ಕಲ್ಲಡ್ಕ:ಶ್ರೀರಾಮ ವಿದ್ಯಾಕೇಂದ್ರಕಲ್ಲಡ್ಕದ ವತಿಯಿಂದಕಲ್ಲಡ್ಕಶ್ರೀರಾಮ ಮಂದಿರದಲ್ಲಿ ಸರಸ್ವತಿ ಪೂಜೆ ನಡೆಯಿತು.ಶ್ರೀ ಕ್ಷೇತ್ರಕಣಿಯೂರಿನ ಶ್ರೀ ಶ್ರೀಶ್ರೀ ಮಹಾಬಲೇಶ್ವರ ಸ್ವಾಮೀಜಿಯವರು ತಮ್ಮ ನುಡಿಗಳಲ್ಲಿ “ಈ ಶಾಲೆಯಲ್ಲಿ ಪ್ರತಿನಿತ್ಯವೂ ಸರಸ್ವತಿ ಪೂಜೆ ಮಾಡುತ್ತಿರುವುದು ವಿಶೇಷ, ಹಾಗಾಗಿಯೇ ಈ ಶಾಲೆ ಬೇರೆ ಶಾಲೆಗಳಿಗಿಂತ ಭಿನ್ನವಾಗಿದೆ.

ವಿದ್ಯಾರ್ಥಿಗಳು ಸಂಸ್ಕಾರವನ್ನು ಪ್ರತಿಯೊಂದು ಹಂತದಲ್ಲಿಕಲಿತು ಬೆಳೆಯುತ್ತಿದ್ದಾರೆ ಎನ್ನುತ್ತಾ ಆ ದೇವರುಎಲ್ಲರಿಗೂದೈಹಿಕವಾಗಿ, ಮಾನಸಿಕವಾಗಿ, ಶಾರೀರಿಕವಾಗಿ ಮಾಡುವಎಲ್ಲಾ ಚಟುವಟಿಕೆಗಳಿಗೆ ಚೈತನ್ಯವನ್ನುತುಂಬಲಿ” ಎಂದು ಆಶೀರ್ವದಿಸಿದರು.


ವಿದ್ಯಾಕೇಂದ್ರದ ಶಿಶುಮಂದಿರ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಸೆಕೆಂಡರಿ ಸ್ಕೂಲ್, ಪದವಿ ಪೂರ್ವ ವಿದ್ಯಾಲಯ, ಪದವಿ ವಿದ್ಯಾಲಯದಎಲ್ಲಾ ವಿದ್ಯಾರ್ಥಿಗಳು, ಬೋಧಕರು, ಬೋಧಕೇತರು ಭಗವದ್ಗೀತೆ ಪುಸ್ತಕದೊಂದಿಗೆ ಪೂಜೆಯಲ್ಲಿ ಭಾಗವಹಿಸಿ ಸರಸ್ವತಿ ಮಂತ್ರವನ್ನು ಪಠಿಸಿದರು. ಹಾಗೂ ವಿದ್ಯಾರ್ಥಿಗಳಿಂದ ಭಜನಾಕರ‍್ಯಕ್ರಮವು ನೆರವೇರಿತು. ಸರಸ್ವತಿ ಪೂಜೆಯ ವಿಧಿ-ವಿಧಾನಗಳನ್ನು ಕಶೆಕೋಡಿ ಸೂರ್ಯನಾರಾಯಣ ಭಟ್‌ಇವರು ನಡೆಸಿಕೊಟ್ಟರು.


ಕರ‍್ಯಕ್ರಮದಲ್ಲಿಡಾ.ಪ್ರಭಾಕರ್ ಭಟ್‌ಕಲ್ಲಡ್ಕ-ಅಧ್ಯಕ್ಷರು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ವಿದ್ಯಾಕೇಂದ್ರದಅಧ್ಯಕ್ಷರಾದನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದರಮೇಶ್‌ಎನ್, ಆಡಳಿತ ಮಂಡಳಿ ಸದಸ್ಯರು, ಅಭಿವೃದ್ದಿ ಸಮಿತಿ ಸದಸ್ಯರುಗಳು, ಪೋಷಕರುಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *