ಬಂಟ್ವಾಳ : ಶಿಕ್ಷಕರು ಮತ್ತು ಪೋಷಕರು ಸಮನ್ವಯದೊಂದಿಗೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು, ನರಿಕೊಂಬು ಸರ್ಕಾರಿ ಶಾಲೆಯ ಈ ನಿಟ್ಟಿನಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ತಿಳಿಸಿದ್ದಾರೆ.
ನರಿಕೊಂಬು ಸರ್ಕಾರಿ ಹಿ.ಪ್ರಾ.ಶಾಲೆಯ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಮುದಾಯ ಹೆಚ್ಚಿನ ಮುತುವರ್ಜಿ ವಹಿಸಿ, ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗಲು ಸಹಕರಿಸಬೇಕು ಎಂದರು.

ಗ್ರಾಮಪಂಚಾಯತ್ ಅಧ್ಯಕ್ಷೆ ವಿನೀತಾ ಪುರುಷೋತ್ತಮ್ ಅಧ್ಯಕ್ಷತೆ ವಹಿಸಿದ್ದರು.ಶಾಲೆಗೆ ಸ್ಥಳದಾನ ಮಾಡಿದ ನರಿಕೊಂಬು ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ಜನಾರ್ಧನ ಭಟ್, ಶ್ರೀಶ ರಾಯಸ, ಇನ್ನರ್ ವ್ಹೀಲ್ ಮುಖ್ಯಸ್ಥೆ ನಂದಿನಿ ರಘುಚಂದ್ರ, ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಯಶೋಧರ ಕರ್ಬೆಟ್ಟು , ಶಾಲಾ ಹಿರಿಯ ಶಿಕ್ಷಕಿ ಶೋಭಾರವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಶಾಸಕರು ನೂತನ ಕೊಠಡಿ, ವಾಚನಾಲಯ, ಶೌಚಾಲಯ, ಕುಡಿಯುವ ನೀರಿನ ಘಟಕ, ರಂಗಮಂದಿರ, ಸ್ಮಾರ್ಟ್ಸ್ ಕ್ಲಾಸ್ ಉದ್ಘಾಟಿಸಿ, ಪೀಠೋಪಕರಣಗಳ ವ್ಯವಸ್ಥೆಗೆ ಚಾಲನೆ ನೀಡಿದರು. ಗ್ರಾಮಪಂಚಾಯತ್ ಉಪಾಧ್ಯಕ್ಷ ಪ್ರಕಾಶ್ ಮಡಿಮುಗೇರು,
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಅಂಚನ್ , ಉಪಾಧ್ಯಕ್ಷೆ ಯಶೋಧ,ಬಂಟ್ವಾಳ ತಾ.ದೈಹಿಕ ಶಿಕ್ಷಣ ಪರಿವೀಕ್ಷಕಿ ರತ್ನಾವತಿ, ಶಿಕ್ಷಣ ಇಲಾಖೆಯ ಸುರೇಖಾ, ಶಂಭೂರು ಮೂರ್ತೆದಾರರ ಸಹಕಾರಿ ಸಂಘದ ಅಧ್ಯಕ್ಷ ಪುರುಷೋತ್ತಮ್ ಸಾಲಿಯಾನ್, ಉದ್ಯಮಿಗಳಾದ ರಘು ಸಫಲ್ಯ, ಲೋಕೇಶ್ ನರಹರಿನಗರ , ಶಾಲಾಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಪೋಷಕರಿಗೆ ಏರ್ಪಡಿಸಿದ್ದ ಸ್ಪರ್ಧೆಗಳು ಹಾಗೂ ಗೂಡುದೀಪ ಸ್ಪರ್ಧಾ ವಿಜೇತರನ್ನು ಗೌರವಿಸಿದರು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮ ನಡೆದು, ನಳದಮಯಂತಿ ಕನ್ನಡ ಪೌರಾಣಿಕ ನಾಟಕ ನಡೆಯಿತು.
ಶಾಲೆಯ ಅಂಗಳದಲ್ಲಿ ಮೇಳೈಸಿದ ಸಾಂಸ್ಕೃತಿಕ ಲೋಕ
ನರಿಕೊಂಬು ಸರ್ಕಾರಿ ಹಿ.ಪ್ರಾ.ಶಾಲೆಯಲ್ಲಿ ಬೆಳಿಗ್ಗೆ ಧ್ಚಜಾರೋಹಣದ ಸಂದರ್ಭ ನಡೆದ ವಿದ್ಯಾರ್ಥಿಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ವೈಭಯುತವಾಗಿ ಮೂಡಿಬಂತು. ಶಾಲೆಯ 263 ವಿದ್ಯಾರ್ಥಿಗಳು ಶಾಲೆಯ ಅಂಗಳದಲ್ಲಿ ನಡೆಸಿದ ಸಾಮೂಹಿಕ ಪ್ರದರ್ಶನಗಳು ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು. ವಕೀಲರಾದ ವೆಂಕಟೇಶ್ ಭಟ್ ಮೊಗರ್ನಾಡು ರವರು ಧ್ವಜಾರೋಹಣ ನೆರವೇರಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಅಂಚನ್ ಅಧ್ಯಕ್ಷತೆ ವಹಿಸಿದ್ದರು. ಶಂಭೂರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಪ್ರೌಢಶಾಲಾ ಕಾರ್ಯಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಪತ್ರಕರ್ತ ಮೌನೇಶ ವಿಶ್ವಕರ್ಮ, ರೋಟರಿ ಬಿ.ಸಿ.ರೋಡು ಸಿಟಿ ಅಧ್ಯಕ್ಷೆ ರೊ.ಪಲ್ಲವಿ ಕಾರಂತ, ಗ್ರಾ.ಪಂ.ಸದಸ್ಯರಾದ ರಂಜಿತ್ ಕೆದ್ದೇಲ್, ಚಿತ್ರಾವತಿ, ಸಿಆರ್ ಪಿ ಸತೀಶ್ ರಾವ್,ಪ್ರಮುಖರಾದ ದಿನೇಶ್ ಪಂಡಿತ್, ಸುನಿಲ್‌ಕುಮಾರ್, ರಾಜೇಶ್ ಜೀವಿತಾ ಕುಲಾಲ್, ಕೃಷ್ಣ ಕುಲಾಲ್, ನಾಗೇಶ್ ಕುಲಾಲ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚೇತನ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ಪ್ರೇಮಾ ಎಂ. ಸ್ವಾಗತಿಸಿದರು, ಶಿಕ್ಷಕಿ ಬಬಿತಾ ವಂದಿಸಿದರು. ಶಿಕ್ಷಕಿ ಪೂಜಾಶ್ರೀ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಶಿಕ್ಷಕರಾದ ಸುಜಾತ, ಶೋಭಾ, ಪ್ರವೀಣ ಕುಮಾರಿ, ಹಿರಣ್ಮಯಿ,ದಿವ್ಯಶ್ರೀ, ಮೀನಾಕ್ಷಿ, ವಿಲ್ಮಾ, ಹರಿಣಾಕ್ಷಿ ಸಹಕರಿಸಿದರು.
