ಗೋಳಿದಡಿಗುತ್ತು 12 ನೇ ವರ್ಷದ ಸಂಭ್ರಮಾಚರಣೆ ಪಾದ ನಡವಳಿ ಗಡಿ ಪಟ್ಟ ಸ್ವೀಕಾರ
ಕೈಕಂಬ:ಚಿಕ್ಕಮಗಳೂರು ವೇದವಿಜ್ಞಾನ ಮಂದಿರದ ಬ್ರಹ್ಮಋಷಿ ಕೆ. ಎಸ್. ನಿತ್ಯಾನಂದ ಗುರುಗಳ ಮಾರ್ಗದರ್ಶನದಲ್ಲಿ ಗುರುಪುರ ಗೋಳಿದಡಿ ಗುತ್ತಿನಲ್ಲಿ 17 ರ ಮಂಗಳವಾರದಿಂದ ಪ್ರಾರಂಭವಾದ ಗುತ್ತುದ ವರ್ಷದ ಪರ್ಬೊ, ಗಡಿ ಪಟ್ಟ ಸ್ವೀಕಾರದ 12 ನೇ ವರ್ಷದ ಸಂಭ್ರಮಾ ಚರಣೆ ಮತ್ತು ಪರ್ವೋತ್ಸವವು ಗುರುವಾರ ಸಂಪನ್ನಗೊಂಡಿತು.

ಜ. 17ರಂದು ಶುದ್ಧ ಪುಣ್ಯಾಹ, ಮಂಗಳಸ್ನಾನ, ಮೃತ್ಯುಂಜಯ ಹೋಮ ಮೊದಲಾದ ದೇವತಾ ಕಾರ್ಯಗಳೊಂದಿಗೆ ಪ್ರಾರಂಭಗೊಂಡಿದ್ದ ಸಂಭ್ರಮಕ್ಕೆ ಜನರಿಂದ ಅಭೂತಪೂರ್ವ ಸ್ಪಂದನೆ ಕಂಡುಬ0ದಿತ್ತು ಮೂರು ದಿನ ವಿವಿಧ ರೀತಿಯ ಸರಕು ಮಳಿಗೆಗಳ ಪ್ರದರ್ಶನ ಮತ್ತು ಮಾರಾಟ, ಮೂರೂ ದಿನ ಸಂಜೆ 6ರಿಂದ 8ರವರೆಗೆ ಗ್ರಾಮೀಣ ಭಾಗದ ಪುರುಷರು ಮತ್ತು ಮಹಿಳೆಯರಿಗೆ ಶಕ್ತಿ ಕಲ್ಲು ಎತ್ತುವ ಸ್ಪರ್ಧೆ,ನಿರಂತರವಾದ ಭಜನಾ ಸಂಕೀರ್ತನೆ, ಶ್ರೀ ವೈದ್ಯನಾಥೇಶ್ವರ ವೇದಿಕೆಯಲ್ಲಿ ವೈಭವದಿಂದ ನಡೆದ ಗುತ್ತಿನ ವರ್ಷದ ಒಡ್ಡೋಲಗ, ಮೂಲ್ಕಿ ನವವೈಭವ ತುಳುನಾಡ ವೈಭವ ಕಲಾವಿದರು ನಡೆಸಿಕೊಟ್ಟ ತುಳುನಾಡಿನ ದೈವಶಕ್ತಿಯನ್ನು ತೆರೆದಿಟ್ಟ `ತುಳುನಾಡ ತುಡರ್’,

ಉಡುಪಿ ಬಾರ್ಕೂರು ಹೇರಾಡಿ ಗ್ರಾಮದ ಹುಭಾಶಿಕ ಕೊರಗರ ಯುವಕಲಾ ವೇದಿಕೆ(ರಿ) ಅವರ `ಕೊರಗರ ಸಾಂಸ್ಕøತಿಕ ವೈಭವ’, ಶುಭಮಣಿ ಚಂದ್ರಶೇಖರ್ ಅವರಿಂದ ಭರತನಾಟ್ಯ, ಮಂಗಳೂರು ಸನಾತನ ನಾಟ್ಯಾಲಯದವರಿಂದ ಸನಾತನ ನೃತ್ಯಾಂಜಲಿ ಕಲಾಸಕ್ತರ ಮನ ತನಿಸಿದವು.ನಿರಂತರವಾದ, ಅಚ್ಚುಕಟ್ಟಾದ ಶುಚಿ, ರುಚಿಯಾದ ಅನ್ನಸಂತರ್ಪಣೆ ಪ್ರಮುಖವಾಗಿತ್ತು.

ಗೋಳಿದಡಿ ಗುತ್ತಿನ ದೈವಿಕ ವಾತಾವರಣದಲ್ಲಿ ಮೂರುದಿನಗಳ ಕಾಲ ನಡೆದ ಸಂಭ್ರಮೋತ್ಸವ ಗುರುವಾರ ರಾತ್ರಿ ನಡೆದ ಪಾವಂಜೆಯ ಶ್ರೀ ಜ್ಞಾನಶಕ್ತಿ ಯಕ್ಷಗಾನ ಮಂಡಳಿಯವರ `ನಾಗ ಸಂಜೀವನ’ ಕಾಲಮಿತಿ ಯಕ್ಷಗಾನ ಬಯಲಾಟದೊಂದಿಗೆ ಸಂಪನ್ನ ಗೊಂಡಿತು.