ಬಂಟ್ವಾಳ: 2025 ರೊಳಗೆ ಎಲ್ಲಾ ವಸತಿ ರಹಿತರಿಗೆ ಮನೆ ಒದಗಿಸುವ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಹೆಚ್ಚಿನ ಅನುದಾನ ಒದಗಿಸುವ ಕೆಲಸ ಮಾಡುತ್ತಿದ್ದು, ಬಂಟ್ವಾಳ ಕ್ಷೇತ್ರದ 39 ಗ್ರಾ.ಪಂ.ಗಳಿಗೆ 2000 ಕ್ಕೂ ಅಧಿಕ ಮನೆಮಂಜೂರಾಗಿದ್ದು, ಪುರಸಭಾ ವ್ಯಾಪ್ತಿಯಲ್ಲಿ ಪ್ರಸ್ತುತ 65 ಮಂದಿಗೆ ಮನೆ ಮಂಜೂರಾತಿ ಪತ್ರ ನೀಡುತ್ತಿದ್ದೇವೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು.

ಅಂಬೇಡ್ಕರ್ ನಗರ ವಸತಿ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆಯಡಿಲ್ಲಿ ಮನೆ ಮಂಜೂರಾದ ಫಲಾನುಭವಿಗಳಿಗೆ ಕಾಮಗಾರಿ ಅದೇಶ ಪತ್ರವನ್ನು ನೀಡಿ ಮಾತನಾಡಿದರು.

ಪುರಸಭಾ ವ್ಯಾಪ್ತಿಯಲ್ಲಿ ಈವರೆಗೆ ಅರ್ಜಿ ನೀಡಿದ ಒಟ್ಟು 65 ಮಂದಿಗೆ ಫಲಾನುಭವಿಗಳಿಗೆ ಹಕ್ಕು ನೀಡಲಾಗಿದ್ದು, ಇನ್ನು ನಿವೇಶನ ರಹಿತರು ಶೀಘ್ರವಾಗಿ ಪುರಸಭೆಗೆ ಅರ್ಜಿ ನೀಡಿದರೆ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ನೀಡಲಾಗುವುದು ಎಂದು ಅವರು ಹೇಳಿದರು.

ಮುಖ್ಯಾಧಿಕಾರಿ ಸ್ವಾಮಿ ಆರ್, ಪುರಸಭಾ ಸದಸ್ಯ ರಾದ ವಿದ್ಯಾವತಿ ಪ್ರಮೋದ್ ಕುಮಾರ್, ಮೀನಾಕ್ಷಿ ಗೌಡ, ಶಶಿಕಲಾ, ದೇವಕಿ, ಹರಿಪ್ರಸಾದ್,
ನಾಮನಿರ್ದೇಶನ ಸದಸ್ಯ ಚಂದ್ರಶೇಖರ ದರ್ಬೆ, ಪುರಸಭಾ ಇಂಜಿನಿಯರ್ ಡೋಮೆನಿಕ್ ಡಿ.ಮೆಲ್ಲೊ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *