ಬಂಟ್ವಾಳ: ವೃದ್ದ ಮಹಿಳೆಯೋರ್ವಳು ವಾಸ ಮಾಡಲು ಸೂರಿಲ್ಲದೆ ಗೂಡಿನಂತಿರುವ ಶೌಚಾಲಯವನ್ನೇ ಮನೆಯನ್ನಾಗಿಸಿಕೊಂಡು, ತನ್ನ ಎಲ್ಲಾ ದಿನ ನಿತ್ಯದ ಬೇಕು ಬೇಡಗಳನ್ನು ಪೂರೈಸಿಕೊಂಡು ಜೀವನ ಸಾಗಿಸುವ ಕರುಣಾಜನಕ ಸ್ಥಿತಿಯೊಂದು ಮಾರಿಪಳ್ಳದಲ್ಲಿದೆ. ಈಕೆಯ ಸ್ಥಿತಿಯನ್ನು ಕಂಡರೆ ಎಂತಹವರಿಗೂ ಕರುಣೆ ಬಾರದಿರದು. ಆರೋಗ್ಯ ಸಚಿವ ಯು.ಟಿ.ಖಾದರ್ ಅವರ ವಿಧಾನ ಸಭಾ ಕ್ಷೇತ್ರವಾದ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಮಾರಿಪಳ್ಳ ಪಾಡಿ ಎಂಬಲ್ಲಿ ಮೈಮುನಾ ಯಾನೆ ಲತೀಮಾ ಎಂಬವರು ಸುಮಾರು 2 ವರ್ಷಗಳಿಂದ ಏಕಾಂಗಿಯಾಗಿ ಮನೆಯಿಲ್ಲದೆ ಗಬ್ಬೆಂದು ನಾರುವ ಬಾಡಿಗೆ ಶೌಚಾಲಯದಲ್ಲಿ ಬದುಕಿಗಾಗಿ ವಿಚಿತ್ರ ರೀತಿಯಲ್ಲಿ ಒದ್ದಾಟ ನಡೆಸುತ್ತಿದ್ದಾರೆ.

maripalla (1)

maripalla (2)

maripalla (3)

maripalla (4)
ಮಾರಿಪಳ್ಳ ವ್ಯಾಪಾರಸ್ಥ ಹಸನಬ್ಬ ಎಂಬವರಿಗೆ ಸೇರಿದ ಮೂರು ಬಾಡಿಗೆ ಮನಗೆ ಅದರ ಪಕ್ಕದಲ್ಲೇ ಮೂರು ಶೌಚಾಲಯವನ್ನು ನಿಮರ್ಿಸಲಾಗಿತ್ತು. ಅದರಲ್ಲೇ ಮೈಮುನಾ ತಾತ್ಕಾಲಿಕ ವಾಸಕ್ಕಾಗಿ ಅ ಕೋಣೆಯನ್ನು ಕೇಳಿದಾಗ ಮೊದಲು ನಿರಾಕರಿಸಿದ ಮನೆ ಮಾಲಕ ಕೊನೆಗೆ ಮನ ಕರಗಿ ಬಾಡಿಗೆ ಮನೆ ಸಿಗುವವರಗೆ ತಂಗುವಂತೆ ತಿಳಿಸಿದ್ದರು. ಆದರೆ ಈ ಮಹಿಳಗೆ ಬೇರೆ ದಾರಿಯಿಲ್ಲದೆ ಇಲ್ಲೇ ಉಳಿದುಕೊಳ್ಳುವಂತಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಮಹಿಳೆಯನ್ನು ಹೊರ ಹೋಗುವಂತೆ ಜೋರು ಮಾಡಿದರೆ ಬಸ್ ನಿಲ್ದಾಣದಲ್ಲೇ ಮಲಗಬೇಕಾಗದ ಪರಿಸ್ಥಿತಿ ಬರಬಹುದು ಎಂದು ಹೆದರಿ ಅವರು ಮೌನವಾಗಿದ್ದಾರೆ ಎಮದು ಹೇಳುತ್ತಿದ್ದಾರೆ.
ಮೈಮುನಾ ಅವರಿಗೆ ವಿದ್ಯಾಭ್ಯಾಸವಿಲ್ಲ, ಇವರ ಹುಟ್ಟೂರು ಮಾರಿಪಳ್ಳ, ಸರಿಯಾಗಿ ಹೆಂಗಸಿಗೆ ಊರು ಗೊತ್ತಿಲ್ಲದ ಕಾರಣ ಈಕೆಯನ್ನು ಉಪ್ಪಿನಂಗಡಿಯ ಬಳಿಯ ಯಾವುದೋ ಊರಿಗೆ ಮದುವೆ ಮಾಡಿ ಕೊಡಲಾಗಿದೆ ಎಂದು ಹೇಳುತ್ತಾರೆ, ಮತ್ತು ನಾಲ್ಕು ಜನ ಗಂಡು ಮಕ್ಕಳಿದ್ದಾರೆ. ಸುಮಾರು 21ವರ್ಷ 6 ತಿಂಗಳಾಯಿತು ಮೈಮುನ ಅವರ ಗಂಡ ಇಲ್ಲದೆ, ಅವರು ಎಲ್ಲಿ ಹೋಗಿದ್ದಾರೆ ಏನಾಗಿದ್ದಾರೆ ಎಂದರೆ ಗೊತ್ತಿಲ್ಲ. ಹುಡುಕುವವರು ಯಾರು ಎಂದು ಪಶ್ನೆ ಮಾಡುತ್ತಾರೆ. ಮಕ್ಕಳು ಮಾತ್ರ ಮದುವೆ ಮಾಡಿಕೊಂಡು ತನ್ನ ಹೆಂಡತಿಯೊಂದಿಗೆ ಬೇರೆ ಮನೆ ಮಾಡಿ ಇದ್ದಾರೆ. ಆದರೆ ಅವರು ಎಲ್ಲಿ ಇದ್ದಾರೆ ಏನು ಮಾಡುತ್ತಿದಾರೆ ಎಂದು ಕೇಳಿದರೆ ಅವರಿಗೆ ಗೊತ್ತಿಲ್ಲ. ಅಂತೂ ನಾಲ್ಕು ಜನ ಗಂಡು ಮಕ್ಕಳು ವೃದ್ದ ತಾಯಿಯನ್ನು ಬಿಟ್ಟು ಹೋಗಿದ್ದಾರೆ. ಇವರು ಮತದಾನ ಕೂಡಾ ಮಾಡಿಲ್ಲ. ಮನೆಯಿಲ್ಲದ ಕಾರಣ ಸರಕಾರದ ಯಾವ ಸವಲತ್ತು ಸಿಗುತ್ತಿಲ್ಲ. ಗ್ರಾ.ಪಂ.ಗೆ ನಿವೇಶನಕ್ಕೆ ಅಜರ್ಿ ಹಾಕಲು ಕರೆದುಕೊಂಡು ಹೋಗುವವರಿಲ್ಲ, ಹೀಗೆ ಸಮಸ್ಯೆಯ ಬಗ್ಗೆ ಹೇಳಿಕೊಳ್ಳುತ್ತಾ ಹೋಗುತ್ತಾರೆ. ಈ ಪುಟ್ಟ ಗುಡಿಸಲಿನಲ್ಲಿ ಒಂದು ಬದಿಯಲ್ಲಿ ತನ್ನ ಚಾಪೆಯನ್ನು ಮತ್ತೊಂದು ಕಡೆಯಲ್ಲಿ ಬಟ್ಟೆ ಬರಗಳನ್ನು ರಾಶಿ ಹಾಕಲಾಗಿದೆ, ಶೌಚಾಲಯದ ಮೇಲೆ ರಟ್ಟನ್ನು ಮುಚ್ಚಲಾಗಿದೆ , ಪಾತ್ರೆಗಳನ್ನು ಅದರ ಮೇಲೆ ಇಟ್ಟಿದ್ದಾರೆ. ಸ್ನಾನ, ಶೌಚಾಲಯ, ಊಟ, ನಿದ್ದೆ, ಬೀಡಿ ಕಟ್ಟುವುದು ಎಲ್ಲವೂ ಇದೇ ಕೊಟಡಿಯೊಳಗೆ. ಜೊತೆ 2 ಬೆಕ್ಕು ಮರಿಗಳನ್ನು ಎರಡು ಕೋಳಿ ಮರಿಗಳನ್ನು ಪ್ರೀತಿಯಿಂದ ಸಾಕುತ್ತಿದ್ದಾರೆ . ಅದೇ ಅವರ ಬಂದು ಬಳಗ ಸಂಗಾತಿ ಎಲ್ಲವೂ ಆಗಿದೆ. ಒಟ್ಟಿನಲ್ಲಿ ಆರೋಗ್ಯ ಸಚಿವರ ಊರಿನಲ್ಲಿ ಆರೋಗ್ಯಕ್ಕೆ ಕುತ್ತು ಬರುವ ರೀತಿಯಲ್ಲಿ ಕರುಣಾಜನಕ ರೀತಿಯ ಬದುಕು ಸಾಗಿಸುವ ಮೈಮುನಾ ಅವರ ಜೀವನಕ್ಕೆ ಬೆಳಕು ತೋರಿಸುತ್ತಾರಾ? ಈ ಬಗ್ಗೆ ಸ್ಥಳಿಯ ಪಂಚಾಯತ್ ಕೂಡಾ ನಿಗಾ ವಹಿಸುತ್ತದಾ? ತಾ.ಆರೋಗ್ಯ ಇಲಾಖೆ ಒಮ್ಮೆಯಾದರೂ ಇಲ್ಲಿಗೆ ಬೇಟಿ ನೀಡಿತೇ ಎನ್ನುವ ಪ್ರಶ್ನೆ ಮೂಡತೊಡಗಿದೆ

By suddi9

Leave a Reply

Your email address will not be published. Required fields are marked *