Published On: Tue, Feb 14th, 2023

ಗುರುಪುರ ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದ ಬಂಡಿ ಜಾತ್ರೆ

ಕೈಕಂಬ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದಲ್ಲಿ ಮಂಗಳವಾರ(ಫೆ. ೧೪ರಂದು ಮಂಗಳವಾರ ಕಾಲಾವಧಿ ಬಂಡಿ ಜಾತ್ರೆಯು ಅದ್ದೂರಿಯಿಂದ ನಡೆಯಿತು.

ಪ್ರಾತಃಕಾಲ ೫ ಗಂಟೆಗೆ ದೈವಸ್ಥಾನಕ್ಕೆ ಭಂಡಾರ ಆಗಮನದ ಬಳಿಕ ೧೦ ಗಂಟೆಗೆ `ಗರುಡ’ ಧ್ವಜಾರೋಹಣವಾಯಿತು. ದೈವ ಪಾತ್ರಿಗಳ ದರ್ಶನ, ಪಲ್ಲಕಿ ಬಲಿಯ ನಂತರ ಭಕ್ತಾಧಿಗಳು ದೈವಗಳಿಗೆ ಸಲ್ಲಿಸಿದ ಹರಕೆಯಂತೆ ನೂರಾರು ಭಕ್ತರಿಂದ ಕಂಚಿಲು ಸೇವೆ ಮತ್ತು ಉರುಳು ಸೇವೆ ನಡೆಯಿತು.

ಪಲ್ಲಪೂಜೆ ನಡೆದ ಬಳಿಕ ಮಧ್ಯಾಹ್ನ ೧ ಗಂಟೆಗೆ ಮಹಾ ಅನ್ನಸಂತರ್ಪಣೆ, ಸಂಜೆ ಶ್ರೀ ಮೈಸಂದಾಯ ನೇಮ, ರಾತ್ರಿ ವೈದ್ಯನಾಥ ದೈವದ ನೇಮ ನಡೆಯಿತು.


ಫೆ. ೧೫ರಂದು ಬುಧವಾರ ಬಂಡಿ ರಥೋತ್ಸವ ಜರುಗಲಿದೆ, ಅಭಯ ಪ್ರದಾನ ಮತ್ತು ಪ್ರಸಾದ ವಿತರಣೆ ನಡೆಯಲಿದೆ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter