ಫೆ.8 ರಿಂದ ಫೆ. 10 ರ ವರೆಗೆ ಪಿಲಿಂಗಾಲು ಶ್ರೀ ಗಾಯತ್ರಿ ದೇವಸ್ಥಾನದ ಬ್ರಹ್ಮಕಲಶೋತ್ಸವ
ಬಂಟ್ವಾಳ: ಬಂಟ್ವಾಳ ತಾಲೂಕಿನ ಕಾಡಬೆಟ್ಟು ಗ್ರಾಮದ ಪಿಲಿಂಗಾಲು ಎಂಬಲ್ಲಿ ಪ್ರಕೃತಿಯ ರಮಣೀಯವಾದ ಪರಿಸರದಲ್ಲಿ ನಿರ್ಮಾಣವಾದ ಶ್ರೀ ಗಾಯತ್ರಿ ದೇವಿ ದೇವಸ್ಥಾನದಲ್ಲಿ ಫೆ.8 ರಿಂದ ಫೆ. 10 ರ ವರೆಗೆ ಬ್ರಹ್ಮಕಲಶೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಬ್ರಹಕಲಶೋತ್ಸವ ಸಮಿತಿ ಅಧ್ಯಕ್ಷ ಎಂ.ತುಂಗಪ್ಪ ಬಂಗೇರ ತಿಳಿಸಿದ್ದಾರೆ.
ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರುಬ್ರಹ್ಮಶ್ರೀ ವೇ.ಮೂ.ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯರ ನೇತೃತ್ವದಲ್ಲಿ ಕಾಡಬೆಟ್ಟು ನಾರಾಯಣ ಶಿಬರಾಯರ ಉಪಸ್ಥಿತಿಯಲ್ಲಿ ವಿವಿಧ ವೈಧಿಕ ವಿಧಿವಿಧಾನಗಳು ನಡೆಯಲಿದೆ ಎಂದರು. ಫೆ.8 ರಂದು ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಮಧ್ಯಾಹ್ನ 3. ಗಂಟೆಗೆ ವಗ್ಗ ಕಾರಿಂಜೇಶ್ವರ ದೇವಾಲಯದ ದ್ವಾರದ ಬಳಿಯಿಂದ ದೇವಸ್ಥಾನಕ್ಕೆ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮೆರವಣಿಗೆ ಚಾಲನೆ ನೀಡಲಿದ್ದಾರೆ.ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ತಾಂಬೂಲ ಕಲಾವಿದರಿಂದ ‘ಪರಿಮಳ ಕಾಲೋನಿ’ ನಾಟಕ ಪ್ರದರ್ಶನವಾಗಲಿದೆ ಎಂದರು.
ಫೆ.9 ರಂದು ಶ್ರೀ ಮಹಾಗಣಪತಿ, ಶ್ರೀರಾಘವೇಂದ್ರಗುರುಗಳ ಬಿಂಬ ,ಪರಿವಾರದೈವಗಳ ಪ್ರತಿಷ್ಠಾಪನೆ ನಢಯಲಿದ್ದು, ಬಳಿಕ ಧಾರ್ಮಿಕಸಭಾ ಕಾರ್ಯಕ್ರಮ ಜರಗಲಿದೆ. ಸಂಜೆ ಕಟೀಲು ಮೇಳದಿಂದ ಶ್ರೀ ಗಾಯತ್ರಿ ಮಹಾತ್ಮೆ ಕಾಲಮಿತಿ ಯಕ್ಷಗಾನ ನಡೆಯಲಿದೆ ಎಂದರು.
ಫೆ. 10 ರಂದು ಶ್ರೀ ಗಾಯತ್ರಿ ದೇವಿಗೆ ಬ್ರಹ್ಮಕಲಶಾಭಿಷೇಕ, ಗಾಯತ್ರಿ ಯಾಗ ನಡೆಯಲಿದೆ. ಅ ಬಳಿಕ ನಢಯುವ ಧಾರ್ಮಿಕ ಸಭೆಯಲ್ಲಿ
ಸುಬ್ರಹ್ಮಣ್ಯಶ್ರೀ ,ಒಡಿಯೂರು ಶ್ರೀ ಗಳು ಆಶೀರ್ವಚನ ನೀಡಲಿದ್ದು, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದರಾಜೇಶ್ ನಾಯ್ಕ್, ಹರೀಶ್ ಪೂಂಜ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಸಹಿತ ಅನೇಕ ಗಣ್ಯರು ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಮಧ್ಯಾಹ್ನ ತಾಳಮದ್ದಲೆ, ರಾತ್ರಿ ದೈವಗಳಿಗೆ ನೇಮೋತ್ಸವ ನಡೆಯಲಿದೆ ಎಂದು ಅವರು ತಿಳಿಸಿದರು.
ಐತಿಹ್ಯ:
ಪರಶುರಾಮ ಋಷಿ ತಪಸ್ಸು ಮಾಡಿರುವ ಪುಣ್ಯ ತಪೋಭೂಮಿ ಎಂದೇ ಐತಿಹ್ಯ ವಿರುವ ಪಿಲಿಂಗಾಲು ಶ್ರೀ ಗಾಯತ್ರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್ ಅವರು ತನ್ನ 16 ವಯಸ್ಸಿನಲ್ಲಿ ದೇವರ ಪ್ರೇರಣೆಯಂತೆ ಗುಡ್ಡ ಪ್ರದೇಶದಲ್ಲಿ ಪುಟ್ಟಗುಡಿ ನಿರ್ಮಿಸಿ ಭಜನೆ ಆರಂಭಿಸಿದ್ದರು ಎಂದು ಬ್ರಹಕಲಶೋತ್ಸವ ಸಮಿತಿ ಪ್ರ.ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ವಿವರಿಸಿದರು.
18 ನೇ ವಯಸ್ಸಿನಲ್ಲಿ ಜ್ಯೋತಿಷ್ಯ,ನಾಟಿವೈದ್ಯವನ್ನು ಕರಗತಮಾಡಿಕೊಂಡು ಶ್ರೀ ರಾಘವೇಂದ್ರಗುರುಗಳ ಪ್ರೇರಣೆಯಂತೆ ಗಾಯತ್ರಿದೇವಿಗೆ ಗರ್ಭಗುಡಿ,ಎಡನಾಳ ನಿರ್ಮಿಸಿದ್ದರು.ನಂತರ ದೇವಳದ ಅಭಿವೃದ್ದಿಗೆ ಏಕಾಂಗಿಯಾಗಿ ಶ್ರಮಿಸಿದ್ದರು.ಇದೀಗ ದೇವಳದ ಹಲವಾರುಂಮದಿ ಭಕ್ತರು ಜೀರ್ಣೋದ್ದಾರ ಕಾರ್ಯದಲ್ಲಿ ಸಹಕರಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ರಘ ಸಪಲ್ಯ,ಪ್ರ.ಕಾರ್ಯದರ್ಶಿ ನಾಗೇಶ್ ಕಲ್ಲಡ್ಕ,ಬ್ರಹ್ಮಕಲಶ ಸಮಿತಿ ಉಪಾಧ್ಯಕ್ಷ ಪ್ರಮೋದ್ ಕುಮಾರ್ ರೈ ಉಪಸ್ಥಿತರಿದ್ದರು.