ಪೊಳಲಿ: ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಪೊಳಲಿಯಲ್ಲಿ ಅಪ್ಪದ ಪೂಜೆ, ಓಕುಳಿ ಭಜನೆಯ ವಿಶೇಷತೆ
ಪೊಳಲಿ: ಇತಿಹಾಸ ಪ್ರಸಿದ್ದ ಪುಣ್ಯ ಶ್ರೀ ಕ್ಷೇತ್ರ ಪೊಳಲಿ ಶ್ರೀರಾಜರಾಜೇಶ್ವರೀ ದೇವಳದಲ್ಲಿ ವೃಶ್ಚಿಕ ಮಾಸದಲ್ಲಿ ನಡೆಯುವ ಅಪ್ಪದ ಪೂಜೆ ಬಹಳ ವಿಶೇಷ ಹಿಂದಿನ ಕಾಲದಲ್ಲಿ ಬರಗಾಲ ದಿಂದ ಕ್ರಷಿ ಚಟುವಟಿಕೆಗಳು ನಡೆಯದಿದ್ದಾಗ ಸಾವಿರ ಸೀಮೆಯ ಭಕ್ತರು ಸೇರಿ ಶ್ರೀ ದೇವಿಯಲ್ಲಿ ಪ್ರಾರ್ಥಿಸಿ ಕೃಷಿ ಭತ್ತ ಬೆಳೆಯು ಸರಿಯಾಗಿ ಬಂದರೆ ಬೆಳೆಯಲ್ಲಿ ಒಂದಂಶ ದಿಂದ ದೇವರಿಗೆ ಅಪ್ಪವನ್ನು ಮಾಡಿ ದೇವರಿಗೆ ಅರ್ಪಿಸುತ್ತೆವೆ ಎಂದು ಪ್ರಾರ್ಥನೆ ಸಲ್ಲಿಸುತ್ತಾರೆ.
ನಂತರ ಭಕ್ತರು ಅವರವರ ಜಮೀನಿನಲ್ಲಿ ಕೃಷಿ ಬೆಳೆಗಳನ್ನು ಮಾಡಿ ಕೃಷಿ ಬೆಳೆಯಲ್ಲಿ ಬಂದ ಒಂದಂಶವನ್ನು ದೇವಳಕ್ಕೆ ಒಪ್ಪಿಸಿ ರಸೀದಿ ಪಡೆದು ಅಪ್ಪದ ಪೂಜೆಯ ದಿನ ದೇವರಿಗೆ ಅಪ್ಪವನ್ನು ಸಮರ್ಪಿಸಿ ಸಾವಿರ ಸೀಮೆಯ ಭಕ್ತಾಗಳು ಅಪ್ಪ ಸ್ವೀಕರಿಸುವ ಪ್ರತೀತಿ ಇತ್ತು .ಪೊಳಲಿ ಕ್ಷೇತ್ರದ ಸಾವಿರ ಸೀಮೆಯ ಭಕ್ತರ ಸಮಸ್ತರ ಪಾಲ್ಗೊಳ್ಳುವಿಕೆಯಲ್ಲಿ ಅಪ್ಪದಸೇವೆಯು ನಡೆಯತ್ತ ಬಂದಿದೆ. ಇಲ್ಲಿಯ ಅಪ್ಪದ ಸೇವೆಯು ಬಹಳ ಮಹತ್ವವಿದೆ, ವಿವಿಧ ರೀತಿಯ ಅಕ್ಕಿಗಳನ್ನು ಭಕ್ತಾಗಳು ತರುವುದರಿಂದ ಅದನ್ನು ದೇವಳದಲ್ಲಿ ಉಪಯೋಗಿಸಲು ಅಸಾಧ್ಯವಾದುದರಿಂದ ಈ ಭಾರಿ ಕೃಷಿಕರು ಒಂದು ಮುಡಿ ಸಾಗುವಳಿದಾರರು 50 ರೂಪಾಯಿಯನ್ನು ಕೊಟ್ಟು ಅಪ್ಪವನ್ನು ಸ್ವೀಕರಿಸುತ್ತಾರೆ. ನ4ರಂದು ಶನಿವಾರ ಬೆಳಗ್ಗೆ ಸನ್ನಿಧಿಯಲ್ಲಿ ಏಕಾಹಭಜನೆ ಆರಂಭಗಳ್ಳುತ್ತದೆ.
ಅಪ್ಪ ತಯಾರಿಕೆಗೆ ಮುಹೂರ್ತ.
ನೂಯಿ ಕಾಂಜಿಲಕೋಡಿ ಚಂದ್ರಶೇಖರ ರಾವ್ ಅವರ ಮಾರ್ಗದರ್ಶನದಲ್ಲಿ ಸುಮಾರು 30 ಬ್ರಾಹ್ಮಣರು ಏಳೆಂಟು ಕಾವಲಿಯಲ್ಲಿ ಅಪ್ಪ ತಯಾರಿಕೆಯಲ್ಲಿ ತೊಡಗುತ್ತಾರೆ. 12 ಕ್ವಿಂಟಾಲ್ ಬೆಳ್ತಿಗೆ ಹಕ್ಕಿಯಿಂದ 50 ಸಾವಿರದಷ್ಟು ಅಪ್ಪ ತಯಾರಿಸುತ್ತಾರೆ. ರಾತ್ರಿ ದೇವಳದ ಅರ್ಚಕರು ಹಾಗು ಗುತ್ತಿನವರ ಸಮಕ್ಷಮದಲ್ಲಿ ವಾದ್ಯ ಗೋಷ್ಟಿಯೊಂದಿಗೆ ತಯಾರಾದ ಅಪ್ಪಗಳನ್ನು ರಾತ್ರಿ ಶ್ರೀದೇವಿಗೆ ಅಪ್ಪ ಸಮರ್ಪಿಸಿ ಮಹಾಪೂಜೆಯ ಬಳಿಕ ಅಪ್ಪಗಳನ್ನು ಭಕ್ತಾದಿಗಳ ನೆರವಿನಿಂದ ಲಕೋಟೆಯಲ್ಲಿ ಹಾಕಿ ಸಿದ್ದ ಮಾಡುತ್ತಾರೆ ನಂತರ ದೇವರ ಬಲಿ ಹೊರಟ ನಂತರ ಪ್ರಸಾದ ವಿತರಣೆಯನ್ನು ಮಾಡುತ್ತಾರೆ .
ಆದರೆ ಈ ಭಾರಿ ದೇವರು ಬಾಲಾಲಯದಲ್ಲಿದ್ದ ಕಾರಣ ಕೆಲವೊಂದು ನಿಯಮಗಳನ್ನು ಕಟ್ಟುಕಟ್ಟಲೆ ಪ್ರಕಾರಮಾಡಲಾಗುವುದು ಎನ್ನುತ್ತಾರೆ ಇಲ್ಲಿಯ ಮುಖ್ಯಸ್ಥರು.
ಅಪ್ಪ ಪ್ರಸಾದ ಸ್ವೀಕರಿಸಿದ ಭಕ್ತರಲ್ಲಿ ಅದೇನೊ ದನ್ಯತಾಭಾವ ಮೂಡುವುದು ಕಾಣಿಕೆ ಸಮರ್ಪನೆ ಅಪ್ಪದ ಪೂಜೆಗೆ ಸಂಭದಪಟ್ಟ ಸಾವಿರ ಸೀಮೆಯಮಂದಿ ಕಾಣಿಕೆ, ವಂತಿಗೆಯನ್ನು ನೀಡಿ ಅಪ್ಪದ ಪೂಜೆ ಮಾಡಿಸಿ ಪ್ರಸಾದ ಸ್ವೀಕರಿಸಲು ಜನ ಉತ್ಸಾಹದಿಂದ ಕಾಯುತ್ತಾರೆ.
