ದೈವರಾಧನೆಗೆ ಕೃಷಿ ಪೂರಕ: ಶಾಸಕ ರಾಜೇಶ್ ನಾಯ್ಕ್
ಬಂಟ್ವಾಳ: ದೈವರಾಧನೆಗೆ ಕೃಷಿ ಪೂರಕವಾಗಿದ್ದು, ಶೃದ್ದಾ ಕೇಂದ್ರಗಳು ಜೀರ್ಣೋದ್ದಾರಗೊಂಡಾಗ ನಮ್ಮ ಸಂಸ್ಕೃತಿ ,ಸಂಸ್ಕಾರ ಉಳಿಯುತ್ತದೆಯಲ್ಲದೆ ದೈವರಾಧನೆಗೂ ವಿವಿಧ ರೂಪದಲ್ಲಿ ಶಕ್ತಿ ಬರಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಶುಕ್ರವಾರ ಬಂಟ್ವಾಳ ಬೈಪಾಸ್ ತುಂಬೆ ರಾಮನಗರ ಶ್ರೀ ಧೂಮಾವತಿ ಬಂಟ ವೈದ್ಯನಾಥ ಅರಸು ಮೈಸಂದಾಯ ದೈವಸ್ಥಾನದ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಬಂಟ್ವಾಳ ತಾಲೂಕಿನಲ್ಲಿ 100 ಕ್ಕು ಅಧಿಕ ದೈವ,ದೇವಸ್ಥಾನಗಳು ಜೀಣೋದ್ದಾರಗೊಂಡು ಬ್ರಹ್ಮಕಲಶೋತ್ಸವ ನಡೆದಿದ್ದು,ಕ್ಷೇತ್ರದಲ್ಲಿ ಸುಮಾರು 230 ಕ್ಕು ಅಧಿಕ ದೈವ,ದೇವಸ್ಥಾನ,ಮಂದಿರಗಳಿಗೆ ಸಂಪರ್ಕ ರಸ್ತೆ ಸಹಿತ ಮೂಲಭೂತ ಸೌಕರ್ಯವನ್ನು ಒದಗಿಸುವ ಕಾರ್ಯವನ್ನು ಮಾಡಲಾಗಿದೆ ಎಂದರು.
ಧಾರ್ಮಿಕ ಚಿಂತಕ,ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರು ಮಾತನಾಡಿ, ಗ್ರಾಮಾಧಾರಿತ,ಕೃಷಿಯಾಧಾರಿತ ಬದುಕು ನಮ್ಮದಾಗಬೇಕಲ್ಲದೆ ಧಾಮಿ೯ಕ ನಂಬಿಕೆಯನ್ನು ಬಲಪಡಿಸುವ ಕಾರ್ಯಾಗಬೇಕು,ಮುಂದಿನ ಪೀಳಿಗೆಗೆ ದೈವರಾಧನೆಯ ಪದ್ದತಿಯ ಬಗ್ಗೆ ತಿಳಿಹೇಳುವ ಕೆಲಸ ಆಗಬೇಕಾಗಿದೆ ಎಂದರು.
ಅತಿಥಿಯಾಗಿದ್ದ ಬಿ.ಸಿ.ರೋಡು ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕರಾಂ ಪೂಜಾರಿ ಮಾತನಾಡಿ,ಪ್ರಸ್ತುತ ಕಾಲಘಟ್ಟದಲ್ಲಿ ಯುವ ಜನಾಂಗಕ್ಕೆ ಈ ನೆಲದ ಚರಿತ್ರೆ ಪರಿಚಯಿಸುವ ಅಗತ್ಯವಿದೆ ಎಂದರು.
ಶ್ರೀ ಜುಮಾದಿ ಬಂಟ ವೈದ್ಯನಾಥ ಸೇವಾ ಟ್ರಸ್ಟ್ ನ ಅಧ್ಯಕ್ಷ ಭುವನೇಶ್ ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು.
ಮಾಜಿ ಸಚಿವ ಬಿ.ರಮಾನಾಥ ರೈ,
ಮುಂಬೈ ಆಲ್ ಕಾರ್ಗೋ ಲಾಜಿಸ್ಟಿಕ್ ಪ್ರೈ.ಲಿ.ನ ಡಾ.ಶಶಿಕಿರಣ ಶೆಟ್ಟಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಾಮಾಜಿಕ ಕಾರ್ಯಕರ್ತೆ ಸುಶೀಲ ಜನಾರ್ದನ ಶೆಟ್ಟಿ, ಬಂಟ್ವಾಳ,ಬಿಜಾಪುರದ ಉದ್ಯಮಿ ಶ್ರೀಧರ ಕೋಟ್ಯಾನ್, ನಂದನಹಿತ್ತಿಲು ಶ್ರೀ ವೈದ್ಯನಾಥ ಜುಮಾದಿ ಬಂಟ ದೈವಸ್ಥಾನದ ಸಮಿತಿ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ,ದೈವಸ್ಥಾನದ ಪುನರ್ ಪ್ರತಿಷ್ಠಾ ,ಬ್ರಹ್ಮಕಲಶ ಸಮಿತಿ ಗೌರವಾಧ್ಯಕ್ಷ ಉದಯಕುಮಾರ್ ರಾವ್ ,ಅಧ್ಯಕ್ಷ ಸತೀಶ್ ಶೆಟ್ಟಿ,ಶ್ರೀ ಜುಮಾದಿ ಬಂಟ ವೈದ್ಯನಾಥ ಸೇವಾ ಟ್ರಸ್ಟ್ ನ ಪ್ರ.ಕಾರ್ಯದರ್ಶಿ ಶ್ರೀಧರ ಬಿ.ಮೊದಲಾದವರು ವೇದಿಕೆಯಲ್ಲಿದ್ದರು
ದೈವಪಾತ್ರಿ ಶೇಖರ ಸಜಿಪ, ದೈವದ ಚಾಕರಿದಾರರಾದ ಲಕ್ಷ್ಮಣ ಪೂಜಾರಿ, ಶಿವರಾಮ ಪೂಜಾರಿ,ಯಕ್ಷಗಾನ ಕಲಾವಿದ ಜಯರಾಮ ಆಚಾರ್ಯ ಬಂಟ್ಚಾಳ ಅವರನ್ನು ಸನ್ಮಾನಿಸಲಾಯಿತು.
ದೈವಸ್ಥಾನದ ಬ್ರಹ್ಮಕಲಶ ಸಮಿತಿ ಪ್ರ.ಕಾರ್ಯದರ್ಶಿ,ಬೂಡಾ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಪ್ರಸ್ತಾವಿಸಿ , ಸ್ವಾಗತಿಸಿದರು.ಪ್ರಶಾಂತ್ ವಂದಿಸಿದರು.ಕಲಾವಿದ ಎಚ್.ಕೆ.ನಯನಾಡು ಕಾರ್ಯಕ್ರಮ ನಿರೂಪಿಸಿದರು.
ಪುನರ್ ಪ್ರತಿಷ್ಠೆ
ಬೆಳಿಗ್ಗೆ ಏರ್ಯ ನರಸಿಂಹ ಮಯ್ಯ ಮತ್ತು ಏರ್ಯ ಶ್ರೀ ಗಣೇಶ್ ಮಯ್ಯ ಅವರ ನೇತೃತ್ವದಲ್ಲಿ ಶ್ರೀ ಧೂಮಾವತಿ ಬಂಟ,ವೈದ್ಯನಾಥ,ಅರಸು ಮೈಸಂದಾಯ,ಪಂಜರ್ಲಿ ದೈವಗಳ ಪುನರ್ ಪ್ರತಿಷ್ಠೆ,ಬ್ರಹ್ಮಕಲಶೋತ್ಸವ ನೆರವೇರಿತು.
ರಾತ್ರಿದೈವಗಳಿಗೆ ನೇಮೋತ್ಸವ ನಡೆಯಿತು.