ಪೊಳಲಿ: ಶ್ರೀ ಅಖಿಲೇಶ್ವರ ಓಂಕಾರ ಭಜನಾ ಮಂಡಳಿ ಪೊಳಲಿ ಇದರ ವತಿಯಿಂದ ಶ್ರೀ ಅಖಿಲೇಶ್ವರ ದೇವಸ್ಥಾನದಲ್ಲಿ ನ.19ರಂದು ಶನಿವಾರ ಏಳನೇ ವರ್ಷದ ವಿವಿಧ ಭಜನಾ ಮಂಡಳಿಗಳಿಂದ 24 ಗಂಟೆಗಳ ಅಹೋರಾತ್ರಿ ಏಕಹಾ ಭಜನಾ ಮಹೋತ್ಸವ ನಡೆಯಲಿದೆ ಎಂದು ಯಶೋಧರ ಅಡ್ಡೂರು ಹೇಳಿದರು.

ನ.12 ರಿಂದ ನ.18 ರವರೆಗೆ ವಿವಿಧ ಭಜನಾ ಮಂಡಳಿಗಳಿಂದ 7 ದಿನಗಳ ಕಾಲ ಸಂಧ್ಯಾ ಭಜನೆ ನಡೆಸಲಾಗುವುದು. ನ.19 ರಂದು ಬೆಳಿಗ್ಗೆ 10 ಗಂಟೆಗೆ ಸತ್ಯನಾರಾಯಣ ಪೂಜೆ ನಡೆಯಲಿದೆ ಎಂದು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಯಶೋಧರ ಅಡ್ಡೂರು ತಿಳಿಸಿದರು.
ನ.20 ರಂದು ಆನಂದ ಭಜನೆ ನಡೆಯಲಿದ್ದು, ನ.21 ರಂದು ವಾರದ ಭಜನೆ ನಡೆಯಲಿದೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮುರಳಿ ದೇವಾಡಿಗ ಪೊಳಲಿ, ಸುಮಂತ್ ರಾಜ್ ಪೊಳಲಿ, ಸದಾಶಿವ ಮೊಯಿಲಿ, ಬೆಂಜನಪದವು ಉಪಸ್ಥಿತರಿದ್ದರು.
