ಮೇ. 20-25 ವರೆಗೆ ಬೆಂಜನಪದವು ಶ್ರೀ ಭದ್ರಕಾಳಿ ದೇವಿ ಹಾಗೂ ಸಪರಿವಾರ ದೈವ ದೇವರ ಪುನರ್ ಪ್ರತಿಷ್ಟಾ ಬ್ರಹ್ಮಕಲಶೋತ್ಸವ
ಬಂಟ್ವಾಳ : ತಾಲೂಕಿನ ಅಮ್ಮುಂಜೆಗ್ರಾಮದ ಬೆಂಜನಪದವು ಶ್ರೀ ಭದ್ರಕಾಳಿ ದೇವಿ ಹಾಗೂ ಸಪರಿವಾರ ದೈವ ದೇವರ ಪುನರ್ ಪ್ರತಿಷ್ಟಾ ಬ್ರಹ್ಮಕಲಶೋತ್ಸವವು ಕ್ಷೇತ್ರದ ತಂತ್ರಿಗಳಾದ ಲೋಕೇಶ್ ಶಾಂತಿಯವರ ನೇತೃತ್ವದಲ್ಲಿ ಮೇ.20 ರಿಂದ 25 ರವರೆಗೆ ವಿವಿಧ ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ದೇವಳದ ಪನರ್ ರ್ನಿರ್ಮಾಣ ಸಮಿತಿ ಅಧ್ಯಕ್ಷ ಕೆ.ಪಿ.ಶೆಟ್ಟಿ ಮೊಡಂಕಾಪುಗುತ್ತು ಹೇಳಿದ್ದಾರೆ.
ಕ್ಷೇತ್ರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,ಸುಮಾರು ಎರಡು ಕೋ.ರೂ.ವೆಚ್ಚದಲ್ಲಿ ಸಂಪೂರ್ಣ ಶಿಲಾಮಯವಾಗಿ ಕ್ಷೇತ್ರದ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿದ್ದು,ಕಾಮಗಾರಿ ಅಂತಿಮ ಹಂತದಲ್ಲಿದೆ ಎಂದರು.ಬೆಂಜನಪದವಿನಲ್ಲಿ ಕಂಗೊಳಿಸುವ ಪಣ್ಯಕ್ಷೇತ್ರ ಶ್ರೀ ಭದ್ರಕಾಳಿ ದೇವಸ್ಥಾನವು ಕಳೆದ ನಾಲ್ಕು ದಶಕಗಳಿಂದ ಭಗವದ್ಬಕ್ತರಿಗೆ ಆಸರೆಯ ತಾಣವಾಗಿದ್ದು,ನಂಬಿದವರಿಗೆ ಇಂಬು ನೀಡುವ ಕ್ಷೇತ್ರವಾಗಿಯು ಪ್ರಸಿದ್ದಿಯನ್ನು ಪಡೆದಿದೆ ಎಂದರು.
ಮೇ.21 ರಂದು ಹೊರೆಕಾಣಿಕೆ,22 ರಂದು ಪ್ರತಿಷ್ಠೆ,24 ರಂದು ಬ್ರಹ್ಮಕಲಶ ಹಾಗು 25 ರಂದು ಧರ್ಮ ದೈವಗಳಿಗೆ ಗಗ್ಗರ ಸೇವೆ ನಡೆಯಲಿದೆ ಎಂದು ವಿವರಿಸಿದ ಅವರು ಬ್ರಹ್ಮಕಲಶೋತ್ಸವ ಸಂದರ್ಭದ ಪ್ರತಿನಿತ್ಯ ನಡೆಯುವ ಧಾರ್ಮಿಕ ಸಭೆಯಲ್ಲಿ ಜಿಲ್ಲೆಯ ವಿವಿಧ ಮಠಾಧೀಶರಿಂದ ಆಶೀರ್ವಚನ, ಧಾರ್ಮಿಕ ಮುಖಂಡರಿಂದ ಉಪನ್ಯಾಸ ,ಭಜನೆ,ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ,ಪ್ರ.ಕಾರ್ಯದರ್ಶಿ ಬಿ.ಜನಾ೯ಧನ ಅಮ್ಮುಂಜೆ, ಧರ್ಮದರ್ಶಿ ರಮೇಶ್ ಬಿ.ಬೆಂಜನಪದವು, ಶ್ರೀ ಭದ್ರಕಾಳೀ ಸೇವಾಸಮಿತಿ ಗೌರವಾಧ್ಯಕ್ಷ ಈಶ್ವರ ಬೆಳ್ಚಡ ಬೆಂಜನಪದವು,ಪ್ರ.ಕಾರ್ಯದರ್ಶಿ ಚಂದ್ರಶೇಖರ ಸುವರ್ಣ, ಗುಳಿಗಪಾತ್ರಿ ಬಾಬುಕೊಟ್ಟಾರಿ ವಳಚ್ಚಿಲ್ ,ಪುನರ್ ರ್ನಿರ್ಮಾಣ ಸಮಿತಿ ಪ್ರ.ಕಾರ್ಯದರ್ಶಿ ಉಮೇಶ್ ಸಾಲಿಯಾನ್,ಮಹಿಳಾ ಸಮಿತಿ ಅಧ್ಯಕ್ಷೆ ರೇಖಾ ಉಮೇಶ್ ಸಾಲ್ಯಾನ್,ಯುವ ವೇದಿಕೆ ಗೌರವಾಧ್ಯಕ್ಷ ಸಂದೀಪ್ ಬಿ.,ಅಧ್ಯಕ್ಷ ಭರತ್ ರಾಜ್,ಸಮಿತಿ ಪದಾಧಿಕಾರಿಗಳಾದರಾಮಚಂದ್ರ ಮಾರಿಪಲ್ಲ,ದಾಮೋದರ ಕೋಟ್ಯಾನ್ ತುಂಗ,ಚಿತ್ತರಂಜನ್,ಸದಾಶಿವ ಮೊಯಿಲಿ,ದಯಾನಂದ ತುಂಬೆ, ಡಾ.ಸತೀಶ್ ಕುಮಾರ್ ವಿವಿಧ ಘಟಕಗಳ ಹಾಗೂ ಉಪಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.