ಶ್ರೀ ಮುಖ್ಯಪ್ರಾಣ ದೇವರಿಗೆ ಸಂಭ್ರಮದ ಬ್ರಹ್ಮಕಲಶ
ಕೈಕಂಬ: ಅಡ್ಡೂರು ಶ್ರೀ ಮುಖ್ಯಪ್ರಾಣ ದೇವಸ್ಥಾನದ ಪ್ರತಿಷ್ಟಾoಗ ಅಷ್ಟ ಬಂಧ ಬ್ರಹ್ಮಕಲಶಾಭಿಷೇಕವು ಕೊಡಿಮಜಲು ಶ್ರೀ ಅನಂತ ಪದ್ಮಾನಾಭ ಉಪಾಧ್ಯಯ ಅವರ ನೇತ್ರತ್ವದಲ್ಲಿ ಮೇ.7ರಂದು ಭಾನುವಾರ ವಿಜೃಂಭಣೆಯಿಂದ ನಡೆಯಿತು.
ದೇವಳದ ಅರ್ಚಕ ಎನ್ ಚಂದ್ರಶೇಖರ ಭಟ್, ನೂಯಿ ಬಾಲಕೃಷ್ಣ ರಾವ್, ಅಧ್ಯಕ್ಷ ಧನಂಜಯ ಗಂದಾಡಿ, ಜೀರ್ಣೋಧರ ಸಮಿತಿ ಅಧ್ಯಕ್ಷ ರವಿಶಂಕರ್ ರಾವ್ ನೂಯಿ ಹಾಗೂ ಸದಸ್ಯರು ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಜೀರ್ಣೋದ್ದಾರ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು.