ವೈಯಕ್ತಿಕ ಟೀಕೆ ಮಾಡುತ್ತಿದ್ರೆ ಚಪ್ಪಲಿಯಲ್ಲಿ ಹೊಡಿತೀನಿ – ಬಿಜೆಪಿ ಸಂಸದರಿಗೆ ಕವಿತಾ ವಾರ್ನ್
ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಮತ್ತು ಟಿಆರ್‍ಎಸ್ ಎಂಎಲ್‍ಸಿ ಕೆ.ಕವಿತಾ ಅವರು ತಮ್ಮ ವಿರುದ್ಧ ವೈಯಕ್ತಿಕ ಟೀಕೆಗಳನ್ನು ಮಾಡುವುದನ್ನು ಮುಂದುವರಿಸಿದರೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಬಿಜೆಪಿ ಸಂಸದ ಡಿ.ಅರವಿಂದ್‍ಗೆ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ ಅವರು ನೀಡಿರುವ ಅವಹೇಳನಕಾರಿ ಹೇಳಿಕೆ ಕುರಿತಂತೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಕವಿತಾ ಅರವಿಂದ್ ಅವರು, ಅರವಿಂದ್ ಕೆಳಮಟ್ಟಕ್ಕೆ ಇಳಿದಿದ್ದಾರೆ. ನಿಮ್ಮ ಬಗ್ಗೆ ನಿಮಗೆ ಏನನಿಸುತ್ತಿದೆ? ನೀವು ಮತ್ತೆ ಆಧಾರರಹಿತ ಕಾಮೆಂಟ್‍ಗಳನ್ನು ಮಾಡಿದರೆ, ನಾನು ನಿಜಾಮಾಬಾದ್ ಕ್ರಾಸ್‍ರೋಡ್‍ನಲ್ಲಿ ನಿಮಗೆ ಚಪ್ಪಲಿಯಿಂದ ಹೊಡೆಯುತ್ತೇನೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಗುರುವಾರ ಅರವಿಂದ್ ಅವರು ಸುದ್ದಿಗೋಷ್ಠಿ ವೇಳೆ, ಕವಿತಾ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಅವರು ಪಕ್ಷವನ್ನು ಬದಲಾಯಿಸದಿದ್ದರೆ ಅವರ ಮೇಲೆ ಇಡಿ ಮೂಲಕ ದಾಳಿ ನಡೆಸಲಾಗುತ್ತದೆ ಎಂಬ ಬೆದರಿಕೆ ಕುರಿತ ವರದಿಯೊಂದನ್ನು ಉಲ್ಲೇಖಿಸಿ ಮಾತನಾಡುತ್ತಾ, ಸಿಎಂ “ತಮ್ಮ ಮಗಳನ್ನು ವ್ಯಾಪಾರ ಮಾಡುತ್ತಿದ್ದಾರೆ ಎಂಬ ಅವಹೇಳನಕಾರಿ ಹೇಳಿಕೆ ನೀಡಿದ್ದರು.