ಉತ್ತಮ ಮಳೆಗಾಗಿ ನೆಟ್ಲ ದೇವಳದಲ್ಲಿ ಸೀಯಾಳಾಭಿಷೇಕ
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್( ರಿ) ವಿಟ್ಲ ಇದರ ಸ್ವಸಾಯ ಸಂಘಗಳ ಒಕ್ಕೂಟ ಕಲ್ಲಡ್ಕ ವಲಯ ಹಾಗೂ ಯೋಜನೆಯ ವಿಪತ್ತು ನಿರ್ವಹಣಾ ಶೌರ್ಯ ತಂಡ, ಕಲ್ಲಡ್ಕ ವಲಯ ಜನಜಾಗೃತಿ ವೇದಿಕೆ ನವ ಜೀವನ ಸಮಿತಿಇವುಗಳ ಜಂಟಿ ಆಶ್ರಯದಲ್ಲಿ ಬುಧವಾರ ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ನೆಟ್ಲ ಶ್ರೀ ನಿಟಿಲೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಸೀಯಾಳಾಭಿಷೇಕ ನಡೆಯಿತು.

ಈ ವರ್ಷ ಉತ್ತಮ ಮಳೆಯಾಗಿ ಯಾವುದೇ ಅನಾಹುತಗಳು ಸಂಭವಿಸದೆ ಇಡೀ ಗ್ರಾಮ,ಸೀಮೆಗೆ ಸುಭಿಕ್ಷೆ ಯಾಗಲಿ ಎಂಬ ಆಶಯದೊಂದಿಗೆ ಶ್ರೀ ದೇವರಿಗೆ ಸೀಯಾಳಾಭಿಷೇಕ ನಡೆಸಲಾಯಿತು. ನಂತರ ಸಾರ್ವಜನಿಕಅನ್ನ ಸಂತರ್ಪಣೆಯು ನೆರವೇರಿತು.

ಈ ಸಂದರ್ಭದಲ್ಲಿ ಜನ ಜಾಗೃತಿ ವೇದಿಕೆಯ ಕಲ್ಲಡ್ಕ ವಲಯ ಅಧ್ಯಕ್ಷ ಭಟ್ಯಪ್ಪ ಶೆಟ್ಟಿ, ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣಶೆಟ್ಟಿ, ಶೌರ್ಯ ವಿಪತ್ತು ತಂಡದ ಅಧ್ಯಕ್ಷ ಮಾಧವ ಸಾಲಿಯನ್ ಕುದ್ರೆಬೆಟ್ಟು, ಕಲ್ಲಡ್ಕ ವಲಯಕ್ಕೆ ಸಂಬಂಧಪಟ್ಟ ಒಕ್ಕೂಟಗಳ ಅಧ್ಯಕ್ಷರುಗಳಾದ ಸೀತಾರಾಮ್ ಶೆಟ್ಟಿ, ಶಾಂಭವಿ, ಸೀತಾ, ದಯಾನಂದ, ಒಕ್ಕೂಟಗಳ ಸೇವಾ ಪ್ರತಿನಿಧಿಗಳು, ಯೋಜನೆಯ ಸ್ವಸಹಾಯ ಗುಂಪಿನ ಸದಸ್ಯರುಗಳು, ಜನಜಾಗೃತಿ ವೇದಿಕೆಯ ಸದಸ್ಯರುಗಳು, ಶೌರ್ಯ ವಿಪತ್ತು ತಂಡದ ಸದಸ್ಯರುಗಳು, ಸ್ಥಳೀಯರು ಹಾಗೂ ಭಕ್ತರು ಭಾಗವಹಿಸಿದ್ದರು. ಸುಮಾರು 1500 ಸೀಯಳ ಅಭಿಷೇಕ ಮಾಡಲಾಯಿತು.