ದತ್ತು ಪಡೆದ ಕುಟುಂಬದ ಹಿರಿಯ ಪುತ್ರಿಗೆ ವಿವಾಹ ನೆರವೇರಿಸಿ ಸಾರ್ವತ್ರಿಕ ಶ್ಲಾಘನೆಗೊಳಗಾದ ಮಂಚಿ ಘಟಕದ ವಿ.ಹಿಂ.ಪ.,ಬಜರಂಗದಳ
ಬಂಟ್ವಾಳ: ಒಂದು ಕುಟುಂಬವನ್ನ ದತ್ತು ಪಡೆದುಕೊಂಡು ಅವರಿಗೆ ಆಶ್ರಯ ಕೊಡುವುದರ ಜೊತೆಗೆ ಆ ಕುಟುಂಬದ ಹಿರಿಯ ಪುತ್ರಿಗೆ ವಿವಾಹವನ್ನು ನೆರವೇರಿಸುವ ಬಂಟ್ವಾಳ ತಾಲೂಕಿನ ಮಂಚಿ ಘಟಕದ “ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ” ಕಾರ್ಯಕರ್ತರ ಈ ಮಹತ್ಕಾರ್ಯ ಸಾರ್ವತ್ರಿಕ ಶ್ಲಾಘನೆಗೊಳಗಾಗಿದೆ.
ಕಳೆದ 5 ವರ್ಷದ ಹಿಂದೆ ಕುಟುಂಬವೊಂದನ್ನು ಪುತ್ತೂರು ಜಿಲ್ಲೆಯ ಬಂಟ್ವಾಳ ತಾ.ನ ಕಲ್ಲಡ್ಕ ಪ್ರಖಂಡ,ಮಂಚಿ ಗ್ರಾಮ ಸಮಿತಿಯ ವಿಶ್ವ ಹಿಂದೂ ಪರಿಷದ್ ಬಜರಂಗದಳ ಘಟಕದ ಕಾರ್ಯಕರ್ತರು ದತ್ತು ಪಡೆದಿದ್ದರು.ಆ ಮೂಲಕ ಕುಟುಂಬಕ್ಕೆ ಎಲ್ಲಾ ರೀತಿಯ ನೆರವು, ಆಶ್ರಯ ಕೊಡುವುದರ ಜೊತೆಗೆ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡಿ, ಆ ಕುಟುಂಬದ ಹಿರಿಯ ಪುತ್ರಿಗೆ ಎ. 30 ರಂದು ಮಂಚಿ ದೇವಸ್ಥಾನದಲ್ಲಿ ವಿವಾಹವನ್ನು ಕೂಡ ನೆರವೇರಿಸಿ” ಸೇವೆಗೆ ಇನ್ನೊಂದು ಹೆಸರೇ ವಿಶ್ವಹಿಂದೂ ಪರಿಷತ್,ಬಜರಂಗದಳ ಎಂಬುದನ್ನು ಮತ್ತೊಮ್ಮೆ ಸಾಭೀತು ಪಡಿಸಿದೆ.
ಮಂಚಿ ಘಟಕದ ವಿ.ಹಿಂ.ಪ., ಬಜರಂಗದಳ ಕಾರ್ಯಕರ್ತರ ಈ ಸೇವಾ ಕಾರ್ಯಕ್ಕೆ ವ್ಯಾಪಕವಾದ ಪ್ರಶಂಸೆ ಕೂಡ ವ್ಯಕ್ತವಾಗಿದೆ.
ಈ ಶುಭ ಕಾರ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಡಾ. ಕಲ್ಲಡ್ಕ ಪ್ರಭಾಕರ್ ಭಟ್, ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿಗಳಾದ ಶರಣ್ ಪಂಪುವೆಲ್, ಬಜರಂಗದಳ ವಿಭಾಗ ಸಹ ಸಂಯೋಜಕರಾದ ಪುನೀತ್ ಅತ್ತಾವರ, ವಿಶ್ವ ಹಿಂದೂ ಪರಿಷತ್ತಿನ ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ. ಪ್ರಸನ್ನ ,ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ವಿಶ್ವ ಹಿಂದೂ ಪರಿಷತ್ತ್ ಬಂಟ್ವಾಳ ಪ್ರಖಂಡ ಅಧ್ಯಕ್ಷರಾದ ಪ್ರಸಾದ್ ಕುಮಾರ್ ರೈ, ವಿಶ್ವ ಹಿಂದೂ ಪರಿಷತ್ ಕಲ್ಲಡ್ಕ ಪ್ರಖಂಡ ಕಾರ್ಯದರ್ಶಿ ಲೋಹಿತ್ ಪಣೋಲಿಬೈಲ್, ಸಚಿನ್ ಮೆಲ್ಕಾರ್, ವಿಜಿತ್ ಮಂಚಿ ,ರಮೇಶ್ ರಾವ್ ಪತ್ತುಮಡಿ ಹಾಗೂ ಕಾರ್ಯಕರ್ತರು ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.