Published On: Sun, Nov 20th, 2022

ವೈಯಕ್ತಿಕ ಡೇಟಾ ಸಂರಕ್ಷಣೆ – ನಿಯಮ ಉಲ್ಲಂಘಿಸಿದ್ರೆ 500 ಕೋಟಿವರೆಗೂ ಬೀಳುತ್ತೆ ದಂಡ

ನವದೆಹಲಿ: ಭಾರತದ ಪ್ರಮುಖ ನಗರಗಳಿಗೆ 5ಜಿ (5G) ಕಾಲಿಟ್ಟಿದ್ದು, ಡಿಜಿಟಲ್ ಯುಗದಲ್ಲಿ ಹೊಸ ಕ್ರಾಂತಿ ಶುರುವಾಗಿದೆ. ಆದರೆ ತಾಂತ್ರಿಕತೆಯಲ್ಲಿ (Technology) ಬದಲಾವಣೆ ಕಂಡುಬಂದಂತೆ ಸೈಬರ್ ಅಪರಾಧಗಳು ಹಾಗೂ ದತ್ತಾಂಶ ಕಳವಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅದಕ್ಕಾಗಿ ಸಂರಕ್ಷಣಾ ಕ್ರಮಗಳನ್ನು ಒಳಗೊಂಡ ಹೊಸ ಕರಡನ್ನು ಬಿಡುಗಡೆ ಮಾಡಲಾಗಿದೆ.

ಕೇಂದ್ರ ಟೆಲಿಕಾಂ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರಿಂದು ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ -2022ರ ಕರಡನ್ನು (Digital Data Protection Bill) ಬಿಡುಗಡೆಗೊಳಿಸಿದ್ದಾರೆ. ಡಿಸೆಂಬರ್ 17ರ ವರೆಗೆ ಸಾರ್ವಜನಿಕರು ಮಸೂದೆಯ ಅಂಶಗಳ ಬಗ್ಗೆ ಪ್ರತಿಕ್ರಿಯೆ ನೀಡಬಹುದಾಗಿದೆ.

ಅಂಶಗಳೇನಿದೆ?
ದೂರಸಂಪರ್ಕ ಮಸೂದೆ-2022 ಮತ್ತು 2000ರ ಪರಿಷ್ಕೃತ ಐಟಿ ಕಾಯ್ದೆಯು ಈ ವೈಯಕ್ತಿಕ ಡೇಟಾ ಸಂರಕ್ಷಣೆಗೆ ಕಾನೂನು ಅಡಿಪಾಯ ಹಾಕಿಕೊಡುತ್ತದೆ. ಪ್ರತಿಯೊಬ್ಬರ ವೈಯಕ್ತಿಕ ಡೇಟಾಗಳನ್ನು ಸಂರಕ್ಷಿಸಲು, ವ್ಯಕ್ತಿಯ ಹಕ್ಕು ಹಾಗೂ ಕಾನೂನು ಬದ್ಧ ಉದ್ದೇಶಗಳನ್ನು ಈಡೇರಿಸಲು ಇದು ಶಾಸನ ಬದ್ಧ ಕ್ರಮವಾಗಿದ್ದು, ಅದಕ್ಕಾಗಿ ಭಾರತೀಯ ಡೇಟಾ ಸಂರಕ್ಷಣಾ ಮಂಡಳಿ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ (Government Of India) ಅನುಮತಿ ನೀಡಲಾಗುತ್ತದೆ.

ಡೇಟಾಗಳಿಗೆ ಭದ್ರತಾ ಕ್ರಮಗಳನ್ನು ಕಾರ್ಯಗತಗೊಳಿಸುವಲ್ಲಿ ವಿಫಲವಾದ್ರೆ ಅಥವಾ ಲೋಪಗಳು ಕಂಡುಬಂದಲ್ಲಿ ಅಂತಹ ಸಂಸ್ಥೆಗಳಿಗೆ 500 ಕೋಟಿ ರೂ. ದಂಡ ವಿಧಿಸುವ ಅಂಶವನ್ನು ಸೇರಿಸಲಾಗಿದೆ.

ಈ ಹಿಂದೆ 2018ರಲ್ಲಿ ಸಂಸತ್ತಿನಲ್ಲಿ ಡೇಟಾ ಸಂರಕ್ಷಣಾ ಮಸೂದೆ ಮಂಡನೆಯಾಗಿತ್ತು. ಇದಕ್ಕೆ ಪ್ರತಿಪಕ್ಷಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲಾಗಿತ್ತು. ಇದೀಗ ಹೊಸ ಕರಡನ್ನು ಬಿಡುಗಡೆ ಮಾಡಲಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter