ಬಂಟ್ವಾಳ; ಮನೆಯಿಂದಲೇ ಮತದಾನಕ್ಕೆ ಚಾಲನೆ
ಬಂಟ್ವಾಳ : ಎಂಭತ್ತು ವರ್ಷ ಮೇಲ್ಪಟ್ಟ ಹಾಗೂ ವಿಕಲಚೇತನ ಮತದಾರರಿಗೆ ಮನೆಯಲ್ಲೇ ಮತದಾನ ಮಾಡುವ ಚುನಾವಣಾ ಆಯೋಗದ ನಿರ್ದೇಶನದಂತೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ 25 ಸೆಕ್ಟರ್ ವ್ಯಾಪ್ತಿಯಲ್ಲಿ ಅಂಚೆ ಮತದಾನಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ಓರ್ವ ಮೈಕ್ರೋ ವೀಕ್ಷಕರು, ಇಬ್ಬರು ಪೋಲಿಂಗ್ ಅಧಿಕಾರಿಗಳು , ಓರ್ವ ವೀಡಿಯೋ ಗ್ರಾಫರ್, ಹಾಗೂ ಪೊಲೀಸ್ ಸಿಬ್ಬಂದಿ ಸೇರಿದಂತೆ ಐದು ಮಂದಿ ಸಿಬ್ಬಂದಿಗಳ ತಂಡವು ಪ್ರತಿ ಅರ್ಹ ಮತದಾದರರ ಮನೆಗೆ ತೆರಳಿ ಮನೆಯಿಂದಲೇ ಮತದಾನ ಮಾಡಿಸುವ ಸಲುವಾಗಿ ಈ ಕ್ರಮವನ್ನು ಆಯೋಗವು ಜಾರಿ ಮಾಡಿದೆ.
ಬಂಟ್ವಾಳ ವ್ಯಾಪ್ತಿಯಲ್ಲಿ ಚುನಾವಣಾ ತಂಡಗಳನ್ನು ಅಗತ್ಯ ನಿರ್ದೇಶನ ನೀಡಿ ಕಳುಹಿಸಿ ಕೊಡಲಾಯಿತು. ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ಆಬಿದ್ ಗದ್ಯಾಲ್ , ಸಹಾಯಕ ಚುನಾವಣಾ ಅಧಿಕಾರಿ ಕೂಡಲಿಗಿ , ನೋಡಲ್ ಅಧಿಕಾರಿ ಸುನಿತಾ ಕುಮಾರಿ, ಮಾಸ್ಟರ್ ಟ್ರೈನರ್ ಅಬ್ದುಲ್ ರಝಾಕ್, ಉಪತಹಶೀಲ್ದಾರ್ ಗಳಾದ ನವೀನ್ ಕುಮಾರ್, ರಾಜೇಶ್ ನಾಯ್ಕ್ , ನರೇಂದ್ರ ನಾಥ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.