ಶ್ರೀ ಕ್ಷೇತ್ರ ಬದನಡಿ: ಷಷ್ಠಿ ಮಹೋತ್ಸವ, ದೇವರ ಬಲಿ, ದೈವಗಳಿಗೆ ನೇಮ
ಬಂಟ್ವಾಳ: ತಾಲ್ಲೂಕಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಪ್ರಯುಕ್ತ ಮಂಗಳವಾರ ದೇವರ ಬಲಿ ಉತ್ಸವ ನಡೆಯಿತು.
ಇಲ್ಲಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠಿ ಮಹೋತ್ಸವ ಮತ್ತು ದೇವರ ಬಲಿ ಉತ್ಸವ ಮಂಗಳವಾರ ನಡೆಯಿತು. ಕ್ಷೇತ್ರದ ತಂತ್ರಿ ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯರ ನೇತೃತ್ವದಲ್ಲಿ ದೇವರಿಗೆ ಪವಮಾನ ಅಭಿಷೇಕ, ನವಕ ಕಲಶಾಭೀಷೇಕ, ಸ್ಕಂದಯಾಗ, ಸಾಮೂಹಿಕ ಆಶ್ಲೇಷ ಬಲಿ, ಬ್ರಹ್ಮಲಿಂಗೇಶ್ವರ ದೇವರಿಗೆ ಏಕಾದಶ ರುದ್ರಾಭಿಷೇಕ ನೆರವೇರಿತು. ಇದೇ ವೇಳೆ ದೇವರ ಪಲ್ಲಕಿ ಉತ್ಸವ ಭಜನೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡರು.
ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ಅನುವಂಶಿಕ ಮೊಕ್ತೇಸರ ಕೆ.ಸುಂದರ ರಾವ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಕರೆಂಕಿಜೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ, ಸದಸ್ಯರಾದ ರಾಜೇಶ ಗೋವಿಂದಬೆಟ್ಟು, ಶರತ್ ಕುಮಾರ್ ಕೊಯಿಲ, ಆನಂದ ಬುರಾಲು, ಲೋಕೇಶ ಕೈತ್ರೋಡಿ, ನಳಿನಿ ಬದನಡಿ, ಯಮುನಾ ಕೈತ್ರೋಡಿ, ಪ್ರಮುಖರಾದ ರಾಜೇಶ ಶೆಟ್ಟಿ ಸೀತಾಳ, ರಮಾನಾಥ ರಾಯಿ, ಪ್ರಭಾಕರ ಪ್ರಭು, ಪ್ರಕಾಶ ಜೈನ್ ಬೊಲ್ಲೋಡಿ, ರಾಮಚಂದ್ರ ಶೆಟ್ಟಿಗಾರ್, ದೇವಪ್ಪ ಕುಲಾಲ್, ಮೋಹನ್ ಕೆ.ಶ್ರೀಯಾನ್, ಹರೀಶ ಆಚಾರ್ಯ ರಾಯಿ, ಬಿ.ದಯಾನಂದ ಸಪಲ್ಯ, ದಿನೇಶ ಸುವರ್ಣ, ಸಂದೇಶ ಮಡಿವಾಳ, ಅರ್ಚಕ ನಾಗೇಶ ರಾವ್ ಮತ್ತಿತರರು ಇದ್ದರು.
ಸಂಜೆ ಭಜನೆ, ರಂಗಪೂಜೆ, ದುರ್ಗಾ ನಮಸ್ಕಾರ, ರಾತ್ರಿ ಪರಿವಾರ ದೈವ ಮೈಸಂದಾಯ, ರಕ್ತೇಶ್ವರಿ, ಕಲ್ಲುರ್ಟಿ, ಅಣ್ಣಪ್ಪ ಪಂಜುರ್ಲಿ ದೈವಗಳಿಗೆ ನೇಮೋತ್ಸವ ನಡೆಯಿತು.