ಸಿದ್ದಕಟ್ಟೆ ಕುಡುಬಿ ಸಮುದಾಯ ಭವನ ಲೋಕಾರ್ಪಣೆ,ಅನ್ನಛತ್ರ,ಪಾಕಶಾಲೆ ಉದ್ಘಾಟನೆ
ಬಂಟ್ವಾಳ: ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಊರ ಪರವೂರ ಹಾಗೂ ಕುಡುಬಿ ಸಮಾಜದ ವತಿಯಿಂದ ಸುಮಾರು 2 ಕೋ. ರೂ. ವೆಚ್ಚದಲ್ಲಿ ಕುಕ್ಕಿಪಾಡಿ ಗ್ರಾಮದ ಸಿದ್ದಕಟ್ಟೆಯ ಕೋರ್ಯಾರು ಶ್ರೀ ದುರ್ಗಾ ಮಹಮ್ಮಾಯಿ ದೇವಸ್ಥಾನದಲ್ಲಿ ನಿರ್ಮಿಸಲಾದ “ಕುಡುಬಿ ಸಮುದಾಯ ಭವನ”ದ ಲೋಕಾರ್ಪಣಾ ಕಾರ್ಯಕ್ರಮ ಭಾನುವಾರ ನಡೆಯಿತು.

ಕುಡುಬಿ ಸಮುದಾಯ ಭವನ ಹಾಗೂ ಅನ್ನ ಛತ್ರವನ್ನು ಪುತ್ತೂರು ಶ್ರೀವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಅವರು ಉದ್ಘಾಟಿಸಿ ಮಾತನಾಡಿ,ಭಾರತ ದೇಶದಲ್ಲಿ ಪರಕೀಯರ ಅಕ್ರಮಣದ ಕಾಲದಲ್ಲಿ ಕಷ್ಟದ ಸ್ಥಿತಿಯಲ್ಲಿದ್ದ ಇಡೀ ಹಿಂದೂ ಸಮಾಜವನ್ನು ರಕ್ಷಣೆ ಮಾಡಿದ ಬುಡಕಟ್ಟು ಕುಡುಬಿ ಸಮುದಾಯದ ಒಗ್ಗಟ್ಟು ಇತರ ಸಮಾಜಗಳಿಗೆ ಮಾದರಿಯಾಗಿದ್ದು, ಹಿಂದೂ ಸಮಾಜದ ಬುಡವೇ ಕುಡುಬಿ ಸಮಾಜವಾಗಿದೆ ಎಂದರು.
ಟಿಪ್ಪುವನ್ನು ವಿಜೃಂಭಿಸಿ,ಹಿಂದೂ ಸಮಾಜವನ್ನು ವಿರೋಧಿಸುವಂತಹ ವಿಕೃತ ಮನಸ್ಥಿತಿಯವರು ಇರುವ ಈ ಕಾಲಘಟ್ಟದಲ್ಲಿ ದೇಶ ಮತ್ತು ದೈವ ಭಕ್ತಿಯನ್ನು ಮೈಗೂಡಿಸಿರುವ ಕುಡುಬಿ ಸಮಾಜ ಒಗ್ಗಟ್ಟಾಗಿ ದುರ್ಗೆಯ ಹೆಸರಿನಲ್ಲಿ ಸಭಾಭವನ ನಿರ್ಮಿಸಿರುವುದು ಅಭಿನಂದನೀಯವಾಗಿದೆ ಎಂದರು.
ಜಗತ್ತಿನಲ್ಲಿ ಹೆಣ್ಣಿಗೆ ದೇವರ ಸ್ಥಾನವನ್ನಿತ್ತು ಪೂಜಿಸುವ ದೇಶವಿದ್ದರೆ ಅದು ಭಾರತ ಮಾತ್ರ ಎಂದ ಅವರು ದೇವರು ಮತ್ತು ದೇಶ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ದೇಶವನ್ನು ರಕ್ಷಿಸುವ ಮೂಲಕ ದೇವರನ್ನು ರಕ್ಷಿಸುವ ಕಾರ್ಯವು ಆಗಿದೆ ಎಂದರು.
ಮಾಜಿ ಸಚಿವರಾದ ಬಿ. ರಮಾನಾಥ ರೈ ಪಾಕಶಾಲೆಯನ್ನು ಉದ್ಘಾಟಿಸಿ ಮಾತನಾಡಿ,ಇಂದು ಇತಿಹಾಸವನ್ನು ಅರಿತುಕೊಳ್ಳುವ ಅಗತ್ಯವಿದೆ.ಕುಡುಬಿ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳ್ಳಬೇಕೆಂಬ ಬೇಡಿಕೆಗೆ ಸಹಮತವನ್ನು ವ್ಯಕ್ತಪಡಿಸಿದರು.
ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ,ಶಾಸಕನ ನೆಲೆಯಲ್ಲಿ ಈ ಕ್ಷೇತ್ರದ ಅಭಿವೃದ್ಧಿಗೆ ಅದ್ಯತೆ ನೀಡಿ ಅನುದಾನ ಒದಗಿಸಲಾಗಿದೆ.ಅತೀ ಶೀಘ್ರದಲ್ಲೇ ದೇವಸ್ಥಾನದ ಸಂಪರ್ಕ ರಸ್ತೆಯನ್ನು ಕೂಡ ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.
ದುಶ್ಚಟದಿಂದ ದೂರ ಇದ್ದು,ಸಾಧನೆಯ ಮೂಲಕ ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಲು ಸಾಧ್ಯ ಎಂದರು.
ಶ್ರೀಕ್ಷೇತ್ರ ಪೂಂಜಾದ ಕೃಷ್ಣ ಪ್ರಸಾದ್ ಅಸ್ರಣ್ಣರು, ಪ್ರಧಾನ ಅರ್ಚಕರಾದ ಪಿ ಪ್ರಕಾಶ್ ಆಚಾರ್ಯ, ಸಂಗಬೆಟ್ಟು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದ ಅರ್ಚಕರಾದ ಪ್ರಭಾಕರ್ ಐಗಳ್, ಮಾಜಿ ಸಚಿವರಾದ ಬಿ.ನಾಗರಾಜ ಶೆಟ್ಟಿ, ಕಿಯೋನಿಕ್ಸ್ ನಿಗಮದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ , ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಸದಸ್ಯೆ ಸುಲೋಚನ ಜಿ.ಕೆ ಭಟ್,ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ. ದೇವದಾಸ್ ಶೆಟ್ಟಿ,ಗೋಳಿಯಂಗಡಿ ರಾಜ್ಯ ಕುಡುಬಿ ಸಮಾಜದ ಅಧ್ಯಕ್ಷ ಎಮ್. ಕೆ. ನಾಯಕ್, ದ.ಕ.ಜಿಲ್ಲಾ ಕುಡುಬಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕೃಷ್ಣ ಪ್ರಸಾದ್ ಕೊಂಪದವು, ಮಾಜಿ ಜಿಪಂ ಸದಸ್ಯರಾದ ಜನಾರ್ದನ ಗೌಡ ಮುಚ್ಚೂರು, ಎಂ.ತುಂಗಪ್ಪ ಬಂಗೇರ, ಶ್ರೀ.ಕ್ಷೇ.ಧ.ಗ್ರಾ.ಯೋ.ಯ ಬಂಟ್ವಾಳ ಘಟಕದ ಯೋಜನಾಧಿಕಾರಿ ಜಯಾನಂದ.ಪಿ, ,ಸಂಗಬೆಟ್ಟು ಗ್ರಾ.ಪಂ.ಅಧ್ಯಕ್ಷ ಸತೀಶ್ ಪೂಜಾರಿ ಅಲಕ್ಕೆ, ಕುಕ್ಕಿಪಾಡಿ ಗ್ರಾ.ಪಂ.ಅಧ್ಯಕ್ಷೆ ಸುಜಾತ ಆರ್ ಪೂಜಾರಿ, ಮಾಜಿ ತಾ.ಪಂ.ಸದಸ್ಯರಾದ ಪ್ರಭಾಕರ ಪ್ರಭು, ಅರ್ಕಕೀರ್ತಿ ಇಂದ್ರ, ರತ್ನಕುಮಾರ್ ಚೌಟ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶೇಖರಗೌಡ ಬಜಪೆ, ಆಲಂಗಾರು ಕೆನರಾ ಬ್ಯಾಂಕ್ ಪ್ರಬಂಧಕರಾದ ಪಿ.ಲೋಕೇಶ್ ಮಡಪಾಡಿ, ಹಿ.ವರ್ಗಗಳ ಇಲಾಖೆಯ ಅಧಿಕಾರಿ ಬಿಂದಿಯಾ ನಾಯ್ಕ್ ಅತಿಥಿಗಳಾಗಿ ಭಾಗವಹಿಸಿದ್ದರು.
ದೇವಸ್ಥಾನದ ಗುರಿಕಾರರಾದ ಗೋಪಾಲ ಗೌಡ ಕೋರ್ಯಾರು,ಓಬಯ್ಯ ಗೌಡ ಕುಕ್ಕೇಡಿ, ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಹೇಮಚಂದ್ರ ಗೌಡ ಸಿದ್ದಕಟ್ಟೆ, ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ ಸಿದ್ಧಕಟ್ಟೆ,ಸಮಿತಿ ಪದಾಧಿಕಾರಿಗಳಾದ ಕರುಣಾಕರ ಮಂಚಕಲ್ಲು,ಗಣೇಶ್ ಕಣಿಯೂರು, ಗಂಗಾಧರ ಕುಕ್ಕೀಡಿ, ಜನಾರ್ಧನ ಕೊಡಂಗೆ , ಯೋಗೀಶ್ ಕಲ್ಪನೆ , ಜಯಂತಕೋರ್ಯಾರು, ಮಹಿಳಾ ಮಂಡಳಿ ಅಧ್ಯಕ್ಷೆ ರೇಣುಕಾ ಮತ್ತಿತರರು ವೇದಿಕೆಯಲ್ಲಿದ್ದರು.
ಇದೇವೇಳೆ ಕಟ್ಟಡ ನಿರ್ಮಾಣದಲ್ಲಿ ಸಹಕರಿಸಿದ ಮಾಜಿ ಸಚಿವ ರಮಾನಾಥ ರೈ, ಸಿದ್ದಕಟ್ಟೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಪ್ರಭಾಕರ ಪ್ರಭು ಅವರನ್ನು ಗೌರವಿಸಲಾಯಿತು.
ಶಿಕ್ಷಕ ರತ್ನಾಕರ ಗೌಡ ಸ್ವಾಗತಿಸಿದರು.ನೋಟರಿ ವಕೀಲ ವಿಜಯ ಗೌಡ ಶಿಬ್ರಿಕೆರೆ ಪ್ರಸ್ತಾವಿಸಿದರು.
ಯಶೋಧರ ಕೋರ್ಯಾರು ವಂದಿಸಿದರು.
ಪ್ರಜ್ವಲ್ ಸಿದ್ದಕಟ್ಟೆ,ರಂಜಿತಾ ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ 56 ನೇ ವರ್ಷದ ಭಜನಾ ಮಂಗಲೋತ್ಸವ,ಸಾರ್ವಜನಿಕ ಶ್ರೀ ಶನಿಪೂಜೆ ಹಾಗೂ ಸಂಜೆ ಕಟೀಲು ಮೇಳದವರಿಂದ ಶ್ರೀ ದೇವಿಹಾತ್ಮೆ ಯಕ್ಷಗಾನ ಬಯಲಾಟವು ಜರಗಿತು.