ಅಪಘಾತಕ್ಕೆಬಿಜೆಪಿ ಕಾರ್ಯಕರ್ತನ ಬಲಿ: ಶಾಸಕರ ಮೂರನೇ ದಿನದ ಗ್ರಾಮವಿಕಾಸ ಯಾತ್ರೆ ರದ್ದು
ಬಂಟ್ಚಾಳ: ಪಾಣೆಮಂಗಳೂರಿಗೆ ಸಮೀಪದ ಬೋಳಂಗಡಿ- ನರಹರಿ ಬಳಿ ಸೋಮವಾರ ಬೆಳಿಗ್ಗೆ ಬಂಟ್ವಾಳ ಶಾಸಕರ ವಿಕಾಸಯಾತ್ರೆಗೆ ತೆರಳುತ್ತಿದ್ದ ತೆರೆದ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೆಳ್ತಂಗಡಿ ತಾಲೂಕಿನ ಬಿಜೆಪಿ ಕಾರ್ಯಕರ್ತ ಮೃತಪಟ್ಟ ಹಿನ್ನಲೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರ ನೇತೃತ್ವದಲ್ಲಿ ಸೋಮವಾರ ನಡೆಯಬೇಕಾಗಿದ್ದ ಮೂರನೇ ದಿನದ ಗ್ರಾಮ ವಿಕಾಸ ಯಾತ್ರೆಯನ್ನು ರದ್ದುಗೊಳಿಸಲಾಯಿತು.ಅಫಘಾತದಿಂದಾಗಿ ಬಿಜೆಪಿ ಕಾರ್ಯಕರ್ತ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಸವಗೆನಾಡು ಸುಬ್ರಾಯ ದೇವಸ್ಥಾನದಿಂದ ಹೊರಡಬೇಕಾಗಿದ್ದ ಪಾದಯಾತ್ರೆಯನ್ನು ಶಾಸಕರು ರದ್ದುಗೊಳಿಸಿದರು.
ತಕ್ಷಣ ದೇವಳದ ಪಕ್ಕದ ಸಭಾಭವನದಲ್ಲಿ ಶಾಸಕರ ನೇತೃತ್ವದಲ್ಲಿ ತುರ್ತು ಸಭೆ ಸೇರಿ ಅಪಘಾತದಲ್ಲಿ ಮೃತಪಟ್ಟ ಬಿಜೆಪಿ ಕಾರ್ಯಕರ್ತ ವಿಜಿತ್ ಅವರ ಆತ್ಮಕ್ಕೆ ಶಾಂತಿಕೋರಿ ಶೃದ್ದಾಂಜಲಿ ಅರ್ಪಿಸಲಾಯಿತು. ಬಿಜೆಪಿ ಕಾರ್ಯಕರ್ತ ವಿಜಿತ್ ಸಾವಿನ ಹಿನ್ನಲೆಯಲ್ಲಿ ಮೂರನೇದಿನದ ಪಾದಯಾತ್ರೆ ಸಹಿತ ಸಂಜೆಯ ಸಭಾ ಕಾರ್ಯಕ್ರಮವನ್ನು ಕೂಡ ರದ್ದುಗೊಳಿಸಲು ನಿರ್ಧರಿಸಲಾಯಿತು. ಮಂಗಳವಾರ 4 ನೇದಿನದ ಪಾದಯಾತ್ರೆ ಕೆಲಿಂಜ ದೇವಸ್ಥಾನದಿಂದ ಆರಂಭವಾಗಲಿದ್ದು,ಶಾಸಕ ರಾಜೇಶ್ ನಾಯ್ಕ್ ಅವರು ಸೋಮವಾರ ರಾತ್ರಿ ವೀರಕಂಭ ಗ್ರಾಮದ ಕೆಲಿಂಜದಲ್ಲಿ ಪಕ್ಷದ ಕಾರ್ಯಕರ್ತರೋರ್ವರ ಮನೆಯಲ್ಲಿ ವಾಸ್ತವ್ಯ ಮಾಡಿದರು.
ಮಂಗಳವಾರ (ಜ.17) ಎಂದಿನಂತೆ ಬೆಳಿಗ್ಗೆ ಕೆಲಿಂಜ ದೇವಸ್ಥಾನದಲ್ಲಿ ಶಾಸಕರು ಪ್ರಾರ್ಥನೆ ಸಲ್ಲಿಸಿ 4 ನೇ ದಿನದ ಗ್ರಾಮವಿಕಾಸ ಯಾತ್ರೆ, ಗ್ರಾಮದೆಡೆಗೆ ಶಾಸಕರ ನಡಿಗೆ ಪಾದಯಾತ್ರೆ ಆರಂಭವಾಗಲಿದೆ ಎಂದು ಯಾತ್ರೆಯ ಸಮಿತಿ ಸಂಚಾಲಕ ಬಿ.ದೇವದಾಸ್ ಶೆಟ್ಟಿ ತಿಳಿಸಿದ್ದಾರೆ.
ಘಟನೆಯ ಸುದ್ದಿ ತಿಳಿದಾಕ್ಷಣ ಶಾಸಕರು ವಾಸ್ತವ್ಯವಿದ್ದ ಕನ್ಯಾನದ ಕಾರ್ಯಕರ್ತನ ಮನೆಯಿಂದ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ. ಅ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಬೆಳ್ತಂಗಡಿ ಗೆ ಕಳುಹಿಸಿಕೊಡುವ ಹಾಗೂ ಸಂಸ್ಕಾರ ಕಾರ್ಯಗಳಿಗೆ ವ್ಯವಸ್ಥೆಯನ್ನು ಶಾಸಕರು ಮಾಡಿದ್ದಾರೆ ಎಂದು ದೇವದಾಸ ಶೆಟ್ಟಿ ತಿಳಿಸಿದ್ದಾರೆ.
ತುರ್ತು ಸಭೆಯಲ್ಲಿ ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಿಜೆಪಿಪ್ರಮುಖರಾದ ಭಾರತಿ ಚೌಟ್, ಡೊಂಬಯ್ಯ ಅರಳ, ಹರಿಕೃಷ್ಣ ಬಂಟ್ವಾಳ, ಚೆನ್ನಪ್ಪ ಆರ್.ಕೋಟ್ಯಾನ್, ದಿನೇಶ್ ಅಮ್ಟೂರು, ಚರಣ್ ಜುಮಾದಿಗುಡ್ಡೆ, ರವೀಶ್ ಶೆಟ್ಟಿ ಕರ್ಕಳ, ನಂದರಾಮ ರೈ, ರೋನಾಲ್ಡ್ ಡಿ.ಸೋಜ, ರಮನಾಥ ರಾಯಿ, ಪುರುಷೋತ್ತಮ ನರಿಕೊಂಬು, ಕೃಷ್ಣಪ್ಪ ಪೂಜಾರಿ, ಕಮಲಾಕ್ಷಿ ಕೆ.ಪೂಜಾರಿ, ರಾಜೇಶ್ ಬಾಳೆಕಲ್ಲು, ವಿಘ್ನೇಶ್ವರ ಭಟ್, ಅಶ್ವಥ್ ಶೆಟ್ಟಿ, ಕುಮಾರ್ ಭಟ್,ಸಂತೋಷ್ ರಾಯಿಬೆಟ್ಟು, ದೇವಸ್ಥಾನದ ವ್ಯವಸ್ಥಾನ ಸಮಿತಿ ಮೊಕ್ತೇಸರ ತಿರುಮಲೇಶ್ವರ ಭಟ್, ಲಿಂಗಪ್ಪ ಗೌಡ, ರಘುರಾಮ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, , ಸುಪ್ರೀತ್ ಅಳ್ವ, ಪುರುಷೋತ್ತಮ ಶೆಟ್ಟಿ, ಶಾಂತಪ್ಪ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು.