ಪಂಜುರ್ಲಿ ಮೂಲಸ್ಥಾನ ಕುಪ್ಪೆಟ್ಟು ಬರ್ಕೆಯಿಂದ 11 ನೇ ದಿನದ ಪಾದಯಾತ್ರೆ
ಬಂಟ್ವಾಳ: ಮಂಡಲ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತ್ರತ್ವದ ” ಗ್ರಾಮವಿಕಾಸ ಯಾತ್ರೆ” ” ಗ್ರಾಮದೆಡೆಗೆ ಶಾಸಕರ ನಡಿಗೆ ” 11 ನೇ ದಿನದ ಪಾದಯಾತ್ರೆ ಜ.24 ರಂದು ಕರ್ಪೆ ಕುಪ್ಪೆಟ್ಟು ಬರ್ಕೆ, ಕುಪ್ಪೆಟ್ಟು ಪಂಜುರ್ಲಿ ಸನ್ನಿದಿಯಿಂದ ಆರಂಭವಾಯಿತು.

ಜ.23 ರಂದು ಕೊಯಿಲದಲ್ಲಿ ಸಭಾ ಕಾರ್ಯಕ್ರಮ ಸಮಾಪನಗೊಂಡ ಬಳಿಕ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬಿಜೆಪಿ ಕಾರ್ಯಕರ್ತೆ ನೀಲ ಪೂಜಾರಿ ಕರ್ಪೆ ಅವರ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು.
ಇಂದು ಬೆಳಿಗ್ಗೆ ನೂರಾರು ಕಾರ್ಯಕರ್ತರ ಜೊತೆಯಲ್ಲಿ ಕುಪ್ಪೆಟ್ಟು ಬರ್ಕೆ, ಕುಪ್ಪೆಟ್ಟು ಪಂಜುರ್ಲಿ ದೈವಗಳ ಮೂಲಸ್ಥಾನಕ್ಕೆ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು .
ಕುಪ್ಪೆಟ್ಟಿ ಬರ್ಕೆಯಲ್ಲಿ ಗೌರವ

ಮೂಲಸ್ಥಾನಕ್ಕೆ ಬೇಟಿ ನೀಡಿ ದೈವಗಳಿಗೆ ವಿಶೇಷವಾಗಿ ಪೂಜೆ ಸಲ್ಲಿಸಿದ ವೇಳೆ ಅರ್ಚಕರು ದೈವದ ಗಂಧ ಪ್ರಸಾದ ನೀಡಿ ಶಾಸಕ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮತ್ತು ಇವರ ಮುಂದಿನ ರಾಜಕೀಯ ಭವಿಷ್ಯ ಉಜ್ವಲವಾಗಲಿ ಎಂದು ಪ್ರಾರ್ಥನೆ ಮಾಡಿದರು. ಬಳಿಕ ಕರ್ಪೆ ಸಂಗಬೆಟ್ಟು ಭಾಗದಲ್ಲಿ ನಡೆಸಲಾಗಿರುವ ಕೋಟ್ಯಾಂತರ ರೂಪಾಯಿಗಳ ಅಭಿವೃದ್ಧಿ ಜೊತೆಗೆ ಮೂಲಸ್ಥಾನಕ್ಕೆ ರಸ್ತೆ ನಿರ್ಮಾಣ ಕಾರ್ಯವನ್ನು ಮಾಡಿ ಸಹಕಾರ ನೀಡಿದ ಶಾಸಕ ರಾಜೇಶ್ ನಾಯ್ಕ್ ಅವರನ್ನು ಮೂಲಸ್ಥಾನದ ಮನೆಯವರು ಹಾಗೂ ಪ್ರಮುಖರಾದ ಉಮೇಶ್ ಪೂಜಾರಿ, ಹರೀಶ್ ಪೂಜಾರಿ, ಜಯಪೂಜಾರಿ, ಕೇಶವ ಪೂಜಾರಿ, ಸಂತೋಷ್ ಪೂಜಾರಿ, ಸುಂದರಿ,ಮುತ್ತು,ಭವಾನಿ, ಸುಮತಿ, ಗಂಗಾದರ ಪೂಜಾರಿ, ಕರಿಯ ಮುಕ್ಕಾಲ್ದಿ, ಬಾಬು ನಲಿಕೆ ಬಿರಾವ್, ನವೀನ್, ಪೂಜಾರಿ, ಸುಭಾಷ್ ಪೂಜಾರಿ , ನವೀನ್ ಪೂಜಾರಿ ಅವರು ಹೂವಿನ ಬೃಹತ್ ಹಾರದ ಜೊತೆಗೆ ಶಾಲು ಹಾಕಿ ಗೌರವಿಸಿದರು.
ಶಾಸಕರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಭಿನಂದನೆ ಮಾತುಗಳ ಮೂಲಕ ಶಾಸಕರಿಗೆ ವಿಶೇಷ ಅಭಿನಂದನೆ ಸಲ್ಲಿಸಿದರು.

ಬಳಿಕ ವಂದೆ ಮಾತರಂ ಗೀತೆಯನ್ನು ಹಾಡಿ, ಶಾಸಕರು ಭೂಮಿ ತಾಯಿಗೆ ನಮಸ್ಕರಿಸಿ ಪಾದಯಾತ್ರೆಗೆ ಹೆಜ್ಜೆ ಹಾಕಿದರು.
ಅಭಿನಂದನೆ ಸಲ್ಲಿಸಿದರುಪಾದಯಾತ್ರೆಯೂದ್ದಕ್ಕೂ ಸಾಲು ಸಾಲು ಗೌರವ, ಅಭಿನಂದನೆಗಳ ಮಹಾಪೂರವೇ ಹರಿದುಬಂತು
ಅರಳ ಗ್ರಾಮದಲ್ಲಿ ನೂರಾರು ಕಾರ್ಯಕರ್ತರು ಹಣ್ಣು ಹಂಪಲಿನ ಮಾಲೆಯನ್ನು ಹಾಕಿ ಸ್ವಾಗತಿಸಿದರು.ಆರತಿ ಎತ್ತಿ, ಹಣೆಗೆ ಕುಂಕುಮ ಹಚ್ಚಿ, ಹೂವಿನ ಹಾರ, ಕೇಸರಿ ಶಾಲು ಹಾಕಿ ಗಲ್ಲಿಗಲ್ಲಿಗಳಲ್ಲಿ ಸ್ವಾಗತಿಸಿದರು.

ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್,ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಬಂಟ್ವಾಳ ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಂಟ್ವಾಳ ಬಿಜೆಪಿ ಡೊಂಬಯ ಅರಳ, ಕಮಲಾಕ್ಷಿ ಪೂಜಾರಿ, ರಮನಾಥ ರಾಯಿ,ಸುದರ್ಶನ್ ಬಜ, ಪ್ರಭಾಕರ ಪ್ರಭು, ರತ್ನಕುಮಾರ್ ಚೌಟ, ಸತೀಶ್ ಪೂಜಾರಿ ಅಳಕೆ, ವಸಂತ ಅಣ್ಣಳಿಕೆ, ವಿದ್ಯಾಪ್ರಭು, ಹೇಮಲತಾ, ತೇಜಸ್ ಪೂಜಾರಿ, ನವೀನ್ ಪೂಜಾರಿ,ಚಂದ್ರಶೇಖರ ಪೂವಳ,ರಾಜೇಂದ್ರ ನೆಕ್ಲಾಜೆ, ಹರೀಶ್ ಪೂಜಾರಿ ತಾರಬರಿ, ಭಾಸ್ಕರ್ ಪ್ರಭು, ಕೆ.ನಾರಾಯಣ ನಾಯಕ್, ಹರೀಶ್ ಪೂಜಾರಿ , ಯೋಗಿಶ್ ಪೂಜಾರಿ, ಸದಾನಂದ ಪೂಜಾರಿ ಕರ್ಪೆ, ನೀಲ್ ಕಂಠ ಭಟ್, ದಾಮೋದರ ಪೂಜಾರಿ, ರಶ್ಮಿತ್ ಶೆಟ್ಟಿ, ನಳಿನಿ ಶೆಟ್ಟಿ, ಉಮೇಶ್ ಅರಳ, ಸುರೇಶ್ ಕೋಟ್ಯಾನ್,ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಧನಂಜಯ ಶೆಟ್ಟಿ, ಗಣೇಶ್ ರೈ ಮಾಣಿ, ಕುಮಾರ್ ಭಟ್ ಕನ್ಯಾನ, ಸಂತೋಷ್ ರಾಯಿಬೆಟ್ಟು,ಸುಪ್ರೀತ್ ಆಳ್ವ, ರೋನಾಲ್ಡ್ ಡಿ.ಸೋಜ, ರಂಜನ್ ಶೆಟ್ಟಿ, ಸುಕುಮಾರ್ ಅಶ್ವಥ್, ಲಕ್ಮೀದರ್ ಶೆಟ್ಟಿ,ನಂದರಾಮ ರೈ, ಜಗದೀಶ್ ಅಳ್ವ, ಯೋಗೀ ಅರಳ, ಚಂದ್ರಶೇಖರ ಶೆಟ್ಟಿ, ಸೀತಾರಾಮ ಪೂಜಾರಿ, ಸದಾಶಿವ ಬರಿಮಾರು, ಮತ್ತಿತರರು ಉಪಸ್ಥಿತರಿದ್ದರು.