ಬಂಟ್ವಾಳ: ನಿತ್ಯಾನಂದ ಗೋವಿಂದ ಸ್ವಾಮಿ ಭಜನಾ ಮಂದಿರ
ಸ್ವಾಮೀಜಿದ್ವಯರ ಪಲ್ಲಕಿ ಉತ್ಸವ
ಬಂಟ್ವಾಳ:ಇಲ್ಲಿನ ಬಡ್ಡಕಟ್ಟೆ ಶ್ರೀ ನಿತ್ಯಾನಂದ ಗೋವಿಂದ ಸ್ವಾಮೀ ಭಜನಾ ಮಂದಿರದಲ್ಲಿ ಪ್ರತಿಷ್ಠಾ ವಧರ್ಂತಿ ಉತ್ಸವ ಪ್ರಯುಕ್ತ ಸ್ವಾಮೀಜಿದ್ವಯರ ಪಲ್ಲಕಿ ಉತ್ಸವ ಶುಕ್ರವಾರ ರಾತ್ರಿ ನಡೆಯಿತು. ಇದೇ ವೇಳೆ ಆಕರ್ಷಕ ಮೆರವಣಿಗೆ ಮತ್ತು ನೇತ್ರಾವತಿ ನದಿಯಲ್ಲಿ ಜಳಕ ನೆರವೇರಿತು.
ಆರಂಭದಲ್ಲಿ ಗಣಯಾಗ ಮತ್ತು ಸ್ವಾಮೀಜಿದ್ವಯರ ಪಂಚಲೋಹದ ವಿಗ್ರಹಕ್ಕೆ ಭಕ್ತರಿಂದ ಸ್ವತಃ ಸೀಯಾಳಾಭಿಷೇಕ ನಡೆಯಿತು. ಇದೇ ವೇಳೆ ನಡೆದ ಭಜನೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಅಪಾರ ಮಂದಿ ಭಕ್ತರು ಪಾಲ್ಗೊಂಡರು. ಆಡಳಿತ ಸಮಿತಿ ಅಧ್ಯಕ್ಷ ಬಿ.ಯೋಗೀಶ ಸಪಲ್ಯ ಮತ್ತಿತರರು ಇದ್ದರು. ಆಡಳಿತ ಟ್ರಸ್ಟಿ ಬಿ.ಯೋಗೀಶ ಸಪಲ್ಯ ಮತ್ತಿತರರು ಇದ್ದರು.
