ಬಂಟ್ವಾಳ: ಶಾಸಕ‌ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತ್ರತ್ವದಲ್ಲಿ ಬಂಟ್ವಾಳ ‌ಬಿಜೆಪಿ ವತಿಯಿಂದ ಜ.14 ರಿಂದ ಜ.27 ರ ವರೆಗೆ ನಡೆಯುವ “ಗ್ರಾಮವಿಕಾಸ ಯಾತ್ರೆ” “ಗ್ರಾಮದೆಡೆಗೆ ಶಾಸಕರ ನಡಿಗೆ” ಪಾದಯಾತ್ರೆ ಕಾರ್ಯಕ್ರಮ ಯಶಸ್ವಿ ಐದನೇ ದಿನಕ್ಕೆ ಮುಟ್ಟಿದೆ.
ಪಾದಯಾತ್ರೆಯಲ್ಲಿ ಗ್ರಾಮಗ್ರಾಮಕ್ಕೆ ತೆರಳಿದ ವೇಳೆ ಕಾರ್ಯಕರ್ತರಿಂದ ಅಭೂತಪೂರ್ವ ಸ್ವಾಗತ ದೊರಕಿದೆ.


ಪೊಳಲಿ ರಾಜರಾಜೇಶ್ವರಿ ದೇವಾಲಯದಿಂದ ಹೊರಟ ಪಾದಯಾತ್ರೆ ಐದನೇ ದಿನ ಕಡೇಶಿವಾಲಯ ದಿಂದ ಹೊರಟಿದೆ.
ಪಾದಯಾತ್ರೆಯಲ್ಲಿ ಸಾಗಿದ ಶಾಸಕರಿಗೆ ಗ್ರಾಮದ ಜನತೆ ಪ್ರೀತಿಯಿಂದ ಭರಮಾಡಿಕೊಂಡು, ಅಲ್ಲಲ್ಲಿ ಆರತಿ ಎತ್ತಿ, ಹಣೆಗೆ ಕುಂಕುಮ ಹಚ್ಚಿ ಹೂವಿನ ಹಾರ ಹಾಕಿ ಸ್ವಾಗತಿಸಿದರು.
ಬೆಲ್ಲ ನೀರು ನೀಡಿದರು…ಹೆಜ್ಜೆ ಹೆಜ್ಜೆ ಗೂ ಸ್ವಾಗತ, ಬಾಯಾರಿಕೆ ನೀಡಿ ಅತಿಥಿ ದೇವೋಭವ ….ಎಂಬಂತೆ ಅತಿಥಿ ಸತ್ಕಾರ ಮಾಡಲಾಗಿದೆ.
ಪಾದಯಾತ್ರೆಯ ಉದ್ದಕ್ಕೂ ಚೆಂಡೆ, ಬ್ಯಾಂಡ್, ವಾದ್ಯ ಪಾದಯಾತ್ರೆಗೆ ವಿಶೇಷ ಮೆರುಗು ನೀಡಿದ್ದಾರೆ. ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಅಭಿವೃದ್ಧಿ ಕಾರ್ಯಗಳಿಗೆ ಅಭಿನಂದನೆಯ ಮಹಾಪೂರವೇ ಹರಿದುಬಂತು
ಪಾದಯಾತ್ರೆ ಮೂಲಕ ಗ್ರಾಮಕ್ಕೆ ತೆರಳಿದ ವೇಳೆ ಗ್ರಾಮಸ್ಥರಿಂದ ಅಭಿನಂದನೆಯ ಮಹಾಪೂರವೇ ಹರಿದುಬಂತು… ಅಲ್ಲಲ್ಲಿ ಶಾಲು ಹಾರ ಹಾಕಿ ಗೌರವಿಸಿದರು .
ರಸ್ತೆ ಸಹಿತ ಅಭಿವೃದ್ಧಿ ಕಾರ್ಯಗಳಿಗೆ ಮೆಚ್ಚುಗೆ ಮಾತುಗಳ ಮೂಲಕ ಶಾಸಕರನ್ನು ಗೌರವಿಸಿದರು.
ಮುಂದೆ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶಾಸಕರ ಗಮನಕ್ಕೆ ತಂದರು.
ಶಾಸಕರ ಜೊತೆಗೆ ಹಿರಿಯರಿಂದ ಹಿಡಿದು ಮಕ್ಕಳು ಕೂಡ ಹೆಜ್ಜೆ ಹಾಕಿ ನೈತಿಕ ಬೆಂಬಲ ಸೂಚಿಸಿದರು.

By suddi9

Leave a Reply

Your email address will not be published. Required fields are marked *