ಬಿ.ಸಿ.ರೋಡು: ಸೈಬರ್ ಕ್ರೈಂ ಜಾಗೃತಿ ಕಾರ್ಯಕ್ರಮ
ಬಂಟ್ವಾಳ:ವಿದ್ಯಾರ್ಥಿಗಳು ಮೊಬೈಲ್ ಮೂಲಕ ವಿವಿಧ ವಂಚನೆಗೆ ಒಳಗಾಗುವ ಬದಲಾಗಿ ಜಾಗೃತರಾಗಿ ಇತರರಿಗೂ ಸದಾ ಜಾಗೃತಿ ಮುಡಿಸಿದಾಗ ಅಪರಾಧ ಕೃತ್ಯ ಯನ್ನುಂಟು ಮಾಡಿದಾಗ ಸೈಬರ್ ಅಪರಾಧ ಕೃತ್ಯ ತಡೆಗಟ್ಟಬಹುದು ಎಂದು ಮಂಗಳೂರು ಕ್ರೆöÊಂ ವಿಭಾಗ ಎಸೈ ನಿತ್ಯಾನಂದ ಗೌಡ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡು ಸಮೀಪದ ಬಿ.ಮೂಡ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ಸೈಬರ್ ಕ್ರೈಂ ಮತ್ತು ಸಂಚಾರ ನಿಯಮಗಳ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಪೊಲೀಸ್ ಸಿಬ್ಬಂದಿ ಪಳನಿವೇಲು, ನಿರಂಜನ್, ದರ್ಶನ್, ಉಪನ್ಯಾಸಕರಾದ ಅಬ್ದುಲ್ ರಝಾಕ್, ಬಾಲಕೃಷ್ಣ ನಾಯ್ಕ್, ದಾಮೋದರ್ ಮತ್ತಿತರರು ಇದ್ದರು. ಕಾಲೇಜಿನ ಪ್ರಾಂಶುಪಾಲ ಯೂಸುಫ್ ವಿಟ್ಲ ಸ್ವಾಗತಿಸಿ, ಉಪನ್ಯಾಸಕ ಅಬ್ದುಲ್ ರಝಾಕ್ ವಂದಿಸಿದರು