಪ್ರರೇಣೆಯಾಗಿದೆ ಎಂದರು.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ,ವಿಧಾನ ಪರಿಷತ್ ಸದಸ್ಯರಾದ ಪ್ರತಾಪ ಸಿಂಹ ನಾಯಕ್,ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಹಿ.ಜಾ.ವೇ.ಮುಖಂಡ ರಾಧಕೃಷ್ಣ ಅಡ್ಯಾಂತಾಯ , ಬಿಜೆಪಿ ನಾಯಕಿ ಸುಲೋಚನಾ ಜಿ.ಕೆ ಭಟ್ ಅವರು ಕಾಂತಪ್ಪ ಶೆಟ್ಟಿಯವರೊಂದಿಗಿನ ಒಡನಾಟವನ್ನು ಸ್ಮರಿಸಿದರು.ವಿಟ್ಲ ತಾಲೂಕು ಸಂಘಚಾಲಕರಾದ
ಸುಬ್ರಹ್ಮಣ್ಯ ಭಟ್ ಕೆದಿಲ,ನುಡಿನಮನ ಸಲ್ಲಿಸಿದರು.
ಬಂಟ್ವಾಳ ತಾಲೂಕು ಸಂಘಚಾಲಕರಾದ ಡಾ.ಬಾಲಕೃಷ್ಣ, ಬೆಳ್ತಂಗಡಿ ತಾಲೂಕು ಸಂಘಚಾಲಕರಾದ ಗಣೇಶ್ , ಕಡಬ ತಾಲೂಕು ಸಂಘಚಾಲಕರಾದ ದಿವಾಕರ್, ಸುಳ್ಯ ತಾಲೂಕು ಸಹ ಸಂಘಚಾಲಕರಾದ ಪ್ರದ್ಯಮ್ನ ,ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತರಾಮ್ ಸುಳ್ಯ ,
ಮಂಗಳೂರು ಮಹಾನಗರ ಸಹ ಸಂಘಚಾಲಕರಾದ ಸುನೀಲ್ ಆಚಾರ್, ಸಹವಿಭಾಗ ಪ್ರಚಾರಕ್ ಅನಂತಕೃಷ್ಣ,ವಿವೇಕಾನಂದ ಆಳ್ವ ಕೊಡ್ಮಣ್ , ವಿಭಾಗ ಶಾರೀರಿಕ ಪ್ರಮುಖ್ ವಿನೋದ್, ಪುತ್ತೂರು ಜಿಲ್ಲಾ ಕಾರ್ಯವಾಹ ನವೀನ್ ಪ್ರಸಾದ , ಜಿಲ್ಲಾ ಸಹ ಕಾರ್ಯವಾಹ ಸಂತೋಷ ಕಾಫಿನಡ್ಕ , ಜಿಲ್ಲಾ ಪ್ರಚಾರಕ್ ಸುಧೀಶ್ ಉಪಸ್ಥಿತರಿದ್ದರು.
ಪ್ರಸಾದ್ ಪಿ ಕಾರ್ಯಕ್ರಮ ನಿರ್ವಾಹಿಸಿದರು , ಸದಾಶಿವ ಆಚಾರ್ಯ ಅವರು ವೈಯಕ್ತಿಕ ಗೀತೆಯನ್ನು ಹಾಡಿದರು.