ಬಜ್ಪೆ: ಮಕ್ಕಳು ಬೌದ್ಧಿಕವಾಗಿ ಬೆಳೆಯುವ ಜೊತೆಗೆ ದಿನಾಲೂ ಉತ್ತಮ ಆಹಾರ ಪೂರೈಸುವುದು ಹೆತ್ತವರ ಕರ್ತವ್ಯ. ಆಹಾರದಲ್ಲಿ ಹಾಲು, ಮೊಟ್ಟೆ ಮೀನು ಮಾಂಸ ಹಣ್ಣು ಹಂಪಲು ತರಕಾರಿ ಬೇಳೆಕಾಳು ದವಸ ಧಾನ್ಯ ಇತ್ಯಾದಿ ಒದಗಿಸುತ್ತಿರಬೇಕು ಎಂದು ದಿಶಾ ಸಂಸ್ಥೆಯ ಸಂಯೋಜಕರಾದ ಹೆನ್ರಿ ವಾಲ್ಡರ್ ನುಡಿದರು.
ಅವರು ಅ.23ರಂದು ಕುಪ್ಪೆಪದವಿನ ಬೊಳಿಯದ ಅಂಬೇಡ್ಕರ್ ಭವನದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಸಮಾಜಕಾರ್ಯ ವಿಭಾಗ ಮತ್ತು ದಿಶಾ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಏರ್ಪಡಿಸಿದ ಮಕ್ಕಳ ಬೆಳವಣಿಗೆಗೆ ಹೆತ್ತವರ ಪಾತ್ರ ಮತ್ತು ಸ್ವಚ್ಛ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಈ ಮಾತನ್ನು ಹೇಳಿದರು.

henri
ನಂತರ ಮಾತಾಡಿದ ಅವರು ಸಮತೋಲನ ಆಹಾರದಿಂದ ಸಮತೂಕದ ಮಕ್ಕಳು ಸಮಾಜಕ್ಕೆ ದೊರೆಯುವರು. ಈ ನಿಟ್ಟಿನಲ್ಲಿ ಹೆತ್ತವರು ಜವಾಬ್ದಾರಿ ವಹಿಸಬೇಕು ಎಂದು ಅವರು ಕರೆ ನೀಡಿದ್ದಾರೆ. ಕುಪ್ಪೆಪದವು ಪಂಚಾಯತ್ ಉಪಧ್ಯಾಕ್ಷರಾದ ಪುಷ್ಪಲತ, ಸದಸ್ಯ ಸತೀಶ್ ಬಲ್ಲಾಜೆ, ದಿಶಾ ಸಂಸ್ಥೆ ಕಾರ್ಯಕತರ್ೆ ಸುಮಂಗಳ, ನೇಸರ ಪರಿಸರ ಸಮಿತಿ ಶಾಂತ ಮತ್ತು ಹೊನ್ನಯ ಉಪಸ್ಥಿತರಿದ್ದರು. ಕು.ಪ್ರತಿಮಾ ಕಾರ್ಯಕ್ರಮ ನಿರೂಪಿಸಿದರು, ಚಿತ್ರಾವತಿ ವಂದಿಸಿದರು.

 

 

 

 

 

 

By suddi9

Leave a Reply

Your email address will not be published. Required fields are marked *