ಬಂಟ್ವಾಳ:ದೇವರ ಪ್ರೇರಣೆಯಂತೆ ನಿಮಾಣಗೊಂಡ ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವಕ್ಕೆ ಭಕ್ತರು ಕೊಡುಗೆ ನೀಡಿದಾಗ ನಮಗೆ ದೇವರು ದುಪ್ಪಟ್ಟು ಶಕ್ತಿ ಮತ್ತು ಮಾನಸಿಕ ನೆಮ್ಮದಿ ಕರುಣಿಸುತ್ತಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಂ.ತುಂಗಪ್ಪ ಬಂಗೇರ ಹೇಳಿದ್ದಾರೆ.


ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಗ್ರಾಮದ ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಭಾನುವಾರ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಕ್ಷೇತ್ರದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ರಘು ಸಪಲ್ಯ ಮಾತನಾಡಿ, ಫೆ.೮ರಿಂದ ೧೦ರತನಕ ನಡೆಯುವ ಹೊರೆಕಾಣಿಕೆ ಮೆರವಣಿಗೆ, ದೇವರ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವದಲ್ಲಿ ಸಮಸ್ತ ಭಕ್ತರು ಪಾಲ್ಗೊಳ್ಳಬೇಕು ಎಂದರು.


ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಶ ಕಲ್ಲಡ್ಕ, ಹೊರೆಕಾಣಿಕೆ ಸಮಿತಿ ಪ್ರಧಾನ ಕಾರ್ಯದರ್ಶಿ ದೇವಪ್ಪ ಕುಲಾಲ್, ಉಪಾಧ್ಯಕ್ಷ ಎಂ.ಬೂಬ ಸಪಲ್ಯ ಮುಂಡಬೈಲು, ಪದಾಧಿಕಾರಿಗಳಾದ ಚಂದ್ರಶೇಖರ ಶೆಟ್ಟಿ ವಾಮದಪದವು, ವಿಜಯ ರೈ ಆಲದಪದವು, ಯಶೋಧರ ಶೆಟ್ಟಿ ದಂಡೆ, ನಾಗರಾಜ ಶೆಟ್ಟಿ ವಾಮದಪದವು, ನವೀನ್ ಕೋಟ್ಯಾನ್ ಬಿ.ಸಿ.ರೋಡು, ಜಯರಾಮ ಕುಲಾಲ್ ಉರುಡಾಯಿ, ಸುಂದರ ಪೂಜಾರಿ ಮೆಲ್ಕಾರ್ ಮತ್ತಿತರರು ಅನಿಸಿಕೆ ವ್ಯಕ್ತಪಡಿಸಿದರು.


ಉಪಾಧ್ಯಕ್ಷರಾದ ಉಮೇಶ ಬೋಳಂತೂರು, ಕೆ.ಬಾಬು ಸಪಲ್ಯ ವಗ್ಗ, ಜಗದೀಶ್ ಕುಂದರ್, ಕರುಣೇಂದ್ರ ಪೂಜಾರಿ, ಎಡಪದವು ಗಾಣಿಗರ ಸಂಘದ ಅಧ್ಯಕ್ಷ ಭಾಸ್ಕರ ಎಸ್.ಎಡಪದವು, ಪ್ರಮುಖರಾದ ಜಗದೀಶ ಕರೆಂಕಿ, ಅರುಣ್ ಕೋಟ್ಯಾನ್ ಕುದನೆ, ಸುರೇಶ ಮಾಂಗಾಜೆ, ಜಯಶಂಕರ ಕಾರಂಬಡೆ, ಯಶೋಧರ ಸಪಲ್ಯ ವಾಮದಪದವು ಮತ್ತಿತರರು ಇದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ ಸ್ವಾಗತಿಸಿ, ಕೋಶಾಧಿಕಾರಿ ಅಭಿಷೇಕ್ ಪಿಲಿಂಗಾಲು ವಂದಿಸಿದರು.

By suddi9

Leave a Reply

Your email address will not be published. Required fields are marked *