ಬಂಟ್ವಾಳ:ಇಲ್ಲಿನ ಫರಂಗಿಪೇಟೆ ಸಮೀಪದ ವಿಜಯನಗರ ಎಂಬಲ್ಲಿ ಡಿ.೨೪ರಂದು ನಡೆಯಲಿರುವ ಶ್ರೀರಾಮ ನಾಮ ತಾರಕ ಜಪಯಜ್ಞ ಪ್ರಯುಕ್ತ ಬ್ರಹ್ಮರಕೂಟ್ಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ಆರಕ್ಷಕ ಹೊರೆಕಾಣಿಕೆ ಮೆರವಣಿಗೆ ನಡೆಯಿತು.


ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸರ‍್ಯನಾರಾಯಣ ಭಟ್ ನೇತೃತ್ವದಲ್ಲಿ ನಡೆಯಲಿರುವ ಈ ಯಜ್ಞದಲ್ಲಿ ಸ್ಥಳೀಯ ೮ ಗ್ರಾಮಗಳ ಸಾವಿರಾರು ಮಂದಿ ಭಾಗವಹಿಸುವರು. ಇದೇ ೨೫ರಂದು ರೂ ೭.೫ ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿರುವ ಆಂಜನೇಯ ದೇವಸ್ಥಾನಕ್ಕೆ ಶಿಲಾನ್ಯಾಸವೂ ನಡೆಯಲಿದೆ. ಈ ಹಿನ್ನೆಯಲ್ಲಿ ಇಲ್ಲಿನ ೮ ಗ್ರಾಮಗಳ ಭಕ್ತರಿಂದ ಗುರುವಾರ ಸಂಜೆ ಅಕ್ಕಿ, ತೆಂಗಿನಕಾಯಿ, ತರಕಾರಿ ಮತ್ತಿತರ ಸಾಮಾಗ್ರಿ ಅಲಂಕಾರಗೊಂಡ ವಾಹನಗಳಲ್ಲಿ ಮೆರವಣಿಗೆ ನಡೆಸಿದರು.
ಸಿ.ಕೆ.ಪೊದುವಾಳ್ ಮೆರವಣಿಗೆಗೆ ಚಾಲನೆ ನೀಡಿದರು. ಉದ್ಯಮಿ ಪುರುಷೋತ್ತಮ ಶೆಟ್ಟಿ ಸಮಿತಿ ಅಧ್ಯಕ್ಷ ಅಜಿತ್ ಚೌಟ ದೇವಸ್ಯ, ಕಾರ್ಯಾಧ್ಯಕ್ಷ ಕೊಡ್ಮಾಣ್ ಕಾಂತಪ್ಪ ಶೆಟ್ಟಿ, ಸಂಜಾಲಕ ಕೆ.ಜಿ.ವಿಠಲ ಆಳ್ವ, ಪ್ರಮುಖರಾದ ಚಂದ್ರಶೇಖರ ಗಾಂಭೀರ, ಉಮೇಶ್ ಶೆಟ್ಟಿ ಬರ್ಕೆ, ಕರುಣಾಕರ ಕೊಟ್ಟಾರಿ ಅರ್ಕುಳ, ಅನಿಲ್ ಪಂಡಿತ್ ಬ್ರಹ್ಮರಕೊಟ್ಲು, ಮನೋಜ್ ತುಪ್ಪೆಕಲ್ಲು, ದಾಮೋದರ ನೆತ್ತರಕೆರೆ, ಟಿ.ತಾರನಾಥ ಕೊಟ್ಟಾರಿ, ದಿನೇಶ್ ಶೆಟ್ಟಿ ಕೊಟ್ಟಿಂಜ, ಜನರ್ಧನ ಸುಜೀರು, ರವೀಂದ್ರ ಕಂಬಳಿ, ಗಣೇಶ ಸುವರ್ಣ, ಜೆ.ಪ್ರಭಾಕರ ಮಾಸ್ತರ್, ಮನೋಜ್ ಆಚಾರ್ಯ ನಾಣ್ಯ, ಜಯರಾಜ್ ಕರ್ಕೇರ ಮತ್ತಿತರರು ಇದ್ದರು.

By Suddi9

Leave a Reply

Your email address will not be published. Required fields are marked *