Published On: Fri, Jan 27th, 2023

ಎಸ್.ವಿ.ಎಸ್ ಕಾಲೇಜಿನಲ್ಲಿ ರಾಷ್ಟೀಯ ಮತದಾರರ ದಿನಾಚರಣೆ

ಬಂಟ್ವಾಳ:ಎಸ್.ವಿ.ಎಸ್ ಕಾಲೇಜಿನಲ್ಲಿ ರಾಷ್ಟೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಪಾತ್ರ ಅತ್ಯಂತ ಮಹತ್ವವಾದುದು ,ಪಾರದರ್ಶಕ ಆಡಳಿತ ವ್ಯವಸ್ಥೆ ರೂಪಿಸಲು ಸಂವಿಧಾನವು ನಮಗೆ ಅತ್ಯಮೂಲ್ಯವಾದ ಮತದಾನದ ಹಕ್ಕು ನೀಡಿದೆ. ೧೮ವರ್ಷ ತುಂಬಿದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಬಂಟ್ವಾಳ ಜೆಎಮ್‌ಎಫ್‌ನ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ ವೈ ತಳವಾರ ಹೇಳಿದರು.





ಅವರು ಮತದಾರ ಸಾಕ್ಷಾರತಾ ಸಂಘ, ಎನ್.ಎಸ್.ಎಸ್‌ಘಟಕ, ವೆಂಕಟರಮಣ ಸ್ವಾಮಿ ಕಾಲೇಜು, ಬಂಟ್ವಾಳ, ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘ, ಬಂಟ್ವಾಳ ಇವುಗಳ ಸಂಯುಕ್ತಆಶ್ರಯದಲ್ಲಿ ಆಯೋಜಿಸಲಾದ ರಾಷ್ಟೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ಶಿವಪ್ರಕಾಶ್ ಮಾತನಾಡಿ ಪ್ರಪಂಚದ ಹಲವಾರು ದೇಶಗಳಲ್ಲಿ ಮತದಾನದ ಹಕ್ಕನ್ನು ಪಡೆಯಲು ಕೆಲವು ನಿಬಂಧನೆಗಳಿದ್ಧು, ಭಾರತವು ಈ ಪಟ್ಟಿಯಲ್ಲಿ ಅತ್ಯಂತ ವಿಶಿಷ್ಟವಾದ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಪ್ರಜಾಪ್ರಭುತ್ವದಲ್ಲಿ ಮತದಾನ ಎಂಬುವುದು ಪ್ರಜೆಗಳಿಗಿರುವ ಅತ್ಯಂತ ಪ್ರಬಲವಾದ ಅಸ್ತ್ರ. ತಮ್ಮ ನಾಯಕನನ್ನು ತಾವೇ ಆಯ್ಕೆ ಮಾಡಿಕೊಳ್ಳುವ ಒಂದು ಅಪರೂಪದ ಅವಕಾಶವನ್ನು ಮತದಾನ ನೀಡುತ್ತದೆ. ಪ್ರತಿಯೊಬ್ಬನೂ ಕೂಡ ಮತದಾನದ ಗುರುತಿನಚೀಟಿ ಹೊಂದಿರಬೇಕು ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ| ಸುಯೋಗ ವರ್ಧನ್ ಡಿ.ಎಂ.ರವರು ಈ ಕಾರ್ಯಕ್ರಮದ ಪ್ರಸ್ತುತತೆಯ ಕುರಿತು ಮಾತನಾಡುತ್ತಾ ಮತದಾನದ ಹಕ್ಕನ್ನು ನಾವು ಸೂಕ್ತವಾಗಿ ಚಲಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ. ಇಂದಿನ ಯುವಜನತೆ ಚುನಾವಣೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸಿ ತಮ್ಮ ಅಮೂಲ್ಯ ಮತಚಲಾಯಿಸಬೇಕೆಂದು ಹೇಳುತ್ತಾ ನೆರೆದವರಿಗೆ ಮತದಾರರ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಎಸ್.ವಿ.ಎಸ್ ಸಂಮೂಹ ವಿದ್ಯಾಸಂಸ್ಥೆಗಳ ಸಂಚಾಲಕರಾದ ಕೆ.ರೇಖಾ ಶೆಣೈ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮತದಾರರ ಸಾಕ್ಷಾರತಾ ಯೋಜನೆಯ ಕಾಲೇಜಿನ ನೋಡಲ್ ಅಧಿಕಾರಿಯಾದ ಡಾ| ವಿನಾಯಕ ಕೆ.ಎಸ್ ಸ್ವಾಗತಿಸಿ, ಶ್ರೀ ಕಿಟ್ಟು ಕೆ ನಿರೂಪಸಿ, ಡಾ| ಕಾಶೀನಾಥ ಶಾಸ್ತ್ರೀ ಹೆಚ್.ವಿ. ವಂದಿಸಿದರು. ಈ ಕಾರ್ಯಕ್ರಮದಲ್ಲಿ, ಬಂಟ್ವಾಳ ಜೆಎಮ್‌ಎಫ್‌ನ ಮೋಹನ್ ಪ್ರಭು ಕೆ., ಹರಿಣಿಕುಮಾರಿ, ಹಾಗೂ ಎಸ್.ವಿ.ಎಸ್ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter