Published On: Tue, Jan 24th, 2023

ವಿಟ್ಲ ಪಂಚಲಿಂಗೇಶ್ವರ ದೇವರ ಅವಭೃತ ಸ್ನಾನಘಟ್ಟಕ್ಕೆ ಕಾಯಕಲ್ಪ: ಶಾಸಕರ ನಿಧಿಯಿಂದ ವಿಶೇಷ ಕೊಡುಗೆ

ಬಂಟ್ವಾಳ:ಸಣ್ಣ ನೀರಾವರಿ ಇಲಾಖೆ ಮೂಲಕ 45 ಲಕ್ಷವೆಚ್ಚದಲ್ಲಿ ಬಂಟ್ವಾಳ ಶಾಸಕರ ವಿಶೇಷ ಪ್ರಯತ್ನದ ಮೂಲಕ ನಿರ್ಮಾಣವಾದ ವಿಟ್ಲ ಪಡ್ನೂರು ಗ್ರಾಮದ ಮೂರ್ಕಜೆ ಕೊಡಂಗಾಯಿ ಪಂಚತೀರ್ಥದಲ್ಲಿ ಪಂಚಲಿಂಗೇಶ್ವರ ದೇವರ ಅವಬ್ರತ ಸ್ನಾನ ಘಟ್ಟ ಇಂದು ಜ.24 ರಂದು ಬೆಳಿಗ್ಗೆ ಲೋಕಾರ್ಪಣೆಗೊಂಡಿತು.


ಈ ದಿನ ಬೆಳಗ್ಗೆ ಸ್ನಾನಘಟದಲ್ಲಿ ಗಂಗಾ ಪೂಜೆ ಹಾಗೂ ವಿಟ್ಲ ಅರಮನೆಯ ಶ್ರೀ ಕೃಷ್ಣಯ್ಯ ಬಲ್ಲಾಳ್ ದೀಪ ಬೆಳಗಿಸಿ ಲೋಕಾರ್ಪಣೆ ಮಾಡಿದರು.
ವಿಟ್ಲ ಸೀಮೆಗೆ ಸಂಬಂಧಿಸಿದ ಕೊಡಂಗಾಯಿ ನದಿಯ ನೀರು ಕಸಕಡ್ಡಿಗಳಿಂದ ಕಲುಷಿತಗೊಂಡಿದ್ದು, ಶಾಸಕರ ವಿಶೇಷ ಪ್ರಯತ್ನದ ಫಲವಾಗಿ ತಡೆಗೋಡೆ ನಿರ್ಮಾಣ ಹಾಗೂ ಮೆಟ್ಟಿಲುಗಳನ್ನು ನಿರ್ಮಾಣ ಮಾಡಿ ನದಿಯಲ್ಲಿ ಸ್ನಾನಘಟ್ಟವನ್ನು ನಿರ್ಮಾಣ ಮಾಡಲಾಗಿದೆ.
ಈ ಭಾಗದ ಜನರ ಜೊತೆಗೆ ಭಕ್ತರಿಗೆ ಅನುಕೂಲವಾಗುವಂತೆಜೊತೆಗೆ ಇದೇ ನದಿಗೆ ಶಾಸಕರ ಅನುಮಾನದ ಮೂಲಕ ಕೃಷಿ ಹಾಗೂ ಜಲವೃದ್ದಿಗಾಗಿ ಕಿಂಡಿಅಣೆಕಟ್ಟು ನಿರ್ಮಾಣದ ಕಾರ್ಯ ಅಂತಿಮವಾಗಿದ್ದು, ಮುಂದಿನ ದಿನಗಳಲ್ಲಿ ಕೃಷಿಕರು ಇದರ ಸದುಪಯೋಗ ಪಡೆಯಲು ಅನುಕೂಲವಾಗಿದೆ.

ಸಭೆಯ ಅಧ್ಯಕ್ಷತೆಯನ್ನು ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರು ರೇಷ್ಮಾ ಶಂಕರಿ ಬಲಿಪಗುಳಿ ವಹಿಸಿದರು, ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೀತಾರಾಮ ಕೆದಿಲಾಯ,
ಅಜಯ ಟ್ರಸ್ಟಿನ ಸದಸ್ಯರಾದ ರವೀಂದ್ರ ಪುಣಚ, ಕಟ್ಟೆ ಸಮಿತಿಯ ಅಧ್ಯಕ್ಷ ಮಂಜಯ್ಯ ಶೆಟ್ಟಿ, ಗ್ರಾಮ ಪಂಚಾಯತ ಉಪಾಧ್ಯಕ್ಷ ನಾಗೇಶ್ ಶೆಟ್ಟಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರವೀಶ ಶೆಟ್ಟಿ ಕರ್ಕಳ, ಹಾಗೂ ಸಭೆಯಲ್ಲಿ ಮೈತ್ರಿ ಗುರುಕುಲ ಬಳಗ, ಗ್ರಾಮ ಪಂಚಾಯತಿ ಸದಸ್ಯರು, ಕಟ್ಟೆ ಸಮಿತಿ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter