Published On: Sun, Jan 15th, 2023

ಕಲ್ಲಡ್ಕ ಪ್ರೌಢಶಾಲಾ ನೂತನ ಕಟ್ಟಡದ ಶಿಲಾನ್ಯಾಸ

ಕಲ್ಲಡ್ಕ:ಶ್ರೀರಾಮ ಪ್ರೌಢಶಾಲೆಕಲ್ಲಡ್ಕದ ನೂತನಕಟ್ಟಡಕ್ಕೆ ಶಿಲಾನ್ಯಾಸವನ್ನು ಮುಂಬೈನ ಹೇರಂಬ ಇಂಡಶ್ಟ್ರೀ ಸ್ ಲಿಮಿಟೆಡ್ ಸಂಸ್ಥೆಯ ಚಯರ್‌ಮೆನ್‌ ಕೂಳೂರು ಕನ್ಯಾನ ಸದಾಶಿವ ಕೆ.ಶೆಟ್ಟಿ ಜ.14ರಂದು ಶನಿವಾರ ನೆರವೇರಿಸಿದರು.

ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದ ಇವರು “ನಾವು ನಡೆಯುವದಾರಿಯಲ್ಲಿ ಸಂಘರ್ಷಗಳು ಸಾಮಾನ್ಯ.ಸಂಘರ್ಷಗಳನ್ನು ತಾಳ್ಮೆಯಿಂದ ಬಗೆಹರಿಸಿ ಜೀವನದಲ್ಲಿಉತ್ತಮವಾಗಿಇರುವುದನ್ನು ಸಾಧಿಸಬೇಕು. ನಮ್ಮಜೀವನದಲ್ಲಿ ಸ್ವಾಮಿ ವಿವೇಕಾನಂದ ಹಾಗೂ ಸುಭಾಷ್‌ಚಂದ್ರಬೋಸ್‌ ರಂತಹ ಮಹಾನ್ ವ್ಯಕ್ತಿಗಳನ್ನು ಆದರ್ಶವಾಗಿಟ್ಟುಕೊಂಡು ನಡೆಯಬೇಕು ಮತ್ತು ಜೀವನದಲ್ಲಿ ಇಟ್ಟ ಹೆಜ್ಜೆಯನ್ನುಯಾವತ್ತೂ ಮರೆಯಬಾರದು” ಎಂದರು.ಈ ವಿದ್ಯಾಸಂಸ್ಥೆ ಇನ್ನಷ್ಟು ಬೆಳೆದು ದೇಶಕ್ಕೆ ಮಾದರಿಯಾಗಲಿ ಎಂದುಹೇಳಿದರು.


ಸಂಸ್ಥೆಯ ಹಿರಿಯರಾದ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರುಇದರಅಧ್ಯಕ್ಷ ಡಾ.ಪ್ರಭಾಕರ್ ಭಟ್‌ಕಲ್ಲಡ್ಕಇವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ “ಹಳೇ ಬೇರು ಹೊಸ ಚಿಗುರುಎಂಬಂತೆ ಸಂಸ್ಕಾರಯುತ ಶಿಕ್ಷಣದ ಜೊತೆಗೆಆಧುನಿಕ ಶಿಕ್ಷಣವನ್ನು ಜೊತೆಗೂಡಿಸಿಕೊಂಡು ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿದ್ದೇವೆ” ಎಂದು ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳೊಂದಿಗೆ ಶುಭ ಹಾರೈಸಿದರು.


ಕಾರ‍್ಯಕ್ರಮದಲ್ಲಿ ವಿದ್ಯಾಕೇಂದ್ರದ ಹಿತೈಷಿ ಹಾಗೂ ಮುಂಬೈನ ಉದ್ಯಮಿಯಾಗಿರುವ ಬಾಲಕೃಷ್ಣ ಭಂಡಾರಿ, ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಹಸಂಚಾಲಕ ರಮೇಶ್‌ಎನ್, ಆಡಳಿತ ಮಂಡಳಿ ಸದಸ್ಯರು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ ಸ್ವಾಗತಿಸಿದರು.ಮುಖ್ಯೋಪಾಧ್ಯಾಯರಾದ ಗೋಪಾಲ ಎಂ ಅತಿಥಿಗಳಿಗೆ ಧನ್ಯವಾದಗೈದರು. ಕಾರ್ಯಕ್ರಮವನ್ನುಶಿಕ್ಷಕಿ ಸೌಮ್ಯಪಿ.ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter