ಮಂಗಳೂರು: ಪ್ರೆಸ್ ಕ್ಲಬ್ ದಿನಾಚರಣೆ ಸಂದರ್ಭದಲ್ಲಿ ದ.ಕ. ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

2021-22ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ.85 (ಡಿಸ್ಟಿಂಕ್ಷನ್) ಮತ್ತು ಅದಕ್ಕಿಂತ ಅಧಿಕ ಅಂಕ ಪಡೆದ ದ.ಕ.ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ಮಕ್ಕಳನ್ನು ಗೌರವಿಸಲಾಗುವುದು.

ಅರ್ಹ ವಿದ್ಯಾರ್ಥಿಗಳ ಬಗ್ಗೆ ಅಂಕ ಪಟ್ಟಿಯ ನಕಲು ಪ್ರತಿಯ ದಾಖಲೆ ಸಹಿತ 2022ರ ಡಿಸೆಂಬರ್ 25ರೊಳಗೆ ಮಂಗಳೂರು ಪ್ರೆಸ್‌ ಕ್ಲಬ್‌ಗೆ ಕಳುಹಿಸಿಕೊಡಿ.

ಮುಹಮ್ಮದ್ ಆರಿಫ್ ಪಡುಬಿದ್ರಿ, ಪ್ರಧಾನ ಕಾರ್ಯದರ್ಶಿ, ಮಂಗಳೂರು ಪ್ರೆಸ್ ಕ್ಲಬ್. ‘ಪತ್ರಿಕಾ ಭವನ’, ಲೇಡಿಹಿಲ್ – ಉರ್ವ ಮಾರ್ಕೆಟ್ ರಸ್ತೆ, 

ಮಂಗಳೂರು-6. Mob: 9343381816.

By suddi9

Leave a Reply

Your email address will not be published. Required fields are marked *