ಶ್ರೀ ಕ್ಷೇತ್ರ ಪೊಳಲಿಗೆ ಕಾಂತಾರ ಚಿತ್ರದ ನಟಿ ಸಪ್ತಮಿ ಗೌಡ ಭೇಟಿ
ಪೊಳಲಿ: ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಕಾಂತಾರ ಸಿನಿಮದ ಚಿತ್ರನಟಿ ಸಪ್ತಮಿ ಗೌಡ ನ.೧೬ರಂದು ಬುಧವಾರ ಮುಂಜಾನೆ ದೇವರ ದರ್ಶನ ಪಡೆದರು.
ಪೂಜೆ ಸಲ್ಲಿಸಿದರು. ದೇವಳದ ಅರ್ಚಕ ಪದ್ಮನಾಭ ಭಟ್ ಪ್ರಸಾದ ನೀಡಿದರು. ಸಪ್ತಮಿ ಗೌಡ ಅವರ ತಾಯಿ ಶಾಂತ, ಕಾಂತಾರ ತಂಡದ ಗುರು ಸನಿಲ್ ಅವರೊಂದಿಗಿದ್ದರು. ದೇವರ ದರ್ಶನ ಪಡೆದ ಬಳಿಕ ಸುದ್ದಿ9 ಜೊತೆ ಮಾತನಾಡಿದ ಅವರು “ದೈವ ದೇವರುಗಳ ದಯೆಯಿಂದಲೇ ದೇಶದಲ್ಲಿಯೇ ಕಾಂತಾರ ಪಿಲ್ಮ್ ಗೆ ಪ್ರಸಿದ್ದಿ ಪಡೆದ ಕಾರಣದಿಂದಲೇ ತುಳು ನಾಡಿನ ಎಲ್ಲಾ ದೈವ ದೇವರುಗಳ ದರ್ಶನ ಮಾಡಿ ಆಶೀರ್ವಾದ ಪಡೆಯಲು ಬಂದಿದ್ದೇನೆ” ಎಂದರು.