ಮೂಡುಬಿದಿರೆ: ಜಿ.ಕೆ. ಎಂಟರ್‌ಪ್ರೈಸಸ್ ಮಾಲಕ ಗಣೇಶ್ ಕಾಮತ್ ಶುಕ್ರವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಪುತ್ರಿ ಅಗಲಿದ್ದಾರೆ.

ಮೂಡುಬಿದಿರೆಯಲ್ಲಿರುವ ತನ್ನ ಎಂಟರ್ ಪ್ರೈಸಸ್‌ಗೆ ಆಗಮಿಸುತ್ತಿದ್ದಾಗ ಹೃದಯದ ನೋವಿಗೊಳಗಾಗಿ ಆಸ್ಪತ್ರೆ ಸೇರುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ಕಾರ್ಕಳದ ಗಾಂಧಿ ಮೈದಾನದಲ್ಲಿ ಹಗಲು-ರಾತ್ರಿ ಕ್ರಿಕೆಟ್ ಪಂದ್ಯಾಟಕ್ಕಾಗಿ ಲೈಟಿಂಗ್ಸ್ ಅಳವಡಿಸುತ್ತಿದ್ದಾಗ ವಿದ್ಯುತ್ ಆಘಾತಕ್ಕೊಳಗಾಗಿ ತನ್ನೆರಡು ಕೈಗಳನ್ನು ಕಳೆದುಕೊಂಡರೂ ಧೃತಿಗೆಡದೆ ತನ್ನದೇ ಆದ ಜಿ.ಕೆ. ಎಂಟರ್‌ಪ್ರೈಸಸ್ ಉದ್ಯಮವನ್ನು ಪ್ರಾರಂಭಿಸಿದ್ದರು. ಕಳೆದ ಕೆಲವು ವರ್ಷಗಳ ಹಿಮದೆಯಷ್ಟೆ ಪಡುಮಾರ್ನಾಡಿನಲ್ಲಿ ಜಿ.ಕೆ ಗಾರ್ಡನ್ ಅನ್ನು ಪ್ರಾರಂಭಿಸಿ ಮುನ್ನಡೆಸುತ್ತಿದ್ದರು.

By suddi9

Leave a Reply

Your email address will not be published. Required fields are marked *