ಬಂಟ್ವಾಳ: ಅಂತರ್ ರಾಷ್ಟ್ರೀಯ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಂತ್ಯ-೯ರ ಪ್ರಾಂತೀಯ ಸಮ್ಮೇಳನ ಇದೇ ೨೬ರಂದು ಸಂಜೆ ೫ ಗಂಟೆಗೆ ಸಜಿಪಮೂಡ ಗ್ರಾಮದ ಕಂದೂರು ಬಜಾರ್ ಆಡಿಟೋರಿಯಂ ನಲ್ಲಿ ನಡೆಯಲಿದೆ ಎಂದು ಪ್ರಾಂತೀಯ ಅಧ್ಯಕ್ಷ ಲಕ್ಷ್ಮಣ್ ಕುಲಾಲ್ ಹೇಳಿದ್ದಾರೆ.

ಇಲ್ಲಿನ ಬಿ.ಸಿ.ರೋಡಿನಲ್ಲಿ ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ಖ್ಯಾತ ಸಾಹಿತಿ, ಬರಹಗಾರ ಚಟ್ಟಳ್ಳಿ ಮಹೇಶ್ ದಿಕ್ಸೂಚಿ ಭಾಷಣ ಮಾಡುವರು. ರೋಟರಿ ಕ್ಲಬ್ ಪೂರ್ವ ರಾಜ್ಯಪಾಲ ಅಶ್ವನಿ ಕುಮಾರ್ ರೈ, ಲಯನ್ಸ್ ಜಿಲ್ಲಾ ರಾಜ್ಯಪಾಲ ಸಂಜೀವ ಶೆಟ್ಟಿ ಮತ್ತಿತರ ಗಣ್ಯರು ಭಾಗವಹಿಸುವರು ಎಂದರು.

ಇದೇ ವೇಳೆ ಲಯನ್ಸ್ ವಿಶೇಷ ಮಕ್ಕಳಿಗೆ ಫಿಜಿಯೋಥೆರಪಿ ಕೇಂದ್ರ ವಿಸ್ತೃತ ಕಟ್ಟಡ ನಿರ್ಮಾಣಕ್ಕೆ ಸಹಾಯ, ರಾಜ್ಯೋತ್ಸವ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಲಯನ್ಸ್ ವಲಯಾಧ್ಯಕ್ಷ ರಮಾನಂದ ನೂಜಿಪ್ಪಾಡಿ, ಮನೋರಂಜನ್ ಕೆ.ಆರ್., ತಪೋಧನ ಶೆಟ್ಟಿ, ಕೃಷ್ಣ ಶ್ಯಾಮ್ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *